ನವದೆಹಲಿ: ರೈಲಿನೊಳಗೆ ಮಾರಾಟ ಮಾಡುವವರು ಸಹಜವಾಗಿ ಆ ಉತ್ಪನ್ನಗಳಿಗೆ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ರೈಲಿನಲ್ಲಿ ಯಾವುದೇ ಉತ್ಪನ್ನಕ್ಕೂ ಎಂಆರ್ಪಿ ಬೆಲೆಗಿಂತ ಹೆಚ್ಚು ಪಡೆಯುವಂತಿಲ್ಲ. ಹೀಗೆ ಮಾಡಿದರೆ ಮಾರಾಟ ಮಾಡುವ ವೆಂಡರ್ ಮೇಲೆ ದುಬಾರಿ ದಂಡ ವಿಧಿಸಲಾಗುತ್ತದೆ. ಬಾಟಲಿ
ಇದೇ ತರಹದ ಘಟನೆ ಪೂಜಾ ಎಸ್ಎಫ್ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಪ್ರಯಾಣಿಕನೊಬ್ಬ ರೈಲು ನೀರು ಬಾಟಲಿಯನ್ನು ಖರೀದಿಸಿದ್ದಾನೆ. 15 ರೂಪಾಯಿ ಬಾಟಲಿಯನ್ನು 20 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಪ್ರಶ್ನಿಸಿದರೆ, ಇಷ್ಟೇ ಬೇಕಾದರೆ ತಗೊಳಿ ಎಂದು ಹೇಳಿ ಮುಂದಕ್ಕೆ ಸಾಗಿದ್ದಾನೆ.
ಆದರೆ ಪ್ರಯಾಣಿಕ ವಿಡಿಯೋ ಮೂಲಕ ಮಾಹಿತಿ ನೀಡಿ ಭಾರತೀಯ ರೈಲ್ವೆಗೆ ದೂರು ದಾಖಲಿಸಿದ್ದಾನೆ. ಪರಿಣಾಮ ಭಾರತೀಯ ರೈಲ್ವೇ ವೆಂಡರ್ಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ಉತ್ತರ ಪ್ರದೇಶ| ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆ; ಇಂಟರ್ನೆಟ್ ಸ್ಥಗಿತ
ಮಿನಿಸ್ಟ್ರಿ ಆಫ್ ರೈಲ್ವೆಸ್ ಈ ವಿಡಿಯೋವನ್ನು ಹಂಚಿಕೊಂಡು ಮಾಹಿತಿ ನೀಡಿದೆ. ಪ್ರಯಾಣಿಕನೊಬ್ಬ ರೈಲಿನಲ್ಲಿ ನೀರಿನ ಬಾಟಲಿ ಖರೀದಿಸಿದ್ದಾನೆ, ರೈಲು ನೀರಿನ ಬಾಟಲಿ ಬೆಲೆ 15 ರೂಪಾಯಿ ಆದರೆ 20 ರೂಪಾಯಿಗೆ ವೆಂಡರ್ ಮಾರಾಟ ಮಾಡಿದ್ದಾನೆ. ವಿಡಿಯೋ ಮಾಡುತ್ತಿದ್ದ ಪ್ರಯಾಣಿಕ, ನಾನು 15 ರೂಪಾಯಿ ನೀರಿನ ಬಾಟಲಿಯನ್ನು 20 ರೂಪಾಯಿಗೆ ಖರೀದಿಸಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೆ, ಈ ಕುರಿತು ದೂರು ನೀಡುವುದಾಗಿ ಎಚ್ಚರಿಸಿದ್ದಾನೆ. ಆದರೆ ಮಾರಾಟಗಾರ ಈ ಮಾತನ್ನು ಲೆಕ್ಕಿಸದೆ ಮುಂದೆ ಸಾಗಿದನು.
ಪ್ರಯಾಣಿಕ ಭಾರತೀಯ ರೈಲ್ವೆಯ ಸಹಾಯವಾಣಿ 139 ನಂಬರ್ಗೆ ಕರೆ ಮಾಡಿ ದೂರು ನೀಡಿದ್ದಾನೆ, ಕೋಚ್ ನಂಬರ್, ರೈಲಿನ ವಿವರ, ಪ್ರಯಾಣಿಕರ ವಿವರಗಳನ್ನು ದೂರಿನ ವೇಳೆ ನೀಡಿದ್ದೂ, ಕೆಲವೇ ಕ್ಷಣದಲ್ಲಿ ಪ್ರಯಾಣಿಕನ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ನೀರಿನ ಬಾಟಲಿ ಮಾರಾಟದ ವೆಂಡರ್ ಪಡೆದವರನ್ನು ರೈಲ್ವೇ ಇಲಾಖೆ ಸಂಪರ್ಕಿಸಿದೆ. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ನಡೆದಿದೆ.
ದೂರು ನೀಡಿದ ಪ್ರಯಾಣಿಕನ ಪ್ರಯಾಣ ಮುಂದುವರಿದಿತ್ತು. ಕೆಲ ಹೊತ್ತಲ್ಲೇ ವೆಂಡರ್ ಆಗಮಿಸಿ ದೂರು ನೀಡಿದ ಪ್ರಯಾಣಿಕನಿಗೆ 5 ರೂಪಾಯಿ ಹಿಂದಿರುಗಿಸಿದ್ದಾನೆ. ನೀರಿನ ಬಾಟಲಿಗೆ ಹೆಚ್ಚುವರಿಯಾಗಿ ಪಡೆದ ಹಣ ಹಿಂದಿರುಗಿಸುವುದಾಗಿ ಹೇಳಿದ್ದಾನೆ. ಈ ರೈಲಿನಲ್ಲಿ ಹೆಚ್ಚುವರಿಯಾಗಿ 5 ರೂಪಾಯಿ ಪಡೆದ ಎಲ್ಲಾ ಪ್ರಯಾಣಿಕರಿಗೆ 5 ರೂಪಾಯಿ ಹಿಂದಿರುಗಿಸುವಂತೆ ಸೂಚಿಸಿದ್ದಾನೆ. ಇದರಂತೆ ವಂಡರ್ ಎಲ್ಲರಿಗೂ 5 ರೂಪಾಯಿ ವಾಪಸ್ ನೀಡಿದ್ದಾನೆ, ರೈಲ್ವೇ ಇಲಾಖೆ ಕ್ರಮ ಇಷ್ಟಕ್ಕೆ ಮುಗಿದಿಲ್ಲ, ವೆಂಡರ್ ಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಕುರಿತು ಪ್ರಯಾಣಿಕನ ವಿಡಿಯೋ, ರೈಲ್ವೇ ಇಲಾಖೆಯ ಕ್ರಮದ ಕುರಿತು ಮಿನಿಸ್ಟ್ರಿ ಆಫ್ ರೈಲ್ವೇಸ್ ವಿಡಿಯೋ ಹಂಚಿಕೊಂಡಿದೆ. ರೈಲಿನಲ್ಲಿ ಹಚ್ಚುವರಿ ಹಣ ಪಡೆಯುತ್ತಿರುವ ಕುರಿತು ಬಂದ ದೂರಿಗೆ ತಕ್ಷಣ ಕ್ರಮಕೈಗೊಳ್ಳಲಾಗಿದೆ. ವೆಂಡರ್ಗೆ 1 ಲಕ್ಷ ರೂಬಾಯಿ ಫೈನ್ ಹಾಕಲಾಗಿದೆ. ಜೊತೆಗೆ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಪಡೆದ 5 ರೂಪಾಯಿ ಮೊತ್ತವನ್ನು ಮರಳಿಸಲಾಗಿದೆ ಎಂದು ಟ್ವಿಟ್ ಮಾಡಿದೆ.
ಭಾರತೀಯ ರೈಲ್ವೆ ಪ್ರಯಾಣಿಕರ ಯಾವುದೇ ದೂರು ದುಮ್ಮಾನಗಳಿಗೆ ತಕ್ಷಣ ಸ್ಪಂದಿಸುತ್ತದೆ. ರೈಲು ಪ್ರಯಾಣದ ವೇಳೆ ಸುಲಭವಾಗಿ ರೈಲ್ವೇ ಸಹಾಯವಾಣಿಗೆ ದೂರು ನೀಡಿದರೆ ಮುಂದಿನ ನಿಲ್ದಾಣ ತಲುಪುವದೊರೊಳಗೆ ಕ್ರಮ ಕೈಗೊಳ್ಳಲಾಗುತ್ತದೆ. ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆ ಇಲಾಖೆ ಹೆಚ್ಚಿನ ಗಮನಹರಿಸಿದೆ. ಇದಕ್ಕಾಗಿ ಹಲವು ಸಹಾಯವಾಣಿಗಳನ್ನು ದೂರು ವಿಭಾಗಗಳನ್ನು ತೆರೆದಿದೆ. ಈ ಮೂಲಕ ಪ್ರಯಾಣಿಕರು ದೂರು ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.
ಇದನ್ನೂ ನೋಡಿ: ಆರ್.ಬಿ. ಮೋರೆ | ಈ ಪುಸ್ತಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದರಿಂದ ಸರಳವಾಗಿ ಅನುವಾದಿಸಿದೆ – ಅಬ್ದುಲ್ ರೆಹಮಾನ ಪಾಷಾ