ನಾಡಿನ ಸಾಹಿತಿಗಳಿಗೆ ಜೀವ ಬೆದರಿಕೆ-ಕ್ರಮವಹಿಸದ ರಾಜ್ಯ ಸರಕಾರ: ಖಂಡನೆ

ಬೆಂಗಳೂರು: ರಾಜ್ಯದ ಪ್ರಗತಿಪರ, ಗಣ್ಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಶ್ರೀಮತಿ ಬಿ.ಟಿ.ಲಲಿತಾನಾಯಕ್‌ ಮುಂತಾದ 64 ಜನ ಗಣ್ಯರನ್ನು ಅವಹೇಳನಕಾರಿಯಾಗಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಇದನ್ನು ಖಂಡಿಸಿರುವ ಸಿಪಿಐ(ಎಂ) ಪಕ್ಷವು, ಕಠಿಣ ಕ್ರಮವಹಿಸದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದೆ.

ಅಲ್ಲದೆ, ಸದರಿ ವಿಷಯಗಳಿಗೆ ಸಂಬಂದಿಸಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಆದಾಗಲೂ ಇಂತಹ ಗಣ್ಯರ ಕುರಿತ ಅವಹೇಳನಕಾರಿ ನಡೆ ಹಾಗೂ ಜೀವ ಬೆದರಿಕೆಯ ಗುಂಡಾಗಿರಿ ರಾಜಕೀಯವನ್ನು ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಮತ್ತು ಸರಕಾರ ಈ ಕುರಿತಂತೆ ಕಠಿಣವಾಗಿ ವ್ಯವಹರಿಸದಿರುವುದು ಇಂತಹ ಕೋಮುವಾದಿ ಪುಂಡು ಪೋಕರಿಗಳ ಚಟುವಟಿಕೆಗಳು ಹೆಚ್ಚಳಗೊಳ್ಳಲು ಕಾರಣವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದ್ದಾರೆ.

ಸರಕಾರದ ಈ ಪ್ರಾಣಾಂತಕ ಮೌನವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಬೆದರಿಕೆ ಪತ್ರದ ಮೂಲವನ್ನು ಭೇದಿಸಲು ಪರಿಣಾಮಕಾರಿ ತನಿಖೆಯನ್ನು ಕೈಗೊಂಡು, ಆರೋಪಿಗಳನ್ನು ಬಂಧಿಸಿ ಶಿಕ್ಷಿಸಲು ಅಗತ್ಯ ಕ್ರಮವಹಿಸಲು ಸಿಪಿಐ(ಎಂ) ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಇಂತಹ ನಾಡಿಗಾಗಿ ದುಡಿದ ಗಣ್ಯರಿಗೆ ಜೀವ ಬೆದರಿಕೆ ಒಡ್ಡುವುದನ್ನು ತಡೆಯಲು ರಾಜ್ಯ ಸರ್ಕಾರವು ಕಠಿಣ ಕ್ರಮವಹಿಸುವಂತೆ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *