ಸರ್ಕಾರಿ ಶಾಲೆಗಳ ಶೇ.40 ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ

–  ಸಿಎಜಿ ಸಮೀಕ್ಷಾ ವರದಿ ಸಂಸತ್​ಗೆ ಸಲ್ಲಿಕೆ

ನವ ದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಯೋಜನೆಯ ಭಾಗವಾಗಿ ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸುಮಾರು 1.4 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಸಾರ್ವಜನಿಕ ವಲಯದ ಘಟಕಗಳು ಹೇಳಿಕೊಂಡಿವೆ. ಆದರೆ, ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಸಮೀಕ್ಷೆ ನಡೆಸಿದ್ದು, ಶೌಚಾಲಯಗಳ ಪೈಕಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ ಅಥವಾ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು ಬಳಕೆಯಾಗುತ್ತಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಿಎಜಿ ಶೇ.70 ಕ್ಕಿಂತಲೂ ಹೆಚ್ಚು ಶಾಲಾ ಶೌಚಾಲಯಗಳು ನೀರಿನ ಸೌಲಭ್ಯಗಳನ್ನು ಹೊಂದಿಲ್ಲ. ಅಲ್ಲದೆ, ಶೇ.75 ರಷ್ಟು ಶೌಚಾಲಯಗಳು ಆರೋಗ್ಯಕರವಾಗಿಲ್ಲ ಎಂದು ವರದಿ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದು, ಮೂಲಕ ಶಾಲಾ ಮಕ್ಕಳ ಆರೋಗ್ಯ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.

ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂಬ ಶಿಕ್ಷಣ ಹಕ್ಕು ಕಾಯ್ದೆಯ ಆದೇಶವನ್ನು ಪೂರೈಸುವ ಸಲುವಾಗಿ 2014 ರ ಸೆಪ್ಟೆಂಬರ್​ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ವಾಚ್ ವಿದ್ಯಾಲಯ ಅಭಿಯಾನವನ್ನು ಪ್ರಾರಂಭಿಸಿತ್ತು. ಮೀಸಲಾದ ನಿಧಿಯ ಕೊರತೆ, ಕಳಪೆ ನಿರ್ವಹಣೆ ಮತ್ತು ಶೌಚಾಲಯಗಳಲ್ಲಿ ನೀರಿನ ಲಭ್ಯತೆಯು ಪ್ರಮುಖ ಸವಾಲುಗಳೆಂದು ಈ ವೇಳೆ ಗುರುತಿಸಲ್ಪಟ್ಟಿತು. ಅಲ್ಲದೆ, ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೂ ಸರ್ಕಾರ ಮುಂದಾಗಿತ್ತು. ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು (ಸಿಪಿಎಸ್ಇ) ಒಂದು ವರ್ಷದ ಅವಧಿಯಲ್ಲಿ ಈ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದ್ದವು.

ಭೌತಿಕ ಸಮೀಕ್ಷೆ

ದೇಶದಲ್ಲಿ 10.8 ಲಕ್ಷ ಸರ್ಕಾರಿ ಶಾಲೆಗಳಿವೆ. ಆದರೆ, ಈವರೆಗೆ ಒಟ್ಟಾರೆಯಾಗಿ 1.4 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು 53 ಸಿಪಿಎಸ್ಇಗಳು ನಿರ್ಮಿಸಿವೆ. ವಿದ್ಯುತ್, ಕಲ್ಲಿದ್ದಲು ಮತ್ತು ತೈಲ ಕಂಪನಿಗಳು ಈ ಕೆಲಸಕ್ಕೆ ಗಮನಾರ್ಹವಾದ ಕೊಡುವೆ ನೀಡಿವೆ. ಈ ನಡುವೆ ಸಿಎಜಿ ಲೆಕ್ಕಪರಿಶೋಧನೆಯು 15 ರಾಜ್ಯಗಳಲ್ಲಿ ಈ ಕಂಪನಿಗಳು ನಿರ್ಮಿಸಿದ 2,695 ಶೌಚಾಲಯಗಳ ಮಾದರಿಯ ಭೌತಿಕ ಸಮೀಕ್ಷೆಯನ್ನು ನಡೆಸಿತ್ತು.

ಆದರೆ, ಮಾದರಿಯಾಗಿ ಆಯ್ಕೆ ಮಾಡಿಕೊಂಡಿದ್ದ 2,695 ಶೌಚಾಲಯಗಳ ಪೈಕಿ 83 ಶೌಚಾಲಯಗಳನ್ನು ಈವರೆಗೆ ನಿರ್ಮಿಸಿಯೇ ಇಲ್ಲ. ನಿರ್ಮಿಸಲಾಗಿದೆ ಎಂದು ವರದಿಯಾಗಿರುವ 200 ಶೌಚಾಲಯಗಳು ಅಸ್ಥಿತ್ವದಲ್ಲೇ ಇಲ್ಲ. 86 ಶೌಚಾಲಯಗಳು ಭಾಗಶಃ ನಿರ್ಮಾಣವಾಗಿವೆಯೇ ವಿನಃ ಪೂರ್ಣಗೊಂಡಿಲ್ಲ. 691 ಶೌಚಾಲಯಗಳಲ್ಲಿ ಸೂಕ್ತ ನೀರಿನ ವ್ಯವಸ್ಥೆಯೇ ಇಲ್ಲ.

ಇನ್ನೂ ಅನೇಕ ಶೌಚಾಲಯಗಳ ನಿರ್ಮಾಣವಾಗದ ಕಾರಣ ಅವನ್ನು ಲಾಕ್ ಮಾಡಿ ಇಡಲಾಗಿದೆ. ಅಥವಾ ನಾನಾ ಕಾರಣಗಳಿಂದಾಗಿ ಬಳಕೆಯಲ್ಲೇ ಇಲ್ಲ ಎಂದು ಆಡಿಟ್ ವರದಿ ಸಂಸತ್​ಗೆ ತಿಳಿಸಿದೆ. ಆದ್ದರಿಂದ, ಸುಮಾರು ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ ಎಂಬ ವಿಚಾರ ಈ ವರದಿಯಿಂದ ಇದೀಗ ಬಹಿರಂಗಗೊಂಡಿದೆ.

ಕ್ರಿಯಾತ್ಮಕ ಶೌಚಾಲಯಗಳಿಲ್ಲ:ಸಮೀಕ್ಷೆ ನಡೆಸಿದ 1,967 ಸಹಶಿಕ್ಷಣ ಶಾಲೆಗಳ ಪೈಕಿ 99 ಶಾಲೆಗಳಲ್ಲಿ ಯಾವುದೇ ಕ್ರಿಯಾತ್ಮಕ ಶೌಚಾಲಯಗಳಿಲ್ಲ. 436 ರಲ್ಲಿ ಕೇವಲ ಒಂದು ಶಾಲೆಯಲ್ಲಿ ಮಾತ್ರ ಕ್ರಿಯಾತ್ಮಕ ಶೌಚಾಲಯವಿದೆ. ಇನ್ನೂ ಬಾಲಕರ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸುವ ಉದ್ದೇಶವು ಶೇ.27 ರಷ್ಟು ಶಾಲೆಗಳಲ್ಲಿ ಈಡೇರಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳ ನಡವಳಿಕೆಯನ್ನು ಪರಿಣಾಮಕಾರಿಯಾಗಿ ಬದಲಾಯಿಸುವ ಸಲುವಾಗಿ ಯೋಜನೆಯ ಮಾನದಂಡಗಳ ಅನ್ವಯ ಸಿಪಿಎಸ್ಇಗಳಿಂದ ನಿರ್ಮಿಸಲಾಗುವ ಶೌಚಾಲಯಗಳಲ್ಲಿ ನೀರು ಮತ್ತು ಕೈ ತೊಳೆಯುವ ಸೌಲಭ್ಯಗಳೊಂದಿಗೆ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ವಾರ್ಷಿಕ ವೆಚ್ಚವನ್ನು ತಮ್ಮ ಸಿಎಸ್ಆರ್ ಬಜೆಟ್ಗಳಿಗೆ ವಿಧಿಸುವಾಗ ಶೌಚಾಲಯಗಳನ್ನು ಮೂರರಿಂದ ಐದು ವರ್ಷಗಳವರೆಗೆ ನಿರ್ವಹಿಸುವುದು ಅಗತ್ಯವಾಗಿತ್ತು.
ಆದಾಗ್ಯೂ, ಶೇ.72 ರಷ್ಟು ಶೌಚಾಲಯಗಳು ಸೂಕ್ತ ನೀರಿನ ಸೌಲಭ್ಯವನ್ನು ಹೊಂದಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ ಈ ಪೈಕಿ ಶೇ.55 ಶೌಚಾಲಯಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಸೌಲಭ್ಯವಿಲ್ಲ. “ಶೌಚಾಲಯಗಳ ದೋಷಯುಕ್ತ ನಿರ್ಮಾಣ, ಅಡಿಪಾಯ, ರಾಂಪ್, ಮೆಟ್ಟಿಲುಗಳನ್ನು ಒದಗಿಸದಿರುವುದು ಮತ್ತು ಹಾನಿಗೊಳಗಾದ ಉಕ್ಕಿ ಹರಿಯುವ ಲೀಚ್ ಪಿಟ್​ಗಳನ್ನು ಶೌಚಾಲಯದಲ್ಲಿ ಅಳವಡಿಸಿರುವ ಪರಿಣಾಮ ಇವು ಉಪಯೋಗಕ್ಕೆ ಅನರ್ಹವಾಗಿದೆ” ಎಂದು ಆಡಿಟ್ ವರದಿ ಸಂಸತ್ತಿನ ಗಮನ ಸೆಳೆದಿದೆ.

ನಿರ್ವಹಣೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶೇ.75 ರಷ್ಟು ಶೌಚಾಲಯಗಳನ್ನು ದಿನಕ್ಕೆ ಒಮ್ಮೆಯಾದರೂ ಶುಚಿಗೊಳಿಸುವ ರೂಢಿಯನ್ನು ಅನುಸರಿಸಿಲ್ಲ. 715 ಶೌಚಾಲಯಗಳನ್ನು ಶುಚಿಗೊಳಿಸುವುದನ್ನೇ ನಿಲ್ಲಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಆದರೆ 1,097 ಶೌಚಾಲಯಗಳನ್ನು ವಾರಕ್ಕೆ ಎರಡು ರಿಂದ ತಿಂಗಳಿಗೊಮ್ಮೆ ಎಂಬಂತೆ ಆವರ್ತನೆಯ ಮೇಲೆ ಶುಚಿಗೊಳಿಸಲಾಗುತ್ತಿದೆ. ಇದಲ್ಲದೆ, ಶೌಚಾಲಯಗಳಲ್ಲಿ ಸೋಪ್, ಬಕೆಟ್, ಕ್ಲೀನಿಂಗ್ ಡಿಟರ್ಜೆಂಟ್ ಮತ್ತು ಸೋಂಕು ನಿವಾರಕಗಳನ್ನು ಒದಗಿಸದಿರುವ ಪ್ರಕರಣಗಳು ಮತ್ತು ಅಸಮರ್ಪಕ ಸ್ವಚ್ಚತೆಯ ಪ್ರಕರಣಗಳು ಸಹ ಗಮನಕ್ಕೆ ಬಂದಿವೆ ಎಂದು ವರದಿ ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *