ಆನೇಕಲ್ :- ಇತ್ತೀಚಿಗೆ ಬೆಂಗಳೂರು ಹೊರವಲಯದ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳು ಹೆಚ್ಚುತ್ತಲೇ ಇದ್ದ ಹಿನ್ನೆಲೆ ಸರ್ಜಾಪುರ ಪೊಲೀಸರಿಂದ ಇಂದು ಠಾಣೆಗೆ ರೌಡಿ ಶೀಟರ್ ಗಳನ್ನು ಗಳನ್ನು ಕರೆಸಿ ಇನ್ಸ್ಪೆಕ್ಟರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಠಾಣೆಗೆ ಕರೆಸಿದ್ದ ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 53 ರೌಡಿ ಆಸಾಮಿಗಳು ಇದ್ದು ಅದರಲ್ಲಿ ಕೇವಲ 33 ಮಂದಿ ಮಾತ್ರ ರೌಡಿ ಪೆರೇಡ್ ಗೆ ಹಾಜರಾಗಿದ್ದರು,
ಇದನ್ನು ಓದಿ:ರಾಜ್ಯ ಬಜೆಟ್: ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಬಜೆಟ್
ಕೆಲವು ಜನಪ್ರತಿನಿಧಿಗಳು ಹಾಗೂ ಬಲಾಡ್ಯರು ಪೊಲೀಸರ ಮಾತಿಗೂ ಸಹ ಕಿಮ್ಮತ್ತು ನೀಡದೆ ರೌಡಿ ಪರೇಡ್ ಗೆ ಹಾಜರಾಗಿರದೆ ಇರುವುದು ಕಂಡುಬಂದಿತು. ಈ ಸಮಯದಲ್ಲಿ ಅಪರಾಧ ಕೃತ್ಯ ಗಳಲ್ಲಿ ಭಾಗಿ ಆದರೆ ಗೂಂಡಾ ಖಾಯ್ದೆ ಹಾಗೂ ಗಡಿಪಾರು ಮಾಡಲಾಗುತ್ತದೆ, ಬಾಲ ಬಿಚ್ಚಿದರೆ ಕಾನೂನಿನ ರೀತಿ ಕ್ರಮ ಆಗುತ್ತೆ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಕಡೆಗಳಲ್ಲಿ ಅಡ್ಡಾಡ್ತಾ ಇರುವವರಿಗೆ ಬಾಲ ಕಟ್ ಮಾಡ್ತೇವೆ ಎಂದು ಸರ್ಜಾಪುರ ಇನ್ಸ್ಪೆಕ್ಟರ್ ನವೀನ್ ರೌಡಿ ಆಸಾಮಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
https://www.youtube.com/live/RqHYaB4F5zo?si=8N18_d5TRQUsHiyx