ಸಮಗ್ರವಾಗಿ ಚರ್ಚಿಸದೆ ತರಾತುರಿಯಲ್ಲಿ ನೂತನ ಶಿಕ್ಷಣ ನೀತಿ

ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಕರ್ನಾಟಕ ಸರಕಾರ ಜಾರಿಗೊಳಿಸಿರುವ ಅವೈಜ್ಞಾನಿಕ ಕ್ರಮವನ್ನು ವಿರೋಧಿಸಿ ಸದನದಲ್ಲಿ ಚರ್ಚೆಗೆ ಒತ್ತಾಯಿಸಬೇಕೆಂದು ಸಮುದಾಯ ಕರ್ನಾಟಕ ಸಾಂಸ್ಕೃತಿಕ ಸಂಘಟನೆ, ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್), ವಿದ್ಯಾರ್ಥಿ, ದಲಿತ, ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಸಮಾಲೋಚನಾ ಸಭೆ  ಆಯೋಜಿಸಿತ್ತು.

ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಎಸ್.ಜಿ ಸಿದ್ದರಾಮಯ್ಯ ಮಾತನಾಡಿ ಇಂದಿನ ರಾಜ್ಯ, ಕೇಂದ್ರ ಸರಕಾರಗಳು ಸಂವಿಧಾನವನ್ನು ಗಾಳಿಗೆ ತೂರುವ ಪ್ರಯತ್ನ ಮಾಡುತ್ತಿರುವುದನ್ನು ವಿರೋಧಿಸಿದರು.

ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣವನ್ನು ರಾಜ್ಯಗಳ ಕೈಯಿಂದ ಕುಸಿಯುತ್ತಿರುವ ಪ್ರಯತ್ನ ಮತ್ತು ವರ್ಣಾಶ್ರಮಗಳನ್ನು ಸ್ಥಿರೀಕರಿಸುವ ಪ್ರಯತ್ನವಾಗಿರುವ ಈ ನೂತನ ನೀತಿಯನ್ನು 21ನೇ ಶತಮಾನದ ಶಿಕ್ಷಣ ನೀತಿ ಇದು ಎಂದು ನಂಬಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ವಿವರಿಸಿದರು.

ಡಾ.ನಿರಂಜನಾರಾಧ್ಯ ಹಿಂದಿನ ಮತ್ತು ನೂತನ ಶಿಕ್ಷಣ ನೀತಿಯ ತೌಲನಿಕ ವಿಶ್ಲೇಷಣೆ ಮಾಡಿದರು. ಹೊಸ ನೀತಿ ಮುಂದೆ ತರಬಹುದಾದ ಅಪಾಯಗಳನ್ನು ಎಳೆ ಎಳೆಯಾಗಿ ವಿವರಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಎಲ್.ಹನುಮಂತಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ, ಶಿಕ್ಷಣ ತಜ್ಞರಾದ ಡಾ.ನಿರಂಜನಾರಾಧ್ಯ, ಬಿ.ಶ್ರೀಪಾದ ಭಟ್, ದಲಿತ ಸಂಘಟನೆಗಳ ಮಾವಳ್ಳಿ ಶಂಕರ್, ಬಿ.ರಾಜಶೇಖರಮೂರ್ತಿ, ಮೋಹನ್ ರಾಜ್ , ಜಿಗಣಿ ಶಂಕರ್, ಎನ್.ವೆಂಕಟೇಶ್ ಮತ್ತು ಇತರ ನಾಯಕರು, ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೆಶ್ ಕಡಗದ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ, ವಿದ್ಯಾರ್ಥಿ ಜನತಾ ದಳದ ಹರಿಪ್ರಸಾದ್.ವಿ, ಕೆ.ಆರ್.ಎಸ್ .ಸಂಘಟನೆಯ ಅಮರೇಶ್ ವಿ, ರಾಜ್ಯ ನಾಯಕರುಗಳು,  ಬಿ.ಜಿ.ವಿಎಸ್. ನಾಯಕರು, ಸಮುದಾಯ ರಾಜ್ಯ ಉಪಾಧ್ಯಕ್ಷ ಟಿ.ಸುರೇಂದ್ರ ರಾವ್, ರಾಜ್ಯ ಸಹಕಾರ್ಯದರ್ಶಿ ವಿಮಲಾ.ಕೆ.ಎಸ್. ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪಾಲ್ಗೊಂಡರು.

ಸಮುದಾಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Donate Janashakthi Media

One thought on “ಸಮಗ್ರವಾಗಿ ಚರ್ಚಿಸದೆ ತರಾತುರಿಯಲ್ಲಿ ನೂತನ ಶಿಕ್ಷಣ ನೀತಿ

Leave a Reply

Your email address will not be published. Required fields are marked *