ಕಂದಾಯ ಇಲಾಖೆ ವರ್ಷದ ಅಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣ: ಕೃಷ್ಣ ಬೈರೇಗೌಡ

ಬೆಂಗಳೂರು: ಕಂದಾಯ ಇಲಾಖೆ ವರ್ಷದ ಅಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದ್ದು, ಪ್ರತಿಯೊಂದು ದಾಖಲೆಯ ಪ್ರತಿಯೂ ಡಿಜಿಟಲ್‌ ರೂಪದಲ್ಲಿ ಸಿಗಲಿದೆ ಎಂದು ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

‘ರೋವರ್‌ ಮೂಲಕ ಸರ್ವೇ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಕಾರ್‌ ಬಂದ್‌, ಕೈಬರಹ ಸೇರಿ ಪ್ರತಿಯೊಂದರ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಹತ್ತಾರು ವರ್ಷಗಳಿಂದ ಆಗದ ಕೆಲಸಗಳು ಸಾವಿರ ದಿನಗಳಲ್ಲಿ ಆಗಿವೆ’ ಎಂದರು.

ಇದನ್ನೂ ಓದಿ: ಏರುತ್ತಿರುವ ಸಾಲ, ಕುಗ್ಗಿದ ಕಲ್ಯಾಣ: ಆಂಧ್ರ ಬಜೆಟ್‌ ವಿರುದ್ಧ ವ್ಯಾಪಕ ಟೀಕೆ

2,05,757 ರೈತರ ಜಮೀನುಗಳ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳುಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆ ಪೂರ್ಣಗೊಳಿಸಲಾಗುವುದು. 1,07,217 ರೈತರ ಕಡತಗಳನ್ನು ಕಾಣೆಯಾದ ಕಡತಗಳ ಸಮಿತಿಗೆ ಕಳುಹಿಸಲಾಗಿದೆ. 3,662 ರೈತರಿಗೆ ದಾಖಲೆ ನೀಡಲಾಗಿದೆ. 50,000 ಕಡತಗಳನ್ನು ಮೂರು ತಿಂಗಳಲ್ಲಿ ವಿಲೇಗೊಳಿಸಲು ಗಡುವು ನೀಡಲಾಗಿದೆ ಎಂದು ಹೇಳಿದರು.

‘1.06 ಲಕ್ಷ ರೈತರ ದಾಖಲೆಗಳು ಮಂಜೂರು ವಿಸ್ತೀರ್ಣಕ್ಕಿಂತ ಹೆಚ್ಚು ಇದ್ದು, ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. 3.50 ಲಕ್ಷ ರೈತರ ಮಂಜೂರು ಕಡತಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. 11,74,226 ರೈತರ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕೆಂದು ಸೂಚಿಸಲಾಗಿದೆ’ ಎಂದರು.

ಫೌತಿ ಖಾತೆ ಅಭಿಯಾನ

ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಅವರ ವಾರಸುದಾರರು ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂದಾಖಲೆಗಳು ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ. ಈಗಾಗಲೇ ವಾರಸುದಾರರ ಮನೆ ಬಾಗಿಲಿಗೆ ತೆರಳಿ 13 ಲಕ್ಷ ಜಮೀನುಗಳ ಪೌತಿ ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *