“ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ, ದೇಶ ವಿನಾಶದತ್ತ ಸಾಗುತ್ತಿದೆ” ಎಂದಿದ್ದ ನರೇಂದ್ರ ಮೋದಿ
2013ರಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 60 ಇದ್ದಾಗ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ, ದೆಹಲಿಯ ಆಡಳಿತಗಾರಿಗೆ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಕಾಳಜಿ ಇಲ್ಲದಿರುವುದು ದುರದೃಷ್ಟಕರ” ಎಂದು ಯುಪಿಎ ಸರ್ಕಾರವನ್ನು ಟೀಕಿಸಿದ್ದರು. ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಟ್ವಿಟರ್‌ನಲ್ಲಿ “ರೂಪಾಯಿ ತನ್ನ ಮೌಲ್ಯ ಕಳೆದುಕೊಂಡಿದೆ, ಪ್ರಧಾನಿ ಕೃಪೆ ಕಳೆದುಕೊಂಡಿದ್ದಾರೆ” ಎಂದು ಬರೆದಿದ್ದರು. “ಮೋದಿ ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯ 40 ಕ್ಕೆ ಹೆಚ್ಚಾಗುತ್ತದೆ” ಎಂದು ಶ್ರೀ ರವಿ ಶಂಕರ್ ಗುರೂಜಿ ಅವರು 2014ರಲ್ಲಿ ಟ್ವಿಟ್ ಮಾಡಿದ್ದರು. ಇಂದು ರೂಪಾಯಿ ಮೌಲ್ಯ 86ಕ್ಕೆ ಕುಸಿದು, ದೇಶದ ಆರ್ಥಿಕತೆಯನ್ನು ಮತ್ತು ಜನರ ಬದುಕನ್ನು ಮತ್ತಷ್ಟು ಹಿಂಡುತ್ತಿದೆ. ಕುಸಿದ
-ಸಿ.ಸಿದ್ದಯ್ಯ
“ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ ರೂಪಾಯಿ ಮತ್ತು ಯುಪಿಎ ಸರ್ಕಾರಗಳೆರಡೂ ಮೌಲ್ಯ ಕಳೆದುಕೊಂಡಿವೆ. ನಮ್ಮ ದೇಶವನ್ನು ವಿನಾಶದಿಂದ ತಡೆಯುವ ಸಮಯ ಬಂದಿದೆ. ಕೇಂದ್ರ ಸರ್ಕಾರವು ದೇಶವನ್ನು ದಾರಿ ತಪ್ಪಿಸುತ್ತಿದೆ. ನಮ್ಮ ದೇಶ ಏಕೆ ವಿನಾಶದತ್ತ ಸಾಗುತ್ತಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು.” 2013ರ ಆಗಸ್ಟ್ 23ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಆಡಿದ ಮಾತುಗಳಿವು. ಇಂದು ರೂಪಾಯಿ ಮೌಲ್ಯ 86.55ಕ್ಕೆ ಕುಸಿದು (ಜನವರಿ, 13, 2024) ಮತ್ತಷ್ಟು ಪಾತಾಳದತ್ತ ಮುಖಮಾಡಿದೆ. ಕುಸಿದ
ಇಂದು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದೆ. 11 ವರ್ಷಗಳ ಹಿಂದಿನ ಮೌಲ್ಯಕ್ಕೆ ಹೋಲಿಸಿದರೆ ಅಮೆರಿಕದ ಡಾಲರ್ ಎದುರು 26 ಪೈಸೆ ಇಳಿಕೆಯಾಗಿದೆ. ಅಂದರೆ ಒಂದು ಡಾಲರ್ ಬದಲು 60 ರೂ ಕೊಡುತ್ತಿದ್ದ ನಾವು ಇಂದು 86 ರೂಪಾಯಿ ಕೊಡಬೇಕು! ಇದರಿಂದಾಗಿ ಸರಕುಗಳ ಬೆಲೆ ಏರಿಕೆಯಿಂದ, ಜನರು ತಮ್ಮ ದುಡಿಮೆಯಿಂದ ಗಳಿಸುವ ಗಳಿಕೆಯ ಮೌಲ್ಯದಲ್ಲಿ ಕುಸಿತವಾಗಿದೆ. ಜನರು ಹೈರಾಣಾಗಿದ್ದಾರೆ. ಇವೆಲ್ಲವೂ ಮೋದಿಯವರ ಅಂದಿನ ಮಾತುಗಳನ್ನು ಈಗ ಮತ್ತಷ್ಟು ನಿಜ ಮಾಡಿದೆ. ಕುಸಿದ
ಇದನ್ನೂ ಓದಿ: ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ 500 ರೂ. ಗೆ ಎಲ್‌ಪಿಜಿ ಸಿಲಿಂಡರ್ – ಕಾಂಗ್ರೆಸ್ ಭರವಸೆ
ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆಯಷ್ಟೆ!
“ಇತರೆ ದೇಶಗಳ ಕರೆನ್ಸಿ ಎದುರು ಭಾರತದ ಕರೆನ್ಸಿ ರೂಪಾಯಿ ತನ್ನ ಮೌಲ್ಯವನ್ನು ಹೆಚ್ಚು ಕಡಿಮೆ ಕಾಪಾಡಿಕೊಂಡಿದೆ, ಅಮೆರಿಕದ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆಯಷ್ಟೆ. ಇದಕ್ಕೆ ಭಾರತ ಸರ್ಕಾರ ಕಾರಣವಲ್ಲ.” ಎಂದು ರೂಪಾಯಿ ಕುಸಿತವನ್ನು ಸಮರ್ಥಿಸಿಕೊಳ್ಳುವವರಿಗೆ 11 ವರ್ಷಗಳ ಹಿಂದೆ ಮೋದಿಯವರೇ ಹೇಳಿದ ಪರಿಹಾರ ಮಾರ್ಗ ಹೀಗಿದೆ ನೋಡಿ: ಕುಸಿದ
2014ರ ಫೆಬ್ರವರಿ 28ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ನರೇಂದ್ರ ಮೋದಿ ಅವರು, “ನಮ್ಮ ದೇಶದ ರೂಪಾಯಿ ಕುಸಿದಿದೆ. ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. . . ಆಮದುಗಳು ಹೆಚ್ಚುತ್ತಲೇ ಇವೆ, ರಫ್ತು ಕಡಿಮೆಯಾಗುತ್ತಲೇ ಇದೆ. ರಫ್ತುಗಳನ್ನು ಹೆಚ್ಚಿಸುವುದು ಮತ್ತು ಆಮದುಗಳನ್ನು ಕಡಿಮೆ ಮಾಡುವುದು ಒಂದು ಬುದ್ಧಿವಂತ ಸರ್ಕಾರದ ಕೆಲಸ. ಕುಸಿದ
ಬಿಕ್ಕಟ್ಟು ಬರುತ್ತವೆ, ಆದರೆ ಬಿಕ್ಕಟ್ಟಿನ ಸಮಯದಲ್ಲಿ ನಾಯಕತ್ವವು ದಿಕ್ಕಿಲ್ಲದ, ಅಸಹಾಯಕವಾಗಿದ್ದರೆ, ಬಿಕ್ಕಟ್ಟು ತುಂಬಾ ಗಂಭೀರವಾಗಿ ಮಾರ್ಪಡುತ್ತದೆ. ಅದು ನಮ್ಮ ದೇಶಕ್ಕೆ ಸಂಬಂಧಿಸಿದೆ. ದೆಹಲಿಯ ಆಡಳಿತಗಾರಿಗೆ ದೇಶದ ರಕ್ಷಣೆ ಬಗ್ಗೆಯಾಗಲೀ, ರೂಪಾಯಿ ಮೌಲ್ಯ ಕುಸಿತದ ಬಗ್ಗೆಯಾಗಲೀ ಕಾಳಜಿ ಇಲ್ಲದಿರುವುದು ದುರದೃಷ್ಟಕರ. ರೂಪಾಯಿ ಡಾಲರ್ ಮೌಲ್ಯದ ಎದುರು ಕುಸಿಯುತ್ತಿದ್ದರೂ ಕಳೆದ ಮೂರು ತಿಂಗಳಿಂದ ರೂಪಾಯಿ ಬಲಗೊಳ್ಳಲು ಸರ್ಕಾರ ಏನೂ ಮಾಡುತ್ತಿಲ್ಲ. ಕುಸಿದ
ಒಮ್ಮೆ ರೂಪಾಯಿ ಕುಸಿಯುತ್ತಲೇ ಹೋದಂತೆ, ವಿಶ್ವ ಶಕ್ತಿಗಳು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತವೆ. ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಅಂದಿನ ಮನಮೋಹನ್ ಸಿಂಗ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ಕುಸಿದ
ಮೌಲ್ಯ ಕುಸಿತ ತಡೆಯಲು ಉಪಾಯಗಳಿವೆ. ಆದರೆ,
ನರೇಂದ್ರ ಮೋದಿಯವರ 11 ವರ್ಷಗಳ ಹಿಂದಿನ ಮಾತುಗಳನ್ನು ಗಮನಿಸಿದರೆ, ರೂಪಾಯಿ ಮೌಲ್ಯ ಕುಸಿತ ತಡೆಯಲು ಸರ್ಕಾರದ ಬಳಿ ಹಲವು ಮಾರ್ಗಗಳಿವೆ ಎಂದಾಯಿತು. ಆದರೆ, ಅಂತಹ ಮಾರ್ಗಗಳನ್ನು ಅನುಸರಿಸಲು ಸರ್ಕಾರ ಮುಂದಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ಮೂಡುತ್ತದೆ. ಅಂತಹ ಮಾರ್ಗಗಳಲ್ಲಿ “ರಫ್ತುಗಳನ್ನು ಹೆಚ್ಚಿಸುವುದು ಮತ್ತು ಆಮದುಗಳನ್ನು ಕಡಿಮೆ ಮಾಡುವುದು ಒಂದು ಬುದ್ಧಿವಂತ ಸರ್ಕಾರದ ಕೆಲಸ” ಎಂಬ ಮೋದಿಯವರ ಅಂದಿನ ಮಾತುಗಳನ್ನು ಇಂದು ಅವರದೇ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವೇಕೆ? ಯಾವ ಸರಕು ಮತ್ತು ಸೇವೆಗಳು ಅತ್ಯಗತ್ಯವಾಗಿದೆಯೋ ಅಂಥವುಗಳನ್ನು ಹೊರತುಪಡಿಸಿ, ಅನಗತ್ಯ ಸರಕು ಮತ್ತು ಸೇವೆಗಳ ಆಮದಿಗೆ ಕಡಿವಾಣ ಹಾಕಬಹುದಲ್ಲವೇ? ಕುಸಿದ
ಉದಾಹರಣೆಗೆ, ಶ್ರೀಮಂತರು ಬಳಕೆ ಮಾಡುವ ದುಬಾರಿ ಬೆಲೆಯ ಐಶಾರಾಮಿ ಕಾರುಗಳು ಮತ್ತು ಇತರೆ ಅತಿ ಹೆಚ್ಚು ಇಂಧನ ಬಳಕೆ ಮಾಡುವ ಐಶಾರಾಮಿ ವಾಹನಗಳು, ಐಶಾರಾಮಿ ವಸ್ತುಗಳ ಆಮದುಗಳಿಗೆ ಕಡಿವಾಣ ಹಾಕಿ ಡಾಲರ್ ಬಳಕೆಯನ್ನು ಒಂದಷ್ಟು ಕಡಿಮೆ ಮಾಡಬಹುದಲ್ಲವೇ? ನಮ್ಮ ದೇಶದ ಸರಕು ಮತ್ತು ಸೇವೆಗಳ ರಫ್ತುಗಳನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬಹುದಲ್ಲವೇ? ಮೋದಿ ಅಂದು ಹೇಳಿದ ಉಪಾಯಗಳಲ್ಲಿ ಇದಲ್ಲದೆ ಬೇರೆ ಏನಿತ್ತೋ ಅದನ್ನು ಇಂದು ಇವರದೇ ಸರ್ಕಾರ ಮಾಡಲು ಮುಂದಾಗುತ್ತಿಲ್ಲವೇಕೆ? ರೂಪಾಯಿ ಡಾಲರ್ ಮೌಲ್ಯದ ಎದುರು ಕುಸಿಯುತ್ತಿದ್ದರೂ ಕಳೆದ 10 ವರ್ಷಗಳಿಂದ ರೂಪಾಯಿ ಬಲಗೊಳ್ಳಲು ಸರ್ಕಾರ ಏನೂ ಮಾಡುತ್ತಿಲ್ಲ ಎಂಬ ಮಾತನ್ನು ನಾವೀಗ ಹೇಳುವಂತಾಗಿದೆ. ಕುಸಿದ
ವಿಶ್ವ ಶಕ್ತಿಗಳು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತವೆ
“ಒಮ್ಮೆ ರೂಪಾಯಿ ಕುಸಿಯುತ್ತಲೇ ಹೋದಂತೆ, ವಿಶ್ವ ಶಕ್ತಿಗಳು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತವೆ. ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂಬ ಮೋದಿಯವರ ಅಂದಿನ ಮಾತುಗಳು, ರೂಪಾಯಿ ಮೌಲ್ಯ ಕುಸಿತದಿಂದ ಏನೆಲ್ಲಾ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮೋದಿಯವರಿಗೆ ಅರಿವಿದೆ ಎಂಬುದನ್ನು ಹೇಳುತ್ತವೆ. ಆದರೆ, ಇಷ್ಟೆಲ್ಲಾ ಗೊತ್ತಿದ್ದೂ ಮೋದಿಯವರು ಅಧಿಕಾರಕ್ಕೆ ಬಂದು ರೂಪಾಯಿ ಮೌಲ್ಯ ಬಲಗೊಳಿಸಲು, ಮನಮೋಹನ್ ಸಿಂಗ್ ಸರ್ಕಾರದ ನೀತಿಗಳಿಗೆ ಪರ್ಯಾಯವಾಗಿ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬ ಪ್ರಶ್ನೆಗೆ “ಮೋದಿ ಅಥವಾ ಬಿಜೆಪಿ ಬಳಿ ಇದಕ್ಕೆ ಯಾವುದೇ ಪರ್ಯಾಯ ನೀತಿಗಳಿಲ್ಲ” ಎಂಬುದೊಂದೇ ಉತ್ತರವಾಗಿದೆ. ಮೋದಿ ಪ್ರಧಾನಿಯಾದರೆ ರೂಪಾಯಿ ಮೌಲ್ಯದಲ್ಲಿ ಹೆಚ್ಚಳವಾಗುತ್ತದೆ ಎಂದೇ 2014ರ ಚುನಾವಣೆಗೂ ಮುನ್ನ ಬಿಜೆಪಿಯ ಹಲವು ನಾಯಕರು ತಮ್ಮ ಮಾತಿನ ಮೋಡಿಯಿಂದ ಜನರನ್ನು ನಂಬಿಸಿದ್ದರು. ಬಿಜೆಪಿಯ ನಿಜವಾದ ಆರ್ಥಿಕ ನೀತಿಗಳನ್ನು ಅರಿಯದ ಬಹಳಷ್ಟು ಜನರು ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗರ ಮಾತುಗಳನ್ನು ನಿಜವೆಂದೇ ನಂಬಿದ್ದರು. ಕುಸಿದ
“ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಪ್ರಧಾನಿ ಕೃಪೆ ಕಳೆದುಕೊಂಡಿದ್ದಾರೆ” ಸುಷ್ಮಾ ಸ್ವರಾಜ್
2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಗುರಿ ಮುಟ್ಟುವ ಪ್ರಯತ್ನದಲ್ಲಿ ಬಿಜೆಪಿ, ಅದರ ಮಾತೃ ಸಂಸ್ಥೆ ಆರೆಸ್ಸೆಸ್ ಮತ್ತದರ ಪರಿವಾರ (ಸಂಘಪರಿವಾರ) ಏನೆಲ್ಲಾ ತಂತ್ರಗಾರಿಕೆ ನಡೆಸಿದವು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ದೇಶದ ಮತದಾರರ ಬೆಂಬಲ ಪಡೆಯಲು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದ ಇವರಿಗೆ ಸಿಕ್ಕ ಅಸ್ತ್ರಗಳಲ್ಲಿ ರೂಪಾಯಿ ಮೌಲ್ಯದ ಕುಸಿತ ವಿಷಯವೂ ಒಂದು. ಅಂದು, ಬಿಜೆಪಿ ನಾಯಕರು ರೂಪಾಯಿ ಮೌಲ್ಯ ಕುಸಿತ ಕುರಿತಂತೆ ಏನೆಲ್ಲಾ ಹೇಳಿದ್ದರು ಎಂಬುದಕ್ಕೆ ಒಂದರೆಡು ಉದಾಹರಣೆಗಳು ಇಲ್ಲಿವೆ: ಕುಸಿದ
ಪಕ್ಷದ ನಾಯಕಿ ಸುಸ್ಮಾ ಸ್ವರಾಜ್ ಅವರು ಟ್ವಿಟರ್ ನಲ್ಲಿ “ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಪ್ರಧಾನಿ ಕೃಪೆ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದರು.
ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು 11 ಜುಲೈ 2013 ರಂದು “ಯುಪಿಎ ಅಧಿಕಾರಕ್ಕೆ ಬಂದಾಗ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ರಾಹುಲ್ ಗಾಂಧಿಯವರ ವಯಸ್ಸಿಗೆ ಸಮನಾಗಿತ್ತು. ಇಂದು ಅದು ಸೋನಿಯಾ ಗಾಂಧಿ ಅವರ ವಯಸ್ಸಿಗೆ ಸಮಾನವಾಗಿದೆ ಮತ್ತು ಶೀಘ್ರದಲ್ಲೇ ಅದು ಮನಮೋಹನ್ ಸಿಂಗ್ ಅವರ ವಯಸ್ಸನ್ನು ಮುಟ್ಟಲಿದೆ” ಎಂದು ಹೇಳಿದ್ದರು. ಅಂದು ರಾಹುಲ್ ಗಾಂಧಿ ಅವರಿಗೆ 41 ವರ್ಷ, ಸೋನಿಯಾ ಗಾಂಧಿ ಅವರಿಗೆ 67 ವರ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು.
“ತೀಕ್ಷ್ಣವಾದ ಕುಸಿತದ ನಂತರ US ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ 60.15 ಆಗಿದೆ. ಮೇ ಮತ್ತು ಜುಲೈ 9ರ ನಡುವೆ 53 ರಿಂದ 60.15 ಕ್ಕೆ ಕುಸಿದಿದೆ. ರಾಷ್ಟ್ರೀಯ ಹೆಮ್ಮೆಯನ್ನು ಗಂಭೀರವಾಗಿ ಘಾಸಿಗೊಳಿಸುವುದರ ಹೊರತಾಗಿ, ಈ ತೀವ್ರ ಕುಸಿತವು ಪ್ರಸ್ತುತ ಯುಪಿಎ ಸರ್ಕಾರದ ಭಾರತೀಯ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಗೆ ನೇರವಾಗಿ ಸಂಬಂಧಿಸಿದೆ” ಎಂದು ರವಿಶಂಕರ್ ಪ್ರಸಾದ್ ಹೇಳಿದ್ದರು.
ಆದರೆ, ರೂಪಾಯಿ ಕುಸಿತಕ್ಕೆ ಕಾರಣವಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳಿಗೆ ಪರ್ಯಾಯವಾಗಿ ತನ್ನ ಬಳಿ ಯಾವ ನೀತಿಗಳಿವೆ ಎಂಬುದನ್ನು ಬಿಜೆಪಿ ನಾಯಕರು ಅಂದು ಹೇಳಲಿಲ್ಲ. ಇಂದೂ ಹೇಳುತ್ತಿಲ್ಲ. ದೇಶದ ಪ್ರಜೆಗಳನ್ನು ಮಾತುಗಳಿಂದಲೇ ಮರುಳುಮಾಡುವ ಕಲೆಯನ್ನು ಸಂಘಪರಿವಾರ ಎಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
11 ವರ್ಷಗಳಲ್ಲಿ ಶೇ.43ರಷ್ಟು ಕುಸಿದ ರೂಪಾಯಿ ಮೌಲ್ಯ
ಕಳೆದ 11 ವರ್ಷಗಳಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 43ರಷ್ಟು ಕುಸಿದಿದೆ. ಹಿಂದೆಂದೂ ರೂಪಾಯಿ ಮೌಲ್ಯ ಇಷ್ಟೊಂದು ಪ್ರಮಾಣದಲ್ಲಿ ಕುಸಿದಿರಲಿಲ್ಲ. ಹಾಗಾಗಿಯೇ ಈ ಬೆಳವಣಿಗೆ ಆರ್ಥಿಕ ತಜ್ಞರಲ್ಲಿ ಸಂಚಲನ ಮೂಡಿಸಿದೆ. ರೂಪಾಯಿ ಮೌಲ್ಯದ ಕುಸಿತವು ತೈಲದಂತಹ ಅಗತ್ಯವಸ್ತುಗಳ ಆಮದು ವೆಚ್ಚವನ್ನು ಹೆಚ್ಚಿಸುತ್ತದೆ. ತತ್ಪರಿಣಾಮವಾಗಿ ಜನರು ಬಳಕೆ ಮಾಡುವ ವಸ್ತುಗಳ ಬೆಲೆಗಳು ಏರುತ್ತವೆ. ಇದು ಜನರ ದಿನನಿತ್ಯದ ಬದುಕಿನ ಮೇಲೆ ಮತ್ತಷ್ಟು ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ.
ಡಿರಿಜಿಸ್ಟ್ ಅವಧಿಯಲ್ಲಿ (ಅಂದರೆ, ನಿಯಂತ್ರಣ ನೀತಿಗಳ ಅವಧಿಯಲ್ಲಿ) ಸರ್ಕಾರವು ಡಾಲರ್ ಗೆ ಎದುರಾಗಿ ರೂಪಾಯಿಯ ಬೆಲೆಯನ್ನು (ಮತ್ತು ಸಾಂದರ್ಭಿಕವಾಗಿ ಅದರ ಅಪಮೌಲ್ಯದ ಪ್ರಮಾಣವನ್ನು) ನಿರ್ಧರಿಸುವ ಮೂಲಕ ವಿದೇಶಿ ವಿನಿಮಯವನ್ನು ನಿಯಂತ್ರಿಸುತ್ತಿತ್ತು. ಆ ಮೂಲಕ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಆದರೆ, ಈ ನಿಯಂತ್ರಣವನ್ನು 1991ರಲ್ಲಿ ಕಳಚಿ ಹಾಕಿದ ನಂತರ ರೂಪಾಯಿಯ ಮೌಲ್ಯವು ಇಳಿಯುತ್ತಲೇ ಬಂದಿದೆ. ನಿಯಂತ್ರಣಗಳನ್ನು ಕಳಚಿಹಾಕಿದ ಸಮಯದಲ್ಲಿ ವಿನಿಮಯ ದರವು ಡಾಲರ್‌ಗೆ 22.74 ರೂಪಾಯಿಗಳ ಮಟ್ಟದಲ್ಲಿತ್ತು. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಸಮಯದಲ್ಲಿ 62.33 ರೂ.ಗಳಷ್ಟಿದ್ದ ಡಾಲರ್ ಮೌಲ್ಯವು ಈಗ 86.5 ರೂ.ಗಳ ಮಟ್ಟವನ್ನು(ಜನವರಿ 13, 2024) ದಾಟಿದೆ.
“ರೂಪಾಯಿ ಮೌಲ್ಯ ಕುಸಿತದ ಪ್ರಾಥಮಿಕ ಕಾರಣವೆಂದರೆ ಭಾರತದ ಶ್ರೀಮಂತರು ತಮ್ಮ ಸಂಪತ್ತನ್ನು ಭಾರತೀಯ ರೂಪಾಯಿಗಿಂತ ಹೆಚ್ಚಾಗಿ ಅಮೆರಿಕ ಡಾಲರ್ ರೂಪದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದು ರೂಪಾಯಿಯಿಂದ ಡಾಲರ್ ಕರೆನ್ಸಿಗೆ ಹೊರಳುವ ಒಂದು ನಿರಂತರ ಬದಲಾವಣೆಗೆ ಕಾರಣವಾಗುತ್ತದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ” ಎನ್ನುತ್ತಾ ಕುಸಿತಕ್ಕೆ ಮತ್ತೊಂದು ಕಾರಣ ನಿಡುತ್ತಾರೆ ಪ್ರೊ. ಪ್ರಭಾತ್ ಪಟ್ನಾಯಕ್ ಅವರು.
LPG ನೀತಿಗಳನ್ನೇ ಅಳವಡಿಸಿಕೊಂಡಿರುವ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್, ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ನೀಡುವ ಉಪದೇಶಗಳನ್ನು ನಿಷ್ಟೆಯಿಂದ ಪಾಲಿಸುವ ಬಿಜೆಪಿ, ತನ್ನ ಆಡಳಿತದಲ್ಲಿ ರೂಪಾಯಿಯನ್ನು ಬಲಗೊಳಿಸುತ್ತದೆ ಎಂದು ನಂಬಲಾಗದು. ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ತೈಲ ಇವುಗಳ ಬೆಲೆ ಹೆಚ್ಚಳಕ್ಕೆ ರೂಪಾಯಿ ಮೌಲ್ಯದಲ್ಲಿನ ಕುಸಿತವೂ ಒಂದು ಕಾರಣ. ಇದರ ಜೊತೆಗೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳ, ತೈಲ ಕಂಪನಿಗಳ ಲಾಭದ ದುರಾಸೆ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಗಳು ಮತ್ತು ಇತರೆ ಕಾರಣಗಳು ಬೆಲೆ ಹೆಚ್ಚಳಕ್ಕೆ ಕಾರಣ ಎಂಬುದನ್ನು ಹೇಳಲೇಬೇಕಿದೆ. ರೂಪಾಯಿ ಮೌಲ್ಯ ಕುಸಿದರೆ ಬೆಲೆ ಏರಿಕೆ ಖಚಿತ. ಇದರಿಂದಾಗಿ ತರಕಾರಿ, ಉಪ್ಪು, ಬೇಳೆಕಾಳು, ಎಣ್ಣೆ, ಮನೆಯಲ್ಲಿ ಬಳಸುವ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತಿದೆ. ಒಟ್ಟಾರೆಯಾಗಿ ರೂಪಾಯಿ ಕುಸಿತದಿಂದ ತೀವ್ರ ನಷ್ಟ ಅನುಭವಿಸುತ್ತಿರುವವರು ಬಡವರು, ಮಧ್ಯಮ ವರ್ಗದವರು, ಜನಸಾಮಾನ್ಯರು.
ಇದರಿಂದ ಪಾರಾಗಲು ಇರುವ ಮಾರ್ಗವೆಂದರೆ
ಸರ್ಕಾರಗಳು ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯಗಳತ್ತ ಗಮನಹರಿಸಬೇಕು. ಇದರೊಂದಿಗೆ ಉತ್ಪಾದನೆ ಮತ್ತು ರಫ್ತು ಹೆಚ್ಚಳದಿಂದ ವಿದೇಶಿ ವಿನಿಮಯ ಗಳಿಸಬಹುದು ಮತ್ತು ರೂಪಾಯಿಯನ್ನು ಸ್ಥಿರಗೊಳಿಸಬಹುದು. ಮೂಲಸೌಕರ್ಯಗಳನ್ನು ನಿರ್ಮಿಸುವ ಮತ್ತು ಕಾನೂನು, ಸುವ್ಯವಸ್ಥೆಯನ್ನು ಸುಧಾರಿಸುವ ಮೂಲಕ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಬೇಕು. ದೇಶೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳನ್ನು ಸ್ಥಾಪಿಸುವುದು, ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸಿ, ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಬೇಕು.
ಆಮದುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇಂಧನ ಅಗತ್ಯಗಳಿಗಾಗಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಲು ದೇಶೀಯ ಕಂಪನಿಗಳನ್ನು ಪ್ರೋತ್ಸಾಹಿಸಬೇಕು. ಪರ್ಯಾಯ ಇಂಧನ ಮೂಲಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸ್ವಾವಲಂಬನೆಯನ್ನು ಸಾಧಿಸುವುದು ಸಾಧ್ಯ. ದೇಶೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಮೂಲಕ ರಫ್ತಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ, ಭಾರತ ಸರ್ಕಾರದ ನವ ಉದಾರವಾದಿ ನೀತಿಗಳ ವಿರುದ್ದ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳ ವಿರುದ್ದ, ಸಿರಿವಂತರ ಪರವಾದ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಜನರು ದ್ವನಿ ಎತ್ತಿ ಹೋರಾಡುವ ಅವಶ್ಯಕತೆಯಿದೆ.
ಇದನ್ನೂ ನೋಡಿ: ಹೆಚ್ಚು ಗಂಟೆ ದುಡಿಮೆ : ಬಂಡವಾಳಿಗರ ಲಾಭಕ್ಕಾಗಿ ಕಾರ್ಮಿಕರ ಶೋಷಣೆ : ಸುಹಾಸ್ ಅಡಿಗ ಮತ್ತು ಗುರುರಾಜ ದೇಸಾಯಿ ಮಾತುಕತೆ