ಮುಂದಿನ ತಿಂಗಳು ಸಂಸತ್​ ಸದಸ್ಯರ ವೇತನ ಏರಿಕೆ: ಗೆಜೆಟ್​ ಅಧಿಸೂಚನೆ

ವದೆಹಲಿ: ನೆನ್ನೆ ಸೋಮವಾರದಂದು ಸಂಸತ್​ ಸದಸ್ಯರ (MP) ವೇತನ, ಭತ್ಯೆ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಏರಿಕೆ ಮಾಡಿದ್ದೂ, ಈ ಕುರಿತು ಮುಂದಿನ ತಿಂಗಳು, ಏಪ್ರಿಲ್​ 1, 2023ರ ಪ್ರಕಾರ ಜಾರಿ ಬರುವಂತೆ ಸಂಸದೀಯ ವ್ಯವಹಾರಗಳ ಸಚಿವಾಲಯ ಗೆಜೆಟ್​ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ 1 ಲಕ್ಷ ರೂ.ದಿಂದ 1.24 ಲಕ್ಷ ರೂ.ಗಳ ವರೆಗು ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ತಿಂಗಳ ವೇತನವನ್ನು ಏರಿಕೆ ಮಾಡಿದೆ. ಜತೆಗೆ ದಿನದ ಭತ್ಯೆಯನ್ನು 2,000 ರೂ. ದಿಂದ 2,500 ರೂ. ವರೆಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಲ್ಲಿ ತಿಳಿಸಲಾಗಿದೆ. ತಿಂಗಳು

ಇದನ್ನೂ ಓದಿ: ಶವ ಸಾಗಿಸಲು ಸಾಧ್ಯವಾಗದೇ ರಸ್ತೆ ಮಧ್ಯದಲ್ಲೇ ಅಂತ್ಯಕ್ರಿಯೆ 

ಮಾಜಿ ಸಂಸದರಿಗೆ ನೀಡಲಾಗುವ ಪಿಂಚಣಿಯನ್ನು ಪ್ರಸ್ತುತ 25,000 ರೂ.ಗಳಿಂದ 31,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿ ಪಿಂಚಣಿಯನ್ನು ಹಿಂದಿನ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿಗಳ ಪರಿಷ್ಕರಣೆಯನ್ನು ಘೋಷಿಸಲಾಗಿದೆ.

ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media

Donate Janashakthi Media

Leave a Reply

Your email address will not be published. Required fields are marked *