ಕೆ.ಎಸ್. ಪಾರ್ಥಸಾರಥಿ
ಮತ ಮತ್ತು ಧರ್ಮ ಪದಗಳ ಅರ್ಥ ಸ್ಪಷ್ಟವಾದ ಮೇಲೆ ,ಇನ್ನೊಂದು ಬಳಕೆಯ ಮಾತಿನತ್ತ ಗಮನಿಸಿ. ಅದು “ಮತಧರ್ಮ” ಪದ.ಈ ಪದವನ್ನು ಕೈಬಿಡಬೇಕು. ಇದು ಮತ ತಾನೇ ಧರ್ಮವೂ ಅಂತ ಹೇಳಿಕೊಳ್ಳುವ ಪ್ರಯತ್ನ. ಅದಕ್ಕೆ ಕಾರಣ ಸರಳ. ಎಲ್ಲ ಮತಗಳೂ ತಾವು ಧರ್ಮ ದ ಸ್ಥಾಪನೆಗಾಗಿಯೆ ಕಂಕಣಕಟ್ಟಿ ನಿಂತಿದ್ದೇವೆ ಎಂದು ಹೇಳುತ್ತಾ ಹೇಳುತ್ತಾ ತಮ್ಮ ತತ್ವವೆ ಧರ್ಮ; ತನ್ನ ಮತ ಹೇಳುವ ಧರ್ಮವೇ ಧರ್ಮ ಅಂತ ಹೇಳಿಕೊಳ್ಳುತ್ತವೆ. ಹೀಗಾಗಿ ವ್ಯಾಕರಣ ಬದ್ಧ ಅಲ್ಲದ “ಮತಧರ್ಮ” ಅನ್ನುವ ಪದ ಮಾಡಿಕೊಂಡಿವೆ. ಅದು ಕೇವಲ ನಿರಪಾಯೀ ಬಳಕೆ ಅಲ್ಲ; ದುರುದ್ದೇಶಪೂರ್ವಕ. ಅದು ತನ್ನ ಪಂಗಡಕಟ್ಟುವ ತತ್ತ್ವಕ್ಕೆ ಸಾರ್ವತ್ರಿಕ ಮನ್ನಣೆ ಪಡೆದ ಮತ್ತೊಂದು ಪದದ ದುರ್ಬಳಕೆ; ಅನುಯಾಯಿಗಳನ್ನು ನಂಬಿಸಿ ತಮ್ಮ ದಾರಿಗೆ ಸೆಳೆದುಕೊಳ್ಳುವ ತಂತ್ರಗಾರಿಕೆ.
ಧರ್ಮ ಪದವನ್ನು ಮತ ಪದಕ್ಕೆ ಪರ್ಯಾಯ ಎಂಬಂತೆ ಬಳಸಲಾಗುತ್ತಿದೆ. ಇದು ದೊಡ್ಡ ಪ್ರಮಾದ ಮತ್ತು ಆತಂಕಕಾರಿ. ಜಗತ್ತಿನ ಭಾಷೆಗಳು ನಮ್ಮ “ಧರ್ಮ” ಪದವನ್ನು ಬದಲಾಯಿಸದೆ, ಹಾಗೇ ತಮ್ಮ ಶಬ್ದಕೋಶಕ್ಕೆ ಸೇರಿಸಿಕೊಂಡಿವೆ. ಆ ಕೆಲಸ ಮಾಡಿದ ಮ್ಯಾಕ್ಸ್ ಮುಲ್ಲರ್ ಧರ್ಮದ ಪರಿಕಲ್ಪನೆ ಭಾರತಕ್ಕೇ ವಿಶಿಷ್ಟ.. ಇದು ಭಾರತದ ವಿಶಿಷ್ಟ ಕೊಡುಗೆ. ಅದಕ್ಕೆ ಸಮಾನ ಪದ ಬೇರಾವ ಭಾಷೆಯಲ್ಲೂ ಇಲ್ಲ ; ಆದ್ದರಿಂದ ಅದನ್ನು ಭಾಷಾಂತರಿಸದೆ ಹಾಗೆ ಉಪಯೋಗಿಸುತ್ತೇನೆ ಎಂದ. Sacred Books of the East ಭಾಷಾಂತರ ಮಾಡುವಾಗಿನ ಸಮಸ್ಯೆ ಹೀಗೆ ಪರಿಹರಿಸಿಕೊಂಡ. ಕೆಲವರ್ಷಗಳ ಹಿಂದೆ ಬೊಲಿವಿಯಾ ದೇಶಕ್ಕೆ ಹೋಗಿದ್ದೆ. ಅಲ್ಲಿ ಒಬ್ಬರು ಧರ್ಮ ಪದ ಹೇಳಿ ನನ್ನಿಂದ ಮತ್ತಷ್ಟು ತಿಳಿದುಕೊಂಡರು! ಅಂದರೆ ಅಂಥ ಒಂದು ಯಾವುದೋ ಮೂಲೆಯ ದೇಶಕ್ಕೂ ಈ ಪದ ಹೊಕ್ಕಿದೆ.
ಪಕ್ಷಪಾತೀ “ಮತ”ಕ್ಕೆ ಧರ್ಮ ಪದದ ಮರ್ಯಾದೆ ಕೊಡಬಾರದು. “ಧರ್ಮೋ ರಕ್ಷತಿ ರಕ್ಷಿತಃ ” ಅನ್ನುವ ಮಾತು ಬಿಂಬಿಸುವ ಶಬ್ದಾರ್ಥದ ಅಪಾರ ಗಾಂಭಿರ್ಯ ಉಳಿಸಬೇಕು. ತಿರುವಳ್ಳುವರ್ ಆ ಕಾಲದಲ್ಲೇ ” ಧರ್ಮಂ ತಲೈ ಕಾರ್ಕುಂ” ಅಂದರು. ಅದು ಈ ಸ್ಟಾಲಿನ್‌ಗೆ ಗೊತ್ತಿರಬೇಕು. “ಧರ್ಮೋ ರಕ್ಷತಿ ರಕ್ಷಿತಃ” “ಧಾರ್ಯತೆ ಇತಿ ಧರ್ಮಂ” ಮಾತು ಚಿರಪರಿಚಿತ.
ಮತ ಪಕ್ಷಪಾತೀ. ಪಂಗಡ ಕಟ್ಟುತ್ತದೆ. ಮಠ ನಿರ್ಮಿಸಿಕೊಳ್ಳುತ್ತದೆ. ಸ್ವಾಮಿಯನ್ನು ಕೂರಿಸಿ ಪಾದಕ್ಕೆ ನಮಸ್ಕರಿಸಿ ಅಂತ ವಿಧಿಸುತ್ತದೆ. ಅಧಿಕಾರ ಗ್ರಹಣಕ್ಕೆ ಶತಮಾನಗಳಿಂದಲೂ ಇಂದೂ ಮತವನ್ನು ಉಪಯೋಗಿಸುತ್ತಿದ್ದಾರೆ. ಅದು ಒಡೆದು ಆಳುವ ದುಷ್ಟತಂತ್ರ.ಮಿಕ್ಕ ಮತಗಳ ವಿರುದ್ಧ ದ್ವೇಷ ಬೆಳೆಸುತ್ತದೆ.
ಧರ್ಮ ಮಾನವ ಸಮಾಜಕ್ಕೆಲ್ಲ ಅನ್ವಯವಾಗುವ ಮನುಷ್ಯನ ಆಶಯ. ಅದನ್ನು ಬಸವಣ್ಣನ ವಚನ ಬಹಳ ಚನ್ನಾಗಿ ಚಿತ್ರಿಸುತ್ತದೆ..ಕಳ ಬೇಡ, ಕೊಲಬೇಡ , ಅನ್ಯರಿಗೆ ಅಸಹ್ಯ ಪಡಬೇಡ , ತನ್ನ ಬಣ್ಣಿಸಬೇಡ , ಇತರರ ಹಂಗಿಸಬೇಡ …ದಾನ ಮಾಡು, ಸತ್ಯ ಹೇಳು ..ಹೀಗೆ ಮನುಷ್ಯಮನುಷ್ಯರ ನಡುವೆ ಪ್ರೀತಿಸೌಹಾರ್ದ ಬೆಸೆಯುವ ತತ್ವ ಧರ್ಮ. ಇಂಗ್ಲಿಷಿನ ಫಿಲಾಸಫಿ ಪದ ಈ ಧರ್ಮ ಪದಕ್ಕೆ ಹತ್ತಿರ ಅನಬಹುದು . ವಿಲ್ ಡ್ಯುರಾಂಟ್ ತನ್ನ “ಸ್ಟೋರಿ ಆಫ್ ಫಿಲಾಸಫಿ” ಗ್ರಂಥದಲ್ಲಿ ಹೇಳುವ ಮಾತು” Religion is the illicit usurper of Phylosophy” ..” ಮತ ಫಿಲಾಸಫಿಯನ್ನು ಕದ್ದು, ಅನೈತಿಕವಾಗಿ ತನ್ನನ್ನು ತಾನೆ ಫಿಲಾಸಫಿ ಅಂತ ಬೀಗುತ್ತದೆ ” ನಮ್ಮಲ್ಲಿ ಮತಗಳು ಧರ್ಮ ಪದವನ್ನು ಕದ್ದು ತಾನೆ ಧರ್ಮ ಅಂತ ಮೆರೆದಾಡುತ್ತವೆ . ತಾನು ನಡೆಸುವ ಹಿಂಸೆಕೊಲೆ ಗಳನ್ನ ಧರ್ಮಕ್ಕಾಗಿ ಅಂತ ಬೀಗುತ್ತದೆ. ತಿಳಿದವರು ಮತಧರ್ಮ ಧರ್ಮ ಮತ ಪದಗಳನ್ನು ಬಳಸುವಾಗ ಎಚ್ಚರವಹಿಸಬೇಕು.
ಮತ ಮತ್ತು ಧರ್ಮ ಪದಗಳ ಅರ್ಥ ಸ್ಪಷ್ಟವಾದ ಮೇಲೆ , ಇನ್ನೊಂದು ಬಳಕೆಯ ಮಾತಿನತ್ತ ಗಮನಿಸಿ. ಅದು “ಮತಧರ್ಮ” ಪದ. ಈ ಪದವನ್ನು ಕೈಬಿಡಬೇಕು. ಇದು ಮತ ತಾನೇ ಧರ್ಮವೂ ಅಂತ ಹೇಳಿಕೊಳ್ಳುವ ಪ್ರಯತ್ನ. ಅದಕ್ಕೆ ಕಾರಣ ಸರಳ. ಎಲ್ಲ ಮತಗಳೂ ತಾವು ಧರ್ಮ ದ ಸ್ಥಾಪನೆಗಾಗಿಯೆ ಕಂಕಣಕಟ್ಟಿ ನಿಂತಿದ್ದೇವೆ ಎಂದು ಹೇಳುತ್ತಾ ಹೇಳುತ್ತಾ ತಮ್ಮ ತತ್ವವೆ ಧರ್ಮ; ತನ್ನ ಮತ ಹೇಳುವ ಧರ್ಮವೇ ಧರ್ಮ ಅಂತ ಹೇಳಿಕೊಳ್ಳುತ್ತವೆ. ಹೀಗಾಗಿ ವ್ಯಾಕರಣ ಬದ್ಧ ಅಲ್ಲದ “ಮತಧರ್ಮ” ಅನ್ನುವ ಪದ ಮಾಡಿಕೊಂಡಿವೆ. ಅದು ಕೇವಲ ನಿರಪಾಯೀ ಬಳಕೆ ಅಲ್ಲ; ದುರುದ್ದೇಶಪೂರ್ವಕ. ಅದು ತನ್ನ ಪಂಗಡಕಟ್ಟುವ ತತ್ತ್ವಕ್ಕೆ ಸಾರ್ವತ್ರಿಕ ಮನ್ನಣೆ ಪಡೆದ ಮತ್ತೊಂದು ಪದದ ದುರ್ಬಳಕೆ; ಅನುಯಾಯಿಗಳನ್ನು ನಂಬಿಸಿ ತಮ್ಮ ದಾರಿಗೆ ಸೆಳೆದುಕೊಳ್ಳುವ ತಂತ್ರಗಾರಿಕೆ. ಹೀಗಾಗಿ
” ಮತಧರ್ಮ” ಪದ ಬಳಕೆ ದುರುದ್ದೇಶದ್ದು; ವ್ಯಾಕರಣ ಬದ್ಧ ಪ್ರಯೋಗವೂ ಆಗೋಲ್ಲ. ಇನ್ನೊಂದರ ಅನುಯಾಯಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಜಾಣ್ಮೆ.
ಇದನ್ನೂ ಓದಿ:ಮಾನವ ವಿರೋಧಿ, ರಾಷ್ಟ್ರ ವಿರೋಧಿ ಗಾದೆಗಳನ್ನು ಸೃಷ್ಟಿಸಿದವರು ಯಾರು?
ಉದಯನಿಧಿ ಸ್ಟಾಲಿನ್ ಆವೇಶದಲ್ಲಿ ತಾನು ” ಸನಾತನ ಧರ್ಮ ” ವಿರೋಧಿ ಅಂತ ಹೇಳಿದಂತೆ ಕಾಣುತ್ತದೆ. ಅದು ಸನಾತನಮತ. ಅವರು ತಿದ್ದಿಕೊಂಡು ಬಳಸಲಿ. ಸನಾತನ ಅಂದರೆ ಬಹಳಹಿಂದಿನ.. ಇಂಗ್ಲೀಷಲ್ಲಿ ಮಿಲೆನಿಯಂ ಅನ್ನುವಂತೆ. ಮನುಷ್ಯ ನಾಗರಿಕ ಸಮಾಜವಾಗಿ ನೆಲಸಿದಮೇಲೆ ಅಲ್ಲಿಯ ಸಾಮಾಜಿಕ ವ್ಯವಸ್ಥೆಗೆ ಅಗತ್ಯವಾದ ನಡೆನುಡಿಗಳ ಚೌಕಟ್ಟು ಹಾಕಿಕೊಂಡಾಗ ಅವನು ಮಾಡಿಕೊಂಡ ಕೆಲ ನಿರ್ದೇಶಕ ತತ್ವಗಳು. ಅದು ಮತಪರಿಕಲ್ಪನೆಗೂ ಸಾವಿರಾರು ವರ್ಷ ಮುಂಚಿನದು. ಅದು ಪರಸ್ಪರ ಶಾಂತಿಯಿಂದ ಕೂಡಿಬಾಳುವ ಅಗತ್ಯ ತಿಳಿಸುವ ಮಾತುಗಳು. ಆ ಜೀವನ್ಮೌಲ್ಯಗಳ ಸಮುಚ್ಚಯಕ್ಕೆ ಧರ್ಮ ಪದ ಬಂದಿದೆ .ಅನಾಗರಿಕ ಕಾಲದಲ್ಲಿ ಮಾಡುತ್ತಿದ್ದ ಪರಸ್ಪರ ಕದಿಯುವುದು ಕೊಲುವುದು ಸುಳ್ಳು ಹೇಳುವುದು ಮಹಿಳೆಯರ ಮೇಲೆ ಅತ್ಯಾಚಾರ ಮುಂತಾಗಿ..ಏನೆಲ್ಲ ಮಾಡಕೂಡದು ಎನ್ನುವ ಮೌಲ್ಯಗಳ ಸಮುದಾಯ..ಅವಕ್ಕೆ ಒಟ್ಟಾರೆ ಕೊಟ್ಟ ಹೆಸರು “ಧರ್ಮ”. ಅದು ಸನಾತನ. ಅವು ಸಾರ್ವಕಾಲಿಕ ಸರ್ವತ್ರ. ಇದಕ್ಕಿಂತ ಸನಾತನ ಬೇರೆ ಇಲ್ಲ. ಮತ ಇತ್ತೀಚಿನದು. ವರ್ಗ ಸಮಾಜದ ಆರಂಭದ ನಂತರದ್ದು. ಅಂದಿಗೆ ಹಾಗೆ ಹಣಿಕಿದ “ಮತ” ಪರಿಕಲ್ಪನೆಗೆ ಸಾಕಷ್ಟು ಸಮರ್ಥನೆ ದೊರೆಯದೇ ಹೋದಾಗ, ಅಂದಿಗೆ ಸರ್ವಸಮ್ಮತವಾಗಿದ್ದ ಪರಿಕಲ್ಪನೆ “ಧರ್ಮ” ತಾನೇ ಅಂತ “ಮತ” ಹೇಳಿಕೊಂಡು ಮೋಸಮಾಡಿತು. ಕಾಲಾನುಕ್ರಮದಲ್ಲಿ ತನ್ನನ್ನು “ಮತಧರ್ಮ” ಅಂತ ಹೇಳಿಕೊಂಡಿತು. ನನಗೆ ತಿಳಿದಂತೆ ಬುದ್ಧನ ನಂತರದ ಕಾಲದಲ್ಲಿ ಈ ವರ್ಗ/ ಜಾತಿ ಸಮರ್ಥಕ ಮತ , ಮತಧರ್ಮ ಎನ್ನುತ್ತಾ ರಾಜನ ಬೆಂಬಲಕ್ಕೆ ನಿಂತಿತು. ಇದು ಪ್ರತ್ಯೇಕ ಚರ್ಚೆ. ಆದರೆ ಮತ, “ಧರ್ಮ”ಪರಿಕಲ್ಪನೆಗಿಂತ ಖಂಡಿತ ಸನಾತನ ಅಲ್ಲ.
..ಸ್ಟಾಲಿನರ ಮಾತಿನ ಅರ್ಥಕ್ಕೆ ಸಂಪೂರ್ಣ ಬೆಂಬಲ ಕೊಡುತ್ತಾ ಅವರು ಅದನ್ನು “ಸನಾತನಮತ” ಪರಿಕಲ್ಪನೆಯ ವಿರುಧ್ಧ ದ ಹೋರಾಟ ಮಾಡಲಿ. ತಮಿಳರ ವಳ್ಳುವರ್ ಹೇಳುವ ” ಧರ್ಮಂ ತಲೈಕಾರ್ಕುಂ” ನಂತೆ ತಮ್ಮ ರಾಜಕೀಯ ನಡೆಸಲಿ.