ಹೈದರಾಬಾದ್: ತೆಲಂಗಾಣ ರಾಜ್ಯದ ಗ್ರಾಮ ಪಂಚಾಯತಿ ಕಛೇರಿಯೊಂದರ ತಿಂಗಳ ವಿದ್ಯುತ್ ಬಳಕೆ ಶುಲ್ಕ ಬರೋಬ್ಬರಿ 11.14 ಕೋಟಿ ರೂಪಾಯಿ ಎಂದು ರಸೀದಿ ಬಂದಿದೆ. ಈ ಬಗ್ಗೆ ಶುಲ್ಕ ಚೀಟಿಯು ಸಾಕಷ್ಟು ವೈರಲ್ ಆಗಿದ್ದು ಆಚ್ಚರಿಯನ್ನು ಮೂಡಿಸಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಕೊತ್ತಪಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಜನವರಿ ತಿಂಗಳ ವಿದ್ಯುತ್ ಶುಲ್ಕದ ರಸೀದಿ ನೀಡಲಾಗಿದೆ. ಅದರಲ್ಲಿ ರೂ. 11,41,63,672 ಹಣ ಸಂದಾಯವಾಗಬೇಕೆಂದು ತಿಳಿಸಲಾಗಿದೆ. ವಿದ್ಯುತ್ ಶುಲ್ಕದ ಮೊತ್ತ ನೋಡಿ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ವಿದ್ಯುತ್ ಶುಲ್ಕದ ರಸೀದಿ ನೋಡಿದ ಗ್ರಾಮ ಪಂಚಾಯಿತಿ ಸದಸ್ಯರು ಅಚ್ಚರಿಗೊಂಡಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಿದಾಗ ಇದು ತಾಂತ್ರಿಕ ದೋಷದಿಂದ ಉಂಟಾದ ಎಡವಟ್ಟು ಕ್ಷಮಿಸಿ ಎಂದಿದ್ದಾರೆ. ಪರಿಶೀಲನೆ ನಡೆಸಿ ಬೇರೆ ರಸೀದಿಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ