ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಪಟು ಭಜರಂಗ್‌ ಪುನಿಯಾಗೆ ಕಂಚು

ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟು ಭಜರಂಗ್‌ ಪುನಿಯ ಪದಕ ಗೆಲ್ಲುವುದೊಂದಿಗೆ ಭಾರತ ಮತ್ತೊಂದು ಕಂಚು ಲಭಿಸುವಂತೆ ಮಾಡಿದ್ದಾರೆ. ಈ ಮೂಲಕ ಪದಕ ಪಡೆಯುವುದರೊಂದಿಗೆ ಭಜರಂಗ್‌ ಪುನಿಯಾ ದಾಖಲೆ ಮಾಡಿ ಮಾಡಿದ್ದಾರೆ.

ಇಂದಿನ ಕಂಚಿ ಪದಕಕ್ಕಾಗಿನ ಹೋರಾಟದಲ್ಲಿ ಭಾರತದ ಪೈಲ್ವಾನ ಬಜರಂಗ್ ಪೂನಿಯಾ, ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರು. 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್​ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿದರು.

ಇದನ್ನು ಓದಿ: ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿದ ಭಜರಂಗ್‌ ಪೂನಿಯಾ

ಈ ಹಿಂದೆ ಸೆಮಿ ಫೈನಲ್​ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದ ಪುನಿಯಾ ಫೈನಲ್​ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 5-12 ಅಂಕಗಳದಿಂದಾಗಿ ಭಜರಂಗ್‌ ಪುನಿಯಾ ಸೋಲನುಭವಿಸಿದ್ದರು.

3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಭಾರತೀಯ ಕುಸ್ತಿಪಟು ಆಕ್ರಮಣಕಾರಿ ಹೋರಾಟ ನಡೆಸಿದರು. ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅದರಂತೆ ಎದುರಾಳಿಗೆ ಯಾವುದೇ ಅಂಕ ಬಿಟ್ಟುಕೊಡದೆ 8-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಇದನ್ನು ಓದಿ: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು, ರವಿಕುಮಾರ್ ದಾಹಿಯ ಬೆಳ್ಳಿ ಪದಕ ಗೆದ್ದಿದ್ದರೆ, ಪಿವಿ ಸಿಂಧು ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ತಂದಿದ್ದಾರೆ. ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ, ಭಜರಂಗ್‌ ಪೂನಿಯಾ ಸಹ ಕಂಚಿನ ಪದಕ ಪಡೆದುಕೊಳ್ಳುವುದರೊಂದಿಗೆ, ಭಾರತಕ್ಕೆ ಇದುವರೆ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಲಭಿಸಿವೆ.

Donate Janashakthi Media

Leave a Reply

Your email address will not be published. Required fields are marked *