ಪಾಟ್ನಾ | ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತ ಮತದಾನ ವಿಳಂಬಕ್ಕೆ ಆರ್‌ಜೆಡಿ ಆರೋಪ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಈ ಆರೋಪವನ್ನು ಹೊರಿಸಿದೆ.  ಪಾಟ್ನಾ

ಇದನ್ನೂ ಓದಿ : ನವೆಂಬರ್‌ 4ರಿಂದ 3 ಕೇಂದ್ರಾಡಳಿತ ಪ್ರದೇಶ, 9 ರಾಜ್ಯಗಳಲ್ಲಿ ಎಸ್‌ಐಆರ್‌ ಆರಂಭ

ಮಹಾಘಟಬಂಧನ್ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರ್ ಜೆ ಡಿ ಆರೋಪಿಸಿದೆ.

ಈ ಕುರಿತು X ನಲ್ಲಿ ಆರ್‌ಜೆಡಿ ಪೋಸ್ಟ್ ಮಾಡಿದ್ದು, “ಮತದಾನ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಕೆಲವು ಪ್ರಬಲ ಮತಗಟ್ಟೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಚುನಾವಣಾ ಆಯೋಗವು ಈ ದುರುದ್ದೇಶಪೂರಿತ ಕ್ರಮಗಳನ್ನು ತಕ್ಷಣ ಗಮನಿಸಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದೆ.

ಇದನ್ನೂ ನೋಡಿ : ನಿರಂಜನ ಶತಮಾನ | ನಿರಂಜನ ಆಧುನಿಕ ಮನಸ್ಸಿನ ಪ್ರಯೋಗಶೀಲ ಸಾಹಿತಿ – ಪ್ರೊ. ರಾಜೇಂದ್ರ ಚೆನ್ನಿ Janashakthi Media

Donate Janashakthi Media

Leave a Reply

Your email address will not be published. Required fields are marked *