ಕೃಷಿ ನೀತಿ ವಿರುದ್ಧ ಸಂಸತ್ತಿನ ಮುಂದೆ ಪ್ರತಿಭಟನೆಗೆ ರೈತರ ನಿರ್ಧಾರ

ನವದೆಹಲಿ: ಸಂಸತ್ತಿನ ಚಳಿಗಾಲದ ಅವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಇದರ ಹಿನ್ನೆಲೆಯಲ್ಲಿ, ಸಂಸತ್ ಮುಂದೆ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರರೀತಿಯ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಕೇಂದ್ರದ ಬಿಜೆಪಿ ಸರಕಾರದ ಹೊಸ ಕೃಷಿ ನೀತಿ ವಿರೋಧಿಸಿ ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದೆ.

ಚಳಿಗಾಲದ ಅವೇಶನ ಆರಂಭವಾಗಿ ಕೊನೆಗೊಳ್ಳುವವಗೂ ಸಂಸತ್ತಿನ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಪಕ್ಷಗಳು ಸಹ ಸಂಸತ್ ಒಳಗೆ ರೈತರ ಮೂಲಭೂತ ಪ್ರಶ್ನೆಗಳ ಪರಿಹಾರಕ್ಕಾಗಿನ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿವೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಬಿಡುಗಡೆ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದುಡಿಯುವ ಜನರ ಭಾರೀ ಬೆಂಬಲ: ಎಐಕೆಎಸ್‍ ಅಭಿನಂದನೆ

ಪ್ರತಿಭಟನೆಯಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಸಂಘಟನೆಯ ಪ್ರಮುಖ ಐದು ಮುಖಂಡರು ಈ ಹೋರಾಟಕ್ಕೆ ನಾಯಕತ್ವ ನೀಡಲಿದ್ದಾರೆ ಎಂದು ಮೋರ್ಚಾ ತಿಳಿಸಿದೆ.

ಹೋರಾಟದ ಮುಂದುವರೆದ ಭಾಗವಾಗಿ ತೈಲ ಬೆಲೆ, ಗ್ಯಾಸ್‌ ಬೆಲೆ ಏರಿಕೆಯನ್ನು ಖಂಡಿಸಿ ಜುಲೈ 08ರಂದು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ದೇಶದ್ಯಾಂತ ಎಲ್ಲಡೆ ಪ್ರತಿಭಟನೆಗೆ ಸಂಘಟನೆಗೆ ಕರೆ ನೀಡಿದೆ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ- 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಮತ್ತು ಅಗತ್ಯ ಸರಕುಗಳ ಒಪ್ಪಂದಕ್ಕೆ ಒತ್ತಾಯಿಸಿ ದೇಶದ ರೈತರು 2020ರ ನವೆಂಬರ್‌ನಿಂದ ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಮೊಕ್ಕಾಂ ಹೂಡಿರುವ ರೈತರು ಪ್ರತಿದಿನವೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೋರಾಟ ನಿರತ ರೈತರು ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಹೊಸ ಕಾನೂನು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇದನ್ನು ಓದಿ: ಗಾಜಿಪುರ ಗಡಿಯಲ್ಲಿ ರೈತರು-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಜುಲೈ 1ರಂದು ಕೇಂದ್ರ ಸಚಿವ ತೋಮರ್ ಅವರು ರೈತ ಹೋರಾಟದ ಬಗ್ಗೆ ಪ್ರತಿಕ್ರಿಯಿಸುತ್ತಾ  ʻನೂತನ ಕೃಷಿ ಕಾನೂನುಗಳು ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತವೆ ಎಂದು ಪ್ರತಿಪಾದಿಸಿದ್ದರು ಮತ್ತು ಈ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಯನ್ನು ಹೊರತುಪಡಿಸಿ ಪ್ರತಿಭಟನಾಕಾರ ಕೃಷಿಕರೊಂದಿಗೆ ಮಾತುಕತೆ ನಡೆಸಲು ಸರಕಾರ ಸಿದ್ದವಿದೆ ಎಂದು ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಭಟನಾಕಾರರು ʻʻಸರಕಾರವು ಕೃಷಿ ಕಾನೂನುಗಳ ಬಗ್ಗೆ ಷರತ್ತುಗಳೊಂದಿಗೆ ಮಾತನಾಡಲು ಬಯಸುತ್ತಿದೆ. ನಾವು ಅವರೊಂದಿಗೆ ಮಾತನಾಡಲು ಸಿದ್ಧರಿದ್ದೇವೆ ಆದರೆ ಅವರು ಕಾನೂನುಗಳನ್ನು ರದ್ದುಗೊಳಿಸಲು ಒಪ್ಪಿದರೆ ಮಾತ್ರ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *