ಸಹ ಮತ್ತು ಸಹಾಯಕ ನಿರ್ದೇಶಕ ವಿಭಾಗದವರಿಗೆ ಆಹಾರ ಕಿಟ್‌ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಪರಿಣಾಮವಾಗಿ ಉದ್ಯೋಗ ನಷ್ಟಕ್ಕೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ವಿವಿಧ ವಿಭಾಗಗಳಲ್ಲಿ ದುಡಿಮೆ ಮಾಡುವ ಕಾರ್ಮಿಕರು ತಮ್ಮ ನಿರ್ದಿಷ್ಟ ಪ್ರಮಾಣದ ಆದಾಯವಿಲ್ಲದ ಲಕ್ಷಾಂತರ ಮಂದಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಸರಕಾರವು ವಿವಿಧ ಜನ ವಿಭಾಗಗಳಿಗೆ ಘೋಷಿಸಿರುವ ವಿಶೇಷ ಪ್ಯಾಕೇಜ್‌ ಯೋಜನೆಗಳು ಇಡೀ ಕುಟುಂಬ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇದರ ನಡುವೆಯೂ ಹಲವು ಸಂಘಸಂಸ್ಥೆಗಳು ತಮ್ಮದೇ ಆದ ಇತಿಮಿತಿಯ ನಡುವೆ ಕೆಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ.

ಇಂದಿಗೂ ರಾಜ್ಯದಲ್ಲಿ ಸರಕಾರ ಅಥವಾ ಯಾವುದೇ ಸಂಘಸಂಸ್ಥೆಗಳಲ್ಲಿ ಸದಸ್ಯರಲ್ಲದ ಲಕ್ಷಾಂತರ ಮಂದಿ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಅಂತಹ ಬಹಳಷ್ಟು ಜನರು ಇದ್ದಾರೆ. ಸರಕಾರದ ಆರ್ಥಿಕ ನೆರವು ಯೋಜನೆಯು ಯೂನಿಯನ್‌ಗಳಲ್ಲಿ ಸದಸ್ಯರಾಗಿರುವವರಿಗೆ ಮಾತ್ರ ಸೀಮಿತವಾಗಿದೆ.

ಈ ಹಿನ್ನೆಲೆಯಲ್ಲಿ ಚಲನಚಿತ್ರ ಸಹ ನಿರ್ದೇಶಕ ನಿಂಗರಾಜ್‌ ಇತಿಹಾಸ ಮತ್ತು ಅವರ ಕೆಲವು ಸ್ನೇಹಿತರು ಸೇರಿಕೊಂಡು ತಮ್ಮದೇ ಆದ ಇತಿಮಿತಿಯೊಂದಿಗೆ ಯಾವುದೇ ನೆರವು ಸಿಗದವರನ್ನು ಗುರುತಿಸಿ ತಕ್ಷಣಕ್ಕೆ ಸಹಯಾರ್ಥವಾಗಿ ಸುಮಾರು 275ಕ್ಕೂ ಹೆಚ್ಚಿನ ಜನರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ.

ಸಹ ನಿರ್ದೇಶಕ ನಿಂಗರಾಜ್‌ ಇತಿಹಾಸ ಮಾತನಾಡಿ ʻʻ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯೂನಿಯನ್ ಗಳು ಇದ್ದು, ಇಂತಹ ಸಮಯದಲ್ಲಿ ಎಲ್ಲಾ ಯೂನಿಯನ್ ಸದಸ್ಯರಿಗೆ ಕಿಟ್ ಅಥವಾ ಅರ್ಥಿಕವಾಗಿ ಒಂದಿಷ್ಟು ಸಹಾಯವಾಗುತ್ತೆ. ಆದರೆ ಯಾವುದೇ ಯೂನಿಯನ್ ಸೇರದೇ ಸಾಕಷ್ಟು ದಿನಗಳ ಕಾಲ ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲ್ಸ ಮಾಡ್ತಿರೋರಿಗೆ ಯಾರು ಗುರುತಿಸುತ್ತಿಲ್ಲ. ಅಂತಹ ಯೂನಿಯನ್ ಸೇರದ ಸಹ ಮತ್ತು ಸಹಾಯಕ ನಿರ್ದೇಶಕರನ್ನು ಗುರುತಿಸಿ ಅವರಿಗೆ ಒಂದಷ್ಟು ಸಹಾಯ ಮಾಡುವ ದೃಷ್ಠಿಯಿಂದ ನಾವು ಕೆಲವು ಗೆಳೆಯರು ಸೇರಿಕೊಂಡು ಆಹಾರ ಕಿಟ್‌ ವಿತರಣೆ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು.

ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಮಾತ್ರ ಆಹಾರ ಕಿಟ್ ವಿತರಣೆ ಹಮ್ಮಿಕೊಂಡಿದ್ದರು ಸಹ, ಕಿಟ್‌ ವಿತರಣೆ ಸಂದರ್ಭದಲ್ಲಿ ಸ್ಥಳೀಯವಾಗಿ ಉದ್ಯೋಗ ವಂಚಿತರಾದ ಕೆಲವರಿಗೆ ಕಿಟ್‌ ವಿತರಣೆ ಮಾಡಿರುತ್ತಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ಕಾರ್ಯಯೋಜನೆಯನ್ನು ಹಮ್ಮಿಕೊಂಡಿರುವ ಲಿಂಗರಾಜ್‌ ಇತಿಹಾಸ ಮತ್ತು ತಂಡದವರು ಕ್ಲಾಪ್ ಇನ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಮೂಲಕ ಮತ್ತಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *