ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಜೀವಂತವಾಗಿರಿಸಿರುವುದೇ ಆರ್‌ಎಸ್‌ಎಸ್‌ನ 100 ವರ್ಷದ ಸಾಧನೆ – ಯೋಗೇಶ್ ಜಪ್ಪಿನಮೊಗರು

ತಣ್ಣೀರುಬಾವಿ: ಇಡೀ ದೇಶದಲ್ಲಿ ದಲಿತ ಸಮುದಾಯದ ವಿರುದ್ಧ ಸವರ್ಣೀಯರನ್ನು ಎತ್ತಿ ಕಟ್ಟಿರುವುದು ಸಂಘ ಪರಿವಾರದ ಹಿಡನ್ ಅಜೆಂಡಾದ ಭಾಗವಾಗಿದೆ. ದಲಿತರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮುಗಿಸುವ ಎಲ್ಲಾ ಪ್ರಯತ್ನಗಳನ್ನು ಆರ್ ಎಸ್ ಎಸ್ ಸ್ವಾತಂತ್ರ್ಯ ಪೂರ್ವದಿಂದಲೇ ಮಾಡಿಕೊಂಡು ಬಂದಿರುತ್ತದೆ ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗರು ಹೇಳಿದರು. ಅಸ್ಪೃಶ್ಯತೆ 

ಡಿಸೆಂಬರ್‌ 8ರಂದು ತಣ್ಣೀರುಬಾವಿಯಲ್ಲಿ ನಡೆದ ದಲಿತ ಚೈತನ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ʼಡಾ. ಬಿಆರ್ ಅಂಬೇಡ್ಕರ್ ಅವರನ್ನು ಹಾಗೂ ಸಂವಿಧಾನದ ದ್ವೇಷಿಯಾಗಿರುವ ಸಂಘಪರಿವಾರ ಇದ್ದಕ್ಕಿದ್ದಂತೆ ಸಂವಿಧಾನವನ್ನು ಅಪ್ಪಿಕೊಳ್ಳುವ ಸಂವಿಧಾನ್ ಸನ್ಮಾನ್ ಕಾರ್ಯಕ್ರಮದ ಮೂಲಕ ನಾಟಕವಾಡುತ್ತಿದ್ದಾರೆ. ಪ್ರಸ್ತುತ ದಲಿತ ಸಮುದಾಯವು ಸುಶಿಕ್ಷಿತರಾಗಿ ಜಾಗ್ರತಗೊಳ್ಳುತ್ತಿದ್ದು ಸಂಘ ಪರಿವಾರದ ದುರುದ್ದೇಶಗಳು ಹಾಗೂ ಮುಖವಾಡಗಳು ಕಳಚಿ ಬೀಳುತ್ತಿದೆʼ ಎಂದು ಹೇಳಿದರು.

ಇದನ್ನೂ ಓದಿ : ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಸಮುದಾಯ ಹೋರಾಟ: ಲಾಠಿ ಏಟಿಗೆ 20ಕ್ಕೂ ಹೆಚ್ಚು ಜನರು ಗಂಭೀರವಗಿ ಗಾಯ

ಲೋಕಸಭಾ ಚುನಾವಣಾ ಸಂದರ್ಭದಲ್ಲಿ 400 ಸೀಟುಗಳನ್ನು ಗೆಲ್ಲುವುದಾಗಿಯೂ ಸಂವಿಧಾನವನ್ನು ಬದಲಿಸುವುದಾಗಿಯೂ ಹೇಳಿರುವ ಬಿಜೆಪಿ ಈಗ ಸಂವಿಧಾನ ಸನ್ಮಾನ್ ಕಾರ್ಯಕ್ರಮವನ್ನು ನವೆಂಬರ್ 26ರಿಂದ ಜನವರಿ 26ರವರೆಗೆ ರೂಪಿಸಿರುವುದು ಸಂಘ ಪರಿವಾರದ ದುಷ್ಟ ಆಲೋಚನೆಯ ಭಾಗವಾಗಿದೆ. ದಲಿತ ವರ್ಗವನ್ನು ಮನುಷ್ಯರನ್ನಾಗಿ ಕಾಣದ ಸಂಘ ಪರಿವಾರ ಸಂವಿಧಾನದೊಳಗೆ ಮನುಸ್ಮೃತಿಯನ್ನು ತುರುಕಿಸುವ ಕೆಲಸವನ್ನು ಮಾಡುವುದಕ್ಕಾಗಿಯೇ ಸಂವಿಧಾನ ಸನ್ಮಾನ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಶಿಭಿರಾರ್ಥಿಗಳನ್ನು ಉದ್ದೇಶಿಸಿ ಡಿ ಎಚ್ ಎಸ್ ನ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೃಷ್ಣತಣ್ಣೀರುಬಾವಿ ಮಾತನಾಡುತ್ತಾ, ಅಂಬೇಡ್ಕರ್ ಅವರ ಚಿಂತನೆಗಳು ಮಾತ್ರವೇ ದಲಿತರನ್ನು ಮತ್ತು ಶೋಷಿತ ವಿಭಾಗವನ್ನು ಬಂಧಮುಕ್ತಗೊಳಿಸಲಿದೆ. ಆದ್ದರಿಂದ ಎಲ್ಲರೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆ ಇದೆ ಎಂದು ಹೇಳಿದರು.  ಅಸ್ಪೃಶ್ಯತೆ

ಕಾರ್ಯಕ್ರಮದಲ್ಲಿ ಡಿ ಎಚ್ ಎಸ್ ನ ಜಿಲ್ಲಾ ಮುಖಂಡರಾದ ರಾಧಾಕೃಷ್ಣ ಬೊಂಡಂತಿಲ, ಚಂದ್ರಶೇಖರ್ ಕಿನ್ಯಾ, ಮನೋಜ್,ಸುಧಾಕರ್ ರವರು ಉಪಸ್ಥಿತರಿದ್ದರು. ಬೇಬಿ ತಣ್ಣೀರುಬಾವಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.ಸುನೀತಾ ಕೃಷ್ಣರವರು ಕಾರ್ಯದರ್ಶಿಯಾಗಿಯೂ ಸುನಿಲ್ ರವರು ಖಜಾಂಚಿಯಾಗಿಯೂ ಆಯ್ಕೆ ಮಾಡಲಾಯಿತು.9 ಜನರ ಪದಾಧಿಕಾರಿಗಳು ಸೇರಿದಂತೆ ಒಟ್ಟು 17 ಜನರ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.  ಅಸ್ಪೃಶ್ಯತೆ 

ಇದನ್ನೂ ನೋಡಿ : ಪರಿಸರ ಅರಿವು ಅಭಿಯಾನ ಉಪನ್ಯಾಸ|ಹವಾಮಾನ ಬದಲಾವಣೆ : ಕೃಷಿ ಮತ್ತು ಆಹಾರ ಭದ್ರತೆ Janashakthi Media

Donate Janashakthi Media

Leave a Reply

Your email address will not be published. Required fields are marked *