ಯಾದಗಿರಿ: ನಗರದಲ್ಲಿ ಫೆಬ್ರವರಿ 20, ಗುರುವಾರದಂದು ಅಲೆಮಾರಿ ಬುಡ್ಗ ಜಂಗಮ ಜಾತಿಯ ಇಬ್ಬರು ಯುವತಿಯರ ಸಾ ವು ಸಂಶಯಾಸ್ಪವಾಗಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಅಲೆಮಾರಿ ಬೇಡ ಬುಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ವಿವಿಧ ದಲಿತ ಪರ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಯಾದಗಿರಿ
ಪ್ರತಿಭಟನಾ ಮೆರವಣಿಗೆಯು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತದಿಂದ ಆರಂಭವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ತಲುಪಿ ಮನವಿ ಮನವಿ ಸಲ್ಲಿಸಲಾಯಿತು. ಯಾದಗಿರಿ
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಗುರುಮಠಕಲ್ ಪಟ್ಟಣದ ಇಂದಿರಾ ನಗರದ ವಾರ್ಡ್ ನಂ. 10 ರ ಅಲೆಮಾರಿ ವೇಷಗಾರ ಸಮುದಾಯದ ಇಬ್ಬರು ಯುವತಿಯರಾದ ಶ್ಯಾಮಮ್ಮ ಹುಸೇನಪ್ಪ ಸಿರಿಗಿರಿ (19), ಸಾಯಮ್ಮ ಭೀಮಪ್ಪ ಸಿರಿಗಿರಿ (15) ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಮನೆಯಿಂದ ಚಿಂದಿ ಆಯಲು ಹೋಗಿ ಫೆಬ್ರುವರಿ 12ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇಬ್ಬರ ಶವವು ಸಿಕ್ಕಿರುತ್ತದೆ. ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣ ದರ ನಿಗದಿಯೂ, ಮುಕ್ತ ಆರ್ಥಿಕ ನೀತಿಯೂ
ಈಗ್ಗೆ ಒಂದು ತಿಂಗಳ ಹಿಂದೆ ಗುರುಮಠಕಲ್ ಪಟ್ಟಣದಲ್ಲಿ ಚಿಂದಿ ಆಯುತ್ತಿದ್ದಾಗ ಮುಸ್ಲಿಂ ಕೋಮಿಗೆ ಸೇರಿದ ಶೇಖ್ ಹುಸೇನ್ ಎಂಬವನು ಯುವತಿಯ ಕೈಹಿಡಿದು ಎಳೆದಾಡಿದ್ದು, ಆಗ ಶಾಮಮ್ಮ ಅವನಿಗೆ ಚೆಪ್ಪಲಿಯಿಂದ ಹೊಡೆದಿದ್ದಾಳೆ. ನಂತರ ಅವನು ಬಾಲಕಿಯರ ಬೆನ್ನುಬಿದ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಎಸೆದಿರುವ ಅನುಮಾನವಿದ್ದು, ವಿಶೇಷ ತಂಡ ರಚಿಸಿ ತನಿಖೆ ನಡೆಸುಂತೆ ಒತ್ತಾಯಿಸಿದರು.
ಯುವತಿಯರ ಸಾವು ಅನುಮಾನಕ್ಕೀಡು ಮಾಡಿಕೊಟ್ಟಿದ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿರುವ ಬಗ್ಗೆ ಸಂಶಯವಿದೆ. ಈ ಘಟನೆ ನಂತರ ಕೆಲವು ಅಪರ್ಚಿತ ವ್ಯಕ್ತಿಗಳು ಇಂದಿರಾ ನಗರದ ಗುಡಿಸಲಿಗಳಿಗೆ ಬಂದು ನೀವೇನಾದರೂ ಕೇಸ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು, ಜೀವ ಬೆದರಿಕೆ ಹಾಕಿದ್ದು, ಕುಟುಂಬದವರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಹೀಗಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು
ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಕುಟುಂಬದವರಿಗೆ ನೌಕರಿ ಕೊಡಬೇಕು, ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು.
ಪ್ರತಿಭಟನಾ ಮೆರವಣಿಗೆಯಲ್ಲಿ ಅಲೆಮಾರಿಗಳ ರಾಜ್ಯ ಘಟಕದ ಅಧ್ಯಕ್ಷ ಆಂಜಿನೇಯ, ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಎಸ್. ನಾಟೇಕರ್, ಅಲೆಮಾರಿಗಳ ಚಿಂದಿ ಆಯುವವರ ಸಮಾಜದ ಮುಖಂಡ ಸಹದೇವ, ಮೋತಿ ಯಲ್ಲಪ್ಪ, ಈ.ರಮೇಶ, ತಾಲ್ಲೂಕು ಅಧ್ಯಕ್ಷ ಯಮನಪ್ಪ, ಜೈರಾಮ ಯಣ್ಣಿ, ಬಸವರಾಜ ಕೊಂಡ್ರು, ಮಹೇಶ ಸೈದಾಪುರ, ನಾಗರಾಜ ಗುರುಮಠಕಲ್, ಸೈದು ವಿಭೂತಿ, ರಂಗಮುನಿದಾಸ ರಾಯಚೂರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬಿಟ್ಟಿ ಚಾಕರಿ ಬೇಡ ಸೇವಾ ಭದ್ರತಿ ನೀಡಿ | ಕರ್ನಾಟಕ ಸಂಜೀವಿನಿ ನೌಕರರ ಹೋರಾಟ Janashakthi Media