ದಾವಣಗೆರೆ ಸಂಘಪರಿವಾರದ ಪ್ರಯೋಗ ಶಾಲೆ ಹಾಗೂ ಶ್ರಮಜೀವಿ ಮರಾಠಿಗರು

ಕೆ.ಮಹಾಂತೇಶ್
ದಾವಣಗೆರೆಯ ಮರಾಠಿ ಸಮುದಾಯ ಜನರು ಮೊದಲಿನಿಂದಲೂ ಶ್ರಮಜೀವಿಗಳು ನಿತ್ಯ ಅನ್ನಕ್ಕಾಗಿ ದುಡಿದೇ ತಿನ್ನುವ  ಅವರು ಮಹಾರಾಷ್ಟ್ರ ಬರಪೀಡಿತ ಜಿಲ್ಲೆಗಳಿಂದ ದಾವಣಗೆರೆ ಜವಳಿಗಿರಣಿಗಳಿಗೆ ಕೂಲಿಯನ್ನು ಅರಸಿ ಬಂದಂತವರು ದಾವಣಗೆರೆ ಮಿಲ್ ಮಾಲೀಕರ ಶೋಷಣೆ ವ್ಯವಸ್ಥೆ ಯಿಂದ ರೋಷಿದ್ದ ಅವರಿಗೆಲ್ಲ ಸಹಜವಾಗಿ ಕಾರ್ಮಿಕ ಚಳವಳಿ ಜತೆ ಸೇರಿ ಹೋರಾಟ ನಡೆಸಿದವರು

ಅನೇಕ ಜನ ಕರಾವಳಿ ಸಂಘಪರಿವಾರದ ಪ್ರಯೋಗಶಾಲೆಯಾಗಿದೆ ಎಂದು ಪದೇ ಪದೇ ಮಾತನಾಡುವುದನ್ನು ಹಲವಾರು ಸಭೆಯಲ್ಲಿ ಕೇಳಿದ್ದೇನೆ. ಆದರೆ ಹಾಗೆ ಮಾತನಾಡುವ ಬಹುತೇಕರಿಗೆ ಸಂಘಪರಿವಾರ ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ನಡೆಸಿರುವ ಕೋಮುಗಲಭೆಗಳ ಇತಿಹಾಸ ತಿಳಿದೆ ಇಲ್ಲ ಅಥವಾ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿಲ್ಲ ಎನ್ನುವ ಅಂಶಗಳನ್ನು ಅವರ ಮಾತುಗಳಿಂದ ಆಗಾಗ ವ್ಯಕ್ತಗೊಳ್ಳುತ್ತಿದೆ.

ಹಾಗೆಯೇ 2022 ರ ಗುಜರಾತ್ ಮಾದರಿಗಿಂತ ಮೊದಲೇ ಸಂಘಪರಿವಾರ ದಾವಣಗೆರೆಯಲ್ಲಿ ಹೇಗೆ ಕೋಮು ಗಲಭೆಗಳ ಮಾದರಿಯನ್ನು ಹುಟ್ಟು ಹಾಕಿತ್ತು ಎನ್ನುವ ಅಂಶಗಳನ್ನು  ನಾನು ಸ್ವತಃ 2002 ರಲ್ಲಿ ಕರ್ನಾಟಕ ಗೃಹ ಸಚಿವರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಂದಿನ ಮುಖ್ಯಮಂತ್ರಿ ಶ್ರೀ ಎಸ್.ಎಂ ಕೃಷ್ಣಾ ಅವರ ಸಮ್ಮುಖದಲ್ಲೇ ವಿವರವಾಗಿ ಬಿಡಿಸಿ ಹೇಳಿದ್ದೇ. ದಾವಣಗೆರೆ

2002 ರಲ್ಲಿ ಗೋದ್ರಾ ರೈಲು ದುರಂತ ನಡೆದಾಗ ಕರ್ನಾಟಕದಲ್ಲಿ ಸಂಘಪರಿವಾರ ಶಕ್ತಿಗಳು ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ನಡೆಸುವ ಸಂಭವ ಇರುವುದರಿಂದ ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಅಂದು ಮಾಜಿ ಪೊಲೀಸ್ ಕಮಿಷನರ್ ಶ್ರೀ ರೇವಣಸಿದ್ದಯ್ಯ ನೇತೃತ್ವದಲ್ಲಿ  ಸಭೆ ನಡೆಸಿ ಬಳಿಕ ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು.

ದಾವಣಗೆರೆ ಗಲಭೆಯ ಇತಿಹಾಸ; 1989 ರಾಮಮಂದಿರ ಇಟ್ಟಿಗೆ ಮೆರವಣಿಗೆ ಸಂದರ್ಭದಲ್ಲಿ ನಡೆಸಿದ ಕೋಮುಗಲಭೆ ನಿಯಂತ್ರಣ ಹೆಸರಲ್ಲಿ ನಡೆದ ಪೊಲೀಸ್ ಗೋಲಿಬಾರ್ ಗೆ ಬಲಿಯಾಗಿದ್ದು 17 ಅಮಾಯಕ ಜೀವಗಳು

ಅದಾದ ನಂತರ ಸತತವಾಗಿ ವರ್ಷ ಎರಡು ವರ್ಷಗಳಿಗೊಮ್ಮೆ ಅಲ್ಪಸಂಖ್ಯಾತರ ಮೇಲೆ ವಿವಿಧ ಸ್ವರೂಪದ ದಾಳಿಗಳನ್ನು ಹರಿಬಿಡಲಾಗಿದೆ ನಿಟುವಳ್ಲಿ ಪ್ರದೇಶದಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಿ ಬೆತ್ತಲೆ ಮಾಡಿದ್ದು, ಎವಿಕೆ ಕಾಲೇಜು ರಸ್ತೆಯಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಮೊದಲಾದವುಗಳು 1992 ರ ಡಿಸೆಂಬರ್6 ರಂದು ಪ್ರಗತಿಪರ ಸಂಘಟನೆಗಳು ಒಂದು ಪ್ರಾಯಶ್ಚಿತ್ತ ಧರಣಿ ನಡೆಸಿದೆವು ಆಗ ಇನ್ನೂ ಮೀಸೆ ಚಿಗುರದ ಇಬ್ಬರು ಎಳೆ ಹುಡುಗರು ಬಂದು ನಾವು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಈ ಧರಣಿಯಲ್ಲಿ ಭಾಗವಹಿಸುವುದಾಗಿ ಬಂದಿದ್ದರು ಅವರನ್ನು ಬಳಸಿ ಸಂಘಪರಿವಾರವರು ನಡೆಸಿದ ದಾಳಿಗಳು ಒಂದೆರಡಲ್ಲ…

1997 ರಲ್ಲಿ ನಾನು ಆಗಷ್ಟೇ ವಕೀಲನಾಗಿ ವೃತ್ತಿ ಆರಂಭಿಸಿದ್ದೇ ಆಗ ನಮ್ಮ‌ಸೀನಿಯರ್ ದಾವಣಗೆರೆ ಹೆಸರಾಂತ ಕ್ರಿಮಿನಲ್ ವಕೀಲರು ಅವರ ಬಳಿ ಒಂದು ಕೇಸು ಬಂತು. ಅದು ಕಲಾವಿದ ರಾಜುತಾಳಿಕೋಟೆ ಮೇಲೆ ನಡೆದ ಮಾರಣಾಂತಿಕ ದಾಳಿಯಾಗಿತ್ತು. ಯಾಕೆಂದರೆ ರಾಜು ತಾಳಿಕೋಟೆ ದಾವಣಗೆರೆಯಲ್ಲಿ ನಾಟಕ ಕಂಪನಿಯಲ್ಲಿ ಪ್ರದರ್ಶಿಸುತ್ತಿದ್ದ ನಾಟಕದಲ್ಲಿ ಕುಡುಕನ ಪಾತ್ರ ನಿರ್ವಹಿಸುತ್ತಾ ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ಅಗತ್ಯ ಮತ್ತು ಕೋಮು ಹಿಂಸಾಚಾರದಿಂದ ಆಗುವ ಪರಿಣಾಮಗಳ ಬಗ್ಗೆ ಮನೋಜ್ಞವಾಗಿ ಹಾಸ್ಯಭರಿತ ಡೈಲಾಗ್ ಮೂಲಕ ವೀಕ್ಷಕರನ್ನು ಎಚ್ಚರಿಸುತ್ತಾ ಯಶಸ್ವಿ ಪ್ರದರ್ಶನ ನೀಡುತ್ತಿದ್ದರು. ಆದರೆ ಅದು ಸಂಘಪರಿವಾರ ಕ್ಕೆ ಮೆಣಸಿನ ಕಾಯಿ ಹಾಕಿದ ಹಾಕಿತ್ತು ಇಧರಿಂದ ಅಮಾಯಕ ಹುಡುಗರನ್ನು ಎತ್ತಿಕಟ್ಟಿ ಅವರ ಮೇಲೆ ದಾಳಿ ನಡೆಸಲು ಪ್ರಚೋದಿಸಿ ದಾಳಿ ಹರಿಬಿಟ್ಟಿದ್ದರು. ವಿಶೇಷವೆಂದರೆ ಆ ಹುಡುಗರು ನಾನು ರೂಂ ಮಾಡಿಕೊಂಡಿದ್ದ ಕೆ.ಟಿ.ಜೆ ನಗರದ 10 ನೇ ಕ್ರಾಸ್‌ ನಾಯಕ ಜಾತಿ ಸೇರಿದವರಾಗಿದ್ದರು.ಯಾರದೋ ಮಾತು ಕೇಳಿ ದಾಳಿ ನಡೆಸಿದ್ದ ಆ ಹುಡುಗರು ಅವರ ಕುಟುಂಬದ ವರು ಕೊನೆಗೆ ಪರಿತಪಿಸುವ ಸ್ಥಿತಿ ತಲುಪಿದ್ದರು.

ಗೌರಿ ಲಂಕೇಶ ಆಯೋಜಿಸಿದ್ದ ಸಭೆಯಲ್ಲಿ ಯೋಗೀಶ್ ಮಾಸ್ಟರ್ ಅವರಿಗೂ ಕಪ್ಪು ಮಸಿ ಎಸೆದಿದ್ದು ಶಿವನಕೆರೆ ಬಸಲಿಂಗಪ್ಪನ ಮನೆ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದು ಇಂತಹ ಕೃತ್ಯಗಳನ್ನು ಅಮಾಯಕ ನಡೆಸಿದ್ದರೂ ಅವರ ಹಿಂದೆ ಇದಿದ್ದು ಸಂಘಪರಿವಾರವೇ ಎನ್ನುವುದರಲ್ಲಿ ಅನುಮಾನವೇ ಇಲ್ಲ… ದಾವಣಗೆರೆ

ಇದನ್ನೂ ಓದಿಮಕ್ಕಳ ವಿದ್ಯಾರ್ಥಿ ವೇತನ ಹಣ ನುಂಗಲು ನಾಚಿಕೆ ಇಲ್ಲವೇ?- ಕಟ್ಟಡ ಕಾರ್ಮಿಕರ ಆಕ್ರೋಶ

ಶ್ರಮಜೀವಿ ಮರಾಠಿಗರು

ದಾವಣಗೆರೆಯ ಮರಾಠಿ ಸಮುದಾಯ ಜನರು ಮೊದಲಿನಿಂದಲೂ ಶ್ರಮಜೀವಿಗಳು ನಿತ್ಯ ಅನ್ನಕ್ಕಾಗಿ ದುಡಿದೇ ತಿನ್ನುವ  ಅವರು ಮಹಾರಾಷ್ಟ್ರ ಬರಪೀಡಿತ ಜಿಲ್ಲೆಗಳಿಂದ ದಾವಣಗೆರೆ ಜವಳಿಗಿರಣಿಗಳಿಗೆ ಕೂಲಿಯನ್ನು ಅರಸಿ ಬಂದಂತವರು ದಾವಣಗೆರೆ ಮಿಲ್ ಮಾಲೀಕರ ಶೋಷಣೆ ವ್ಯವಸ್ಥೆ ಯಿಂದ ರೋಷಿದ್ದ ಅವರಿಗೆಲ್ಲ ಸಹಜವಾಗಿ ಕಾರ್ಮಿಕ ಚಳವಳಿ ಜತೆ ಸೇರಿ ಹೋರಾಟ ನಡೆಸಿದವರು. ಕಮ್ಯೂನಿಸ್ಟ್‌ ಚಳವಳಿಯ ಬೆನ್ನೆಲುಬಾಗಿ ಹಲವು ವರ್ಷಗಳ ಕಾಲ ನಿಂತವರು.ಒಂದು ಕಾಲದಲ್ಲಿ ದಾವಣಗೆರೆ ಮರಾಠಿ ಪ್ರದೇಶಗಳೆಲ್ಲ ಗಿರಣಿ ಕಾರ್ಮಿಕರಿಂದ ತುಂಬಿ ಕಮ್ಯೂನಿಸ್ಟ್‌ ಪಕ್ಷದ ಬಲಿಷ್ಠ ಕೇಂದ್ರಗಳಾಗಿದ್ದವು.ಒಂದು ಕಾಲದಲ್ಲಿ ಮರಾಠಿ ಸಮುದಾಯದ ಜಯ್ಯಣ್ಣಜಾಧವ,ಶಶಿಕಲ ಬೆಳಗಲಿ,ಟಿ.ವಿ ಶಂಕರ್ ಮೊದಲಾದವರು ಕಮ್ಯೂನಿಸ್ಟ್‌ ಚಳವಳಿಯಲ್ಲಿ ಬೆಳೆದು ಬಂದ ನಾಯಕರಾಗಿದ್ದರು.

ಆದರೆ ಯಾವಾಗ ರಾಮಜನ್ಮಭೂಮಿ ವಿವಾದವನ್ನು ಸಂಘಪರಿವಾರ ತನ್ನ ಅಸ್ತ್ರವಾಗಿ ಬಳಸಿಕೊಂಡಿತೋ ಅಂದಿನಿಂದ ಸಹಜವಾಗಿಯೇ ಅನಕ್ಷರಸ್ಥ ಸಮುದಾಯದ ಅಸ್ಮೀತೆ ಸಂಕೇತವಾದ ಶಿವಾಜಿ ಮುಖವಾಡ ಬಳಸಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ದ ಎತ್ತಿಕಟ್ಟಿ ಅವರನ್ನು ತನ್ನ ಗಲಭೆಯ ದಾಳಗಳನ್ನಾಗಿ ಬಳಸಿಕೊಂಡಿತು, ಒಂದು ಕಾಲದಲ್ಲಿ ದಾವಣಗೆರೆ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ ಮರಾಠಿ ಸಮುದಾಯದ ಯುವಕರು ಇವತ್ತು ಕೋಮುವಾದಿಗಳ ಕಪಿಮುಷ್ಟಿಗೆ ಸಿಲುಕಿ ತಮ್ಮನ್ನು ತಾವೇ ಪ್ರಪಾತಕ್ಕೆ ಬೀಳುತ್ತಿರುವುದು ಅತ್ಯಂತ ದುರಂತವೇ ಸರಿ. ಇಂತಹ ಅಮಾಯಕ ಹುಡುಗರನ್ನು ಕೋಮು ವಿಷಜ್ವಾಲೆಯಿಂದ ಹೊರತರುವ ಪ್ರಯತ್ನವನ್ನು ದಾವಣಗೆರೆ ಮರಾಠಿ ಸಮುದಾಯ ಮಾಡಬೇಕಿದೆ. ದಾವಣಗೆರೆ

ದಾವಣಗೆರೆಯನ್ನು ತನ್ನ ಕಾರ್ಯಸೂಚಿಯನ್ನಾಗಿಸಿಕೊಂಡು ಸಂಘಪರಿವಾರ ತನ್ನ ಕೋಮು ಚಟುವಟಿಕೆಗ ವಿಸ್ತರಿಸಿ ಯಶಸ್ವಿಯೂ ಆಗಿತ್ತು ಆದರೆ ಕಳೆದ ಎರಡು ದಶಕಗಳಿಂದ ಈ ಭಾಗದ ಜನರು ಗಲಭೆಗಳಿಂದ ಪಾಠ ಕಲಿತು ಎಂತಹುದೇ ಸಂಧರ್ಭ ಎದುರಾದರೂ ಗಲಭೆಗಳಿಗೆ ಅಸ್ಪದೆ ನೀಡದೇ ಶಾಂತಿಯುತ ಸಹಬಾಳ್ವೆ ಜೀವ ನಡೆಸುತ್ತಿದ್ದಾರೆ ಆದರೆ ಸಂಘಪರಿವಾರ ಭಿತ್ತಿರುವ ಆ‌ ಕೋಮು ವಿಷ ಬೀಜಗಳು ಈಗಲೂ ಪದೇ ಪದೇ ಆಗಾಗ ಶಿವಾಜಿರಾವ್ ಜಾಧವ ಎನ್ನುವ ಅಮಾಯಕರ ಮೂಲಕ ವಿಷ‌ಕಕ್ಕಿಸುವ ಕೆಲಸ ಮಾಡಿಸುತ್ತಲೇ ಇರುತ್ತವೆ.ಹೀಗಾಗಿ ಶಿವಾಜಿರಾವ್ ಅನ್ನುವ ದಾರಿ ತಪ್ಪಿದ ಯುವಕನನ್ನು ನೋಡಿ ಇಡೀ ದಾವಣಗೆರೆ ಕೋಮುವಾದಿಕರಣಗೊಂಡಿದೆ ಅನ್ನುವ ಅಭಿಪ್ರಾಯಕ್ಕೆ ಬರುವುದು ಬೇಡ. ಯಾಕೆಂದರೆ ದಾವಣಗೆರೆ ಜನತೆ ಕಹಿಯ ಅನುಭವವನ್ನು ಹೆಚ್ಚಾಗಿಯೇ ಉಂಡವರು.

ಈ ವಿಡಿಯೋ ನೋಡಿಅಂಬೇಡ್ಕರ್ ನೆನಪು : ಅಂಬೇಡ್ಕರ ಮತ್ತು ಕಾರ್ಮಿಕರು – ಚಿಂತಕ ಕೆ. ಮಹಾಂತೇಶ್ ರವರ ವಿಶ್ಲೇಷಣೆಯಲ್ಲಿ

 

Donate Janashakthi Media

Leave a Reply

Your email address will not be published. Required fields are marked *