ಸಿಪಿಐ(ಎಂ) ಮುಖಂಡನ ಕೊಲೆ ಪ್ರಕರಣ: 7 ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ಣ್ಣೂರು: ಇಲ್ಲಿನ ತಲಶ್ಶೇರಿಯ ನ್ಯಾಯಾಲಯವು 2008 ರಲ್ಲಿ ಸಿಪಿಐ(ಎಂ) ಸ್ಥಳೀಯ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 8ರಂದು ಏಳು ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಮಲ್ ಜೆ. ಅವರು ತೀರ್ಪು ನೀಡಿ ಆರೋಪಿಗಳಾಗಿದ್ದ ಸುಮಿತ್ ಅಲಿಯಾಸ್ ಕುಟ್ಟನ್, ಕೆ.ಕೆ ಪ್ರಜೇಶ್ ಬಾಬು, ಬಿ ನಿಧಿನ್, ಕೆ ಸನಲ್, ಸ್ಮಿಜೋಷ್, ಸಜೀಶ್ ಮತ್ತು ವಿ ಜಯೇಶ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು.

ಇದನ್ನೂ ಓದಿ: ಉಪ ಲೋಕಾಯುಕ್ತ ಭೇಟಿ: ಕೆಪಿಎ ವ್ಯಾಪ್ತಿಯಲ್ಲಿ 63 ಅಕ್ರಮ ಲೇಔಟ್‌-28 ಪಿಜಿ ಪತ್ತೆ; ಪ್ರಕರಣ ದಾಖಲು

ನ್ಯಾಯಾಲಯವು ಸಂತೋಷ್ ಕುಮಾರ್, ಬಿ.ಶರತ್, ಇ.ಕೆ. ಸನೀಶ್ ಮತ್ತು ಕುನ್ನುಂಪ್ರತ್ ಅಜೇಶ್ ಅವರನ್ನು ಖುಲಾಸೆಗೊಳಿಸಿತು, ಆದರೆ ಎಂಟನೇ ಆರೋಪಿ ಕೆ ಅಜಿತ್ ವಿಚಾರಣೆಯ ಸಮಯದಲ್ಲಿ ನಿಧನ ಹೊಂದಿದ್ದರು.

2008 ಡಿಸೆಂಬರ್ 31 ರಂದು ತಲಶ್ಶೇರಿ ಬಳಿಯ ಥಲೈಯಲ್ಲಿ ರಾಜಕೀಯ ದ್ವೇಷದ ಭಾಗವಾಗಿ ಸಿಪಿಐ(ಎಂ) ಸ್ಥಳೀಯ ಮುಖಂಡ ಲತೀಶ್ ಅವರ ಕೊಲೆ ನಡೆದಿತ್ತು ದಾಳಿಯಲ್ಲಿ ಅವರ ಸ್ನೇಹಿತ ಕೂಡ ಗಾಯಗೊಂಡಿದ್ದರು.

ಇದನ್ನೂ ನೋಡಿ: ವೆನೆಜುವೆಲಾ | ಅಮೆರಿಕ ಪುಂಡಾಟವನ್ನು ಖಂಡಿಸಿ ಭಾರತದಾದ್ಯಂತ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *