‘ಸಾನಿ ಕಾಯಿದಮ್’ ನೊಂದ ದಲಿತ ಮಹಿಳೆಯ ಕತೆ

ಮಮತ ಜಿ

‘ಮಹಾನಟಿ’ ಚಿತ್ರದ ಮೂಲಕ ಖ್ಯಾತಿಗೊಂಡ ಕೀರ್ತಿ ಸುರೇಶ್, ಅರುಣ್ ಮಾಥೇಶ್ವರನ್ ನಿರ್ದೇಶನದ  ‘ಸಾನಿ ಕಾಯಿದಮ್’ ಚಿತ್ರದಲ್ಲಿ ಕಾನ್ಸಸ್ಟೇಬಲ್ ಪಾತ್ರ ವಹಿಸಿದ್ದಾರೆ.ಈ ಚಿತ್ರದ ಮೂಲಕ ನಿರ್ದೇಶಕ ಸೆಲ್ವಾ ರಾಘವನ್ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರವನ್ನುಇದೀಗ ಅಮೆಜಾನ್ ಪ್ರೈಮ್ ನಲ್ಲಿ ನೋಡಬಹುದು. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಭಾರತದಲ್ಲಿ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬಿಡುಗಡೆ ಹೊಂದಿದೆ.

ಈ ಚಿತ್ರವು ಒಬ್ಬ ಗ್ರಾಮೀಣ ಮಹಿಳೆ ಅಧಿಕಾರದಲ್ಲಿದ್ದರು ಸಹ ಪುರುಷಪ್ರಧಾನ ಸಮಾಜದಲ್ಲಿ ಅದರಲ್ಲೂ ಮೇಲ್ವರ್ಗದ ಜನರಿಂದ ದಲಿತರು ಹಿಂಸೆಗೊಳಗಾಗುತ್ತಲೇ ಇದ್ದಾರೆ. ಅದರಲ್ಲು ಮಹಿಳೆಯರು ಪುರುಷರಿಂದ ಹಲ್ಲೆಗೊಳಗಾಗುತ್ತಿದ್ದಾರೆ.

ಮೋಜು ಮಸ್ತಿ ಕುಡಿತದ ವ್ಯಸನಿಗಳು, ಕಾಮರೂಪಿಗಳಿಂದ ನಡೆಯುವ ದುಷ್ಕೃತ್ಯಗಳಾದ ಅತ್ಯಚಾರ, ಹಿಂಸೆ, ದೌರ್ಜನ್ಯಕ್ಕೆ ಬಲಿಯಾದ ಅದೆಷ್ಟೋ ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ದುಷ್ಕೃತ್ಯಗಳಿಗೆ ಬಲಿಯಾದ ಮಹಿಳೆ ಎದೆಗುಂದದೆ ದುಷ್ಕರ್ಮಿಗಳ ಸಂಹಾರ ಮಾಡುವುದರ ಮೂಲಕ ಹೆಣ್ಣುಮಕ್ಕಳಿಗೊಂದು ಸಂದೇಶ ನೀಡಿದ್ದಾರೆ , ಹಾಗೇಯೆ ದಲಿತರು ಅನುಭವಿಸುತ್ತಿರುವ ಹಿಂಸಾಚಾರವನ್ನು ಸಹ  ತೆರೆಗೆ ತರಲು ಪ್ರಯತ್ನಿಸಿದ್ದಾರೆ.

ಚಿತ್ರ ಕಥೆಯ ವಿಮರ್ಷೆ: ಒಬ್ಬ ಗ್ರಾಮೀಣ ಬಡ ಕುಟುಂಬ .ಪೊನ್ನಿ ಎಂಬ ಕಾನ್ಸ್ ಸ್ಟೇಬಲ್ ಮಹಿಳೆಯು ತನ್ನ ಗಂಡನ ಪರವಾಗಿ ಕ್ಷಮೆ ಕೇಳಲು ಆತನ ಕಂಪನಿಯಾದ ಪೇಪರ್ ಮಿಲ್  ಬಳಿ ಹೊರಡುತ್ತಾಳೆ. ಅಲ್ಲಿ ಕುಡಿದ ಮತ್ತಿನಲ್ಲಿದ್ದ ಅಲ್ಲಿನ ಐದಾರು ಪೇಪರ್ ಮಿಲ್ಲಿನ  ಮೇಲ್ವರ್ಗದ ಮಾಲೀಕರು  ಆಕೆಯನ್ನು ಪ್ರತಿಯೊಬ್ಬರು ಹೊಡೆದು ಹಿಂಸಿಸಿ ಅತ್ಯಾಚಾರ ಮಾಡುತ್ತಾರೆ, ಹಾಗೆಯೇ ಆಕೆಯ ಗಂಡ ಹಾಗೂ ಪುಟ್ಟ ಕಂದಮ್ಮನನ್ನು ಮನೆಯಲ್ಲಿ ಸುಟ್ಟು ಭಸ್ಮ ಮಾಡುತ್ತಾರೆ. ಅವಳು ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದು ‘ಸಾನಿ ಕಾಯಿದಂ’ (ತಿರುಳು ಕಾಗದ) ಕಥೆಯನ್ನು ರೂಪಿಸುತ್ತದೆ. ಚಲನಚಿತ್ರವು ವೀಕ್ಷಿಸಲು ಯೋಗ್ಯವಾಗಿದೆ, ಏಕೆಂದರೆ ಇದು ಯಾವುದೇ ವಿಮರ್ಶೆಗಳನ್ನು ಓದುವ ಮೂಲಕ ಸಿಗುವ  ಅನುಭವಕ್ಕಿಂತ ಚಿತ್ರವನ್ನು ನೋಡಿ  ಇನ್ನು ಬೆಳಕಿಗೆ ಬರದ  ಈ ರೀತಿಯ ದುಷ್ಕೃತ್ಯವನ್ನು ಚಿತ್ರದ ಮೂಲಕ ತಿಳಿಬಹುದು. ಚಿತ್ರದಲ್ಲಿ ಎಲ್ಲ ಸನ್ನಿವೇಶವು  ಮನಕಲಕುಂತೆ ಮತ್ತು ಮನಕುದಿಯುವಂತೆ ಮಾಡುತ್ತದೆ ಹಾಗೂ ಇಂತಹ ಕ್ರೂರಿಗಳಿರುವ ಇಂತಹ ಪ್ರಸ್ತುತ ಸಮಾಜದಲ್ಲಿ ನಾವಿದ್ದೀವಲ್ಲ ಎಂಬ ರೋಚಕ ಸತ್ಯ ಕಣ್ಣೆದುರಿಗೆ ಹಾದು ಜೀವಂತವಾಗಿರುತ್ತದೆ.  ಕೀರ್ತಿ ಸುರೇಶ್ ಪೊನ್ನಿಯಾಗಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ  ವಿಷಾದದ ಕಣ್ಣಹನಿಗಳಿಲ್ಲದೆ ಭಾವನೆಗಳಿಲ್ಲದ ಕಲ್ಲಾಗಿ ಹೋಗುತ್ತಾಳೆ . ಚಿತ್ರದಲ್ಲಿನ ಕೆಲ  ಸನ್ನಿವೇಶಗಳು  ಘೋರವಾಗಿ ಸೇಡು ತೀರಿಸುಕೊಳ್ಳುವುದನ್ನು ಮಾಡುತ್ತದೆ, ಆದರೆ ಈ ಹಿಂಸಾಚಾರದ ನಿಜವಾದ ಕ್ರಿಯೆ ಚಿತ್ರದಲ್ಲಿ ನೋಡುವುದಿಲ್ಲ. ಈ ಚಿತ್ರವು ಕನ್ನಡದ ಚಿತ್ರ ‘ಗರುಡ ಗಮನ ವೃಷಭ ವಾಹನ’ದಲ್ಲಿನ ಕೆಲವೊಂದು ದೃಶ್ಯಗಳನ್ನು ನೆನಪಿಸುತ್ತದೆ. ಸ್ಯಾಮ್ ಸಿ ಎಸ್ ಅವರ ಸಂಗೀತವು ಈ ಚಿತ್ರಕ್ಕೆ ಹೋಲಿಕೆಯಾಗುವಂತಿದೆ. ಸಿನಿಮಾ ತನ್ನದೇ ಆದ ಕೆಲವೊಂದು ಲೋಪದೋಷಗಳನ್ನು ಹೊಂದಿದೆ. ಪೊನ್ನಿಯು  ಚಿತ್ರದಲ್ಲಿ ಎಂದಿಗೂ  ಸಹೋದರ-ಸಹೋದರಿ ಸಂಬಂಧದ,ನಂಟನ್ನು ಬಯಸುವುದಿಲ್ಲ ಎಂದು ಕೊನೆಯ ದೃಶ್ಯದಲ್ಲಿ ಮಾತ್ರ ಸ್ಪಷ್ಟವಾಗುತ್ತದೆ ಮತ್ತು ಆದ್ದರಿಂದ ಕೆಲವೊಂದು ಕಡೆ ಚಿತ್ರವು ಕೃತಕವಾಗಿದೆ.

ಆಸಿಡ್ ಹೊಗೆ, ನಿಜ ಜೀವನದಲ್ಲಿ, ಹತ್ತಿರದ ಎಲ್ಲರಿಗೂ ಕೆಮ್ಮು ಮತ್ತು ವಾಕರಿಕೆ ಬರುವಂತೆ ಮಾಡುತ್ತದೆ ಆದರೆ ಈ ಚಲನಚಿತ್ರದಲ್ಲಿ ಪೊನ್ನಿ ತನ್ನ ಮುಖವನ್ನು ಸಹ ಅಲುಗಾಡುವುದಿಲ್ಲ. ಇದು ನಿರ್ದೇಶಕ ತೆಗೆದುಕೊಂಡ ಸಿನಿಮಾ. ಚಿತ್ರದ ಸ್ವಾತಂತ್ರ್ಯ ಎಂದು ಊಹಿಸಬಹುದು.

ಈ ಚಲನಚಿತ್ರವು ಹಿಂಸೆಗೆ ಮೀಸಲಾದ ಚಲನಚಿತ್ರವನ್ನು ಹೇಗೆ ಮಾಡಬೇಕೆಂಬುದರ ಮಾಸ್ಟರ್ಕ್ಲಾಸ್ ಆಗಿದೆ . ಹಿಂಸೆಯು ಮನುಷ್ಯನಿಗೆ ಏನು ಮಾಡಬಹುದು ಮತ್ತು ಹೆಚ್ಚು ಹಿಂಸೆಯು ಮನುಷ್ಯನ್ನು ಎಷ್ಟುಕ್ರೂರವಾಗಿ ವರ್ತಿಸುವಂತೆ  ಮಾಡುತ್ತದೆ, ಹಾಗೂ ಆಂತರಿಕ ಬದಲಾವಣೆಯು ಏನನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ಚಿತ್ರದ ಮೂಲಕ ತಿಳಿಯಬಹುದು.

Donate Janashakthi Media

Leave a Reply

Your email address will not be published. Required fields are marked *