ಯುಪಿಯಲ್ಲಿ ಸಮಾಜವಾದಿ ಪಕ್ಷ ಗೆಲ್ಲೋದು ಖಚಿತ- ಬಿಜೆಪಿ ನೆಲಕಚ್ಚೋದು ಪಕ್ಕಾ – ಅಖಿಲೇಶ್‌ ಯಾದವ್

ಲಕ್ನೋ : ಉತ್ತರ ಪ್ರದೇಶದಲ್ಲಿ  ಮೊದಲ ಎರಡು ಹಂತಗಳಲ್ಲಿ ಮತದಾನ ನಡೆದಿರುವ 113 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 100 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಖಿಲೇಶ್‌, ಬಿಜೆಪಿಯನ್ನು ಜನ ಅಧಿಕಾರದಿಂದ ಕಿತ್ತೆಸಯಲು ಆಸೆ ಪಡುತ್ತಿದ್ದಾರೆ. ನಮಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದುರು.  ಎಸ್‌ಪಿ-ಮೈತ್ರಿಕೂಟ ಎರಡು ಹಂತಗಳಲ್ಲಿ ಗೆಲ್ಲುವ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಏಳು ಹಂತಗಳ ಪೈಕಿ ಈಗ ಎರಡು ಹಂತಗಳು ಪೂರ್ಣಗೊಂಡಿದ್ದು, ಸಾರ್ವಜನಿಕರು ಬಿಜೆಪಿಗೆ ‘ಗೋ ಬ್ಯಾಕ್, ಗೋ’ ಎನ್ನುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಏನಾಗುತ್ತಿದೆ?

ಐದು ವರ್ಷ ಇಲ್ಲಿನ ಜನರಿಗೆ ಅವರು ಮೋಸ ಮಾಡಿದ್ದಾರೆ, ಸುಳ್ಳು ಭರವಸೆ ಕೊಟ್ಟಿದ್ದಾರೆ ಎಂದೂ ಕಿಡಿ ಕಾರಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸಹಾಯವನ್ನು ನಿರಾಕರಿಸಿದ ಅಖಿಲೇಶ್, ಕೈ ಹಾಗೂ ಕಮಲ ಪಾಳಯ ಎರಡೂ ನಮ್ಮನ್ನು ಸೋಲಿಸಲು ಪೈಪೋಟಿಗಿಳಿದಿವೆ. ಹೀಗಾಗಿ ನಮ್ಮ ಮೈತ್ರಿ ಜೊತೆಯೇ ಸರ್ಕಾರ ರಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಕೇರಳ ವಿಚಾರವಾಗಿ ಸಿಎಂ ಯೋಗಿ ಕೊಟ್ಟಿದ್ದ ಹೇಳಿಕೆಯನ್ನು ಖಂಡಿಸಿದ ಅಖಿಲೇಶ್ ಯಾದವ್, ಯುಪಿಗಿಂತ ಕೇರಳ ಅಭಿವೃದ್ಧಿಯಲ್ಲಿ ಮುಂದಿದೆ. ಹೀಗಿರುವಾಗ ನಮ್ಮ ರಾಜ್ಯವನ್ನು ಕೇರಳದಂತಾಗಲು ಬಿಡುವುದಿಲ್ಲ ಎಂದ ಯೋಗಿ ಹೇಳಿಕೆ ಒಪ್ಪುವಂತದ್ದಲ್ಲ ಎಂದಿದ್ದಾರೆ. ನಮ್ಮ ಮುಖ್ಯಮಂತ್ರಿಗೆ ಯಾರನ್ನು ಯಾರ ಜೊತೆ ಹೋಲಿಸಬೇಕೆಂಬ ಜ್ಞಾನ ಇಲ್ಲ, ಅವರಿಗೆ ಕೇವಲ ಹಿಂದೂ, ಮುಸ್ಲಿಂ ವಿಚಾರ ತೆಗೆದು ಗಲಭೆ ಹುಟ್ಟಿಸುವುದರಲ್ಲೇ ಆಸಕ್ತಿ ಇದೆ. ಇಲ್ಲಿನ ಅಭಿವೃದ್ಧಿ ಬಗ್ಗೆ ತಲೆ ಕೊಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *