ಸನಾತನ ಶಿಕ್ಷಣ ಪದ್ದತಿ ಪ್ರತಿಪಾದಿಸುವ ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಿ

ಕೋಲಾರ : ಮನೋಧರ್ಮದ ಶಿಕ್ಷಣ ಪದ್ದತಿಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ  ಹೊರಟಿದ್ದು ಇದರ ಬಗ್ಗೆ ಎಚ್ಚರವಹಿಸುವ ಅವಶ್ಯಕತೆ ಇದೆ ಎಂದು ಚಿಂತಕ ಹ.ಮಾ. ರಾಮಚಂದ್ರ ಅಭಿಪ್ರಾಯ ಪಟ್ಟರು.

ನಗರದ ಲಯನ್ಸ್ ಭವನದಲ್ಲಿ ಗುರುವಾರ ಭಾರತ ವಿಧ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿಯಿಂದ ಹೊಸ ಶಿಕ್ಷಣ ನೀತಿ ಕುರಿತು ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಸನಾತನ ಮತ್ತು ಪ್ರಾಚೀನ ಶಿಕ್ಷಣ ಪದ್ದತಿಗಳನ್ನು ಜಾರಿಮಾಡಿ ಶ್ರೀಮಂತ ಪರಂಪರೆಯ ಮಾರ್ಗಸೂಚಿಗಳನ್ನು ತಂದು ಜಾತಿ ಅಸಮಾನತೆ ಅಸ್ಪೃಶ್ಯತೆಯನ್ನು ಜೀವಂತ ಗೊಳಿಸುವ ಶಿಕ್ಷಣವನ್ನು ತಂದಿದ್ದಾರೆ ಎಂದರು.

ಶಿಕ್ಷಣ ಸಮಾಜಿಕ ಪರಿವರ್ತನೆಯ ದೊಡ್ಡ ಸಾಧನ ಕಲಿಕೆಯ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುವಂತಿಲ್ಲ, ಶಿಕ್ಷಣ ತಜ್ಞರನ್ನು ಜೊತೆ ಚರ್ಚಿಸಿ ಜಾರಿ ಮಾಡಿಲ್ಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶದಂತೆ ಎಲ್ಲಾ ಶಿಕ್ಷಣ ನೀತಿಗಳನ್ನು ಜಾರಿಗೆ ತರುತ್ತಾ ಇದ್ದಾರೆ. ಉಚಿತ ಕಡ್ಡಾಯ ಶಿಕ್ಷಣ ಗಾಳಿಗೆ ತೂರಿ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ ನಾಗರಿಕ ಹಕ್ಕುಗಳನ್ನು ಸತ್ಯದ ಬಾಯಿಯನ್ನು ಮುಚ್ಚುವ ಕೆಲಸ ನಡೆಯುತ್ತಾ ಇದೆ ಎಂದರು.

ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಮಾತನಾಡಿದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಶಿಕ್ಷಣ ನೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಈ ಶೈಕ್ಷಣಿಕ ನೀತಿಗಳನ್ನು ಚರ್ಚೆಗೆ ಒಳಪಡಿಸಬೇಕು ಕೇಂದ್ರ ಸರ್ಕಾರ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ನಮ್ಮ ದೇಶದ ಈಗೀನ ಶಿಕ್ಷಣ ವ್ಯವಸ್ಥೆಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಪರಿಹಾರಗಳಿಲ್ಲ. ಬದಲಿಗೆ  2020 ಶಿಕ್ಷಣ ರಂಗವನ್ನು ತೀವ್ರಗತಿಯಲ್ಲಿ ಖಾಸಗೀಕರಣ, ಕೇಂದ್ರೀಕರಣ, ಕೋಮುವಾದೀಕರಣ ಗೊಳಿಸಲಿದೆ ಎಂದರು.

ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ಮಾರಾಟದ ಸರಕು ಆಗಲಿದೆ. ಕೊವೀಡ್ ನಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಬ್ದವಾಗಿರುವಾಗ ಈ ಮಹತ್ವವಾದ ಶಿಕ್ಷಣ ನೀತಿಯನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚೆ ನಡೆಸದೆಯೇ ಏಕಾಏಕಿ ಕೇಂದ್ರದ ಮಂತ್ರಿಮಂಡಲದಲ್ಲಿ ಅಂಗೀಕರಿಸಿರುವುದೇ ಸಂವಿಧಾನ ವಿರೋಧಿ ನಡೆಯಾಗಿದೆ.  ಮೋದಿ ಸರ್ಕಾರ ಇಷ್ಟೊಂದು ಅವಸರ ತೋರುತ್ತಿದೆ. ಈ ಕರಡನ್ನು ಸಂಪೂರ್ಣವಾಗಿ ಎಲ್ಲಾ  ಭಾಷೆಗಳಲ್ಲಿ ಅನುವಾದಗೊಂಡು ಸಾರ್ವಜನಿಕ ಚರ್ಚೆಗೆ ಬಿಟ್ಟಿಲ್ಲ. ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಸೂಚಿಸಿದ ತಿದ್ದುಪಡಿಗಳನ್ನು ಒಳಗೊಂಡಿಲ್ಲ.  2020 ನೀತಿ ಶಿಕ್ಷಣದ ಕುರಿತು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗಿರುವ ಹಕ್ಕುಗಳನ್ನು ಮೊಟಕುಗೊಳಿಸಿ ಇಡೀ ಎಲ್ಲಾ ಅಧಿಕಾರಗಳನ್ನು ಕೇಂದ್ರ ಸರ್ಕಾರವೇ ಇಟ್ಟುಕೊಂಡಿದೆ. ಇದು ವಿಶಾಲವಾದ, ವಿಭಿನ್ನ ಸಾಂಸ್ಕೃತಿಕ ಪರಂಪರೆ ಹೊಂದಿರುವ ಭಾರತದ ದೇಶದ ಹಿತಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಸಂಸತ್ತಿನಲ್ಲಿ ಈ ಮಸೂದೆ ಚರ್ಚೆಯಾಗದೇ ಅಂಗೀಕರಿಸಿರುವುದೇ ಅಪ್ರಜಾತಂತ್ರಕಾರಿ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ರಾಜಕೀಯ ಅಜೆಂಡಾವನ್ನು ಜಾರಿಗೊಳಿಸುವುದು ಎನ್‌ಇಪಿ ಜಾರಿಯ ಉದ್ದೇಶವಾಗಿದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಈಗಾಗಲೇ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳು ಇದನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿವೆ. ನಾಡಿನ ಭವಿಷ್ಯವನ್ನು ತೀರ್ಮಾನ ಮಾಡುವ ಈ ನೀತಿ ಎಲ್ಲರ ಅಭಿಪ್ರಾಯ ಒಳಗೊಂಡು ಸಮಗ್ರವಾಗಿರಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬೀರಾಜ್.ಎಸ್.ಎನ್ , ಜಿಲ್ಲಾ ಜಂಟಿ ಕಾರ್ಯದರ್ಶಿ ಅಂಕಿತಾ ಸ್ವಾಗತಿಸಿದರು. ಸಂವಾದದಲ್ಲಿ ಡಾ. ಕೆ.ವಿ.ನೇತ್ರಾವತಿ, ಶರಣಪ್ಪ ಗಬ್ಬೂರು, ಪಂಡಿತ್ ಮುನಿವೆಂಕಟಪ್ಪ,ಇಂಚರ ನಾರಾಯಣಸ್ವಾಮಿ, ಕೊಮ್ಮಣ್ಣ, ನಾಗರಾಜ್,  ವಿಜಯಕುಮಾರಿ, ಮೆಕಾನಿಕ್ ಶ್ರೀನಿವಾಸ್, ವಾಜಿದ್ ಪಾಷಾ, ಅಫ್ರೋಜ್ ಪಾಷಾ, ಸುಪ್ರೀಂ, ಅಂಗನವಾಡಿ ನೌಕರರ ಸಂಘದ ಮುಖಂಡರು ಮಂಜುಳಾ, ನಾಗರತ್ನಮ್ಮ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *