ಗಾಜಾ ಕದನ ವಿರಾಮ | ವಿಶ್ವಸಂಸ್ಥೆ ನಿರ್ಣಯದ ಪ್ರಮುಖ ಅಂಶಗಳು ಇಲ್ಲಿವೆ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಶುಕ್ರವಾರ ಗಾಜಾ ಬಿಕ್ಕಟ್ಟಿನ ಕುರಿತು ಪ್ರಮುಖ ನಿರ್ಣಯವನ್ನು ಅಂಗೀಕರಿಸಿತು. “ತಕ್ಷಣದ, ದೀರ್ಘಕಾಲಿಕ ಮತ್ತು ನಿರಂತರ ಮಾನವೀಯತೆಯ ಕಾರಣಕ್ಕಾಗಿ ಕದನ ವಿರಾಮ”ಕ್ಕೆ ನಿರ್ಣಯವು ಕರೆ ನೀಡಿತು. ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ನಡುವೆ ಪ್ರಾರಂಭವಾದ ಯುದ್ಧದ ನಂತರ ಗಾಜಾ ಪಟ್ಟಿಯಲ್ಲಿ ತೀವ್ರ ಮಾನವೀಯ ಬಿಕ್ಕಟ್ಟು ಏರ್ಪಟ್ಟಿದೆ.

ಈ ನಡುವೆ ಇಸ್ರೇಲ್ ಗಾಜಾಕ್ಕೆ ವಿದ್ಯುತ್, ನೀರು ಮತ್ತು ಇಂಧನದ ಪೂರೈಕೆಯನ್ನು ಕಡಿತಗೊಳಿಸಿದೆ. ಜೊತೆಗೆ ವಿಶ್ವಸಂಸ್ಥೆ, ರೆಡ್‌ಕ್ರಾಸ್‌ ಹಾಗೂ ಇತರ ಸಂಸ್ಥೆಗಳು ಮಾನವೀಯ ಪರಿಹಾರದ ಸೇವೆ ಮತ್ತು ಸರಕುಗಳು ಗಾಜಾ ಪ್ರವೇಶಿಸದಂತೆ ನಿರ್ಬಂಧಿಸಿತ್ತು.

ಇದನ್ನೂ ಓದಿ: ಸಲಿಂಗ ವಿವಾಹಗಳ ಕುರಿತ ನಿರಾಶಾದಾಯಕ ತೀರ್ಪು- ಎಐಡಿಡಬ್ಲ್ಯುಎ

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನಡೆದ ಮತದಾನದಲ್ಲಿ ಕದನ ವಿರಾಮಕ್ಕಾಗಿ 121 ಸದಸ್ಯ ರಾಷ್ಟ್ರಗಳು ಪರವಾಗಿ ಮತದಾನ ನೀಡಿದವು. 14 ರಾಷ್ಟ್ರಗಳು ವಿರುದ್ಧವಾಗಿ ಹಾಗೂ ಭಾರತ ಸೇರಿದಂತೆ 44 ರಾಷ್ಟ್ರಗಳು ಮತದಾನದಿಂದ ಹಿಂದೆ ಸರಿದವು.

“ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಕಟ್ಟುಪಾಡುಗಳನ್ನು ಎತ್ತಿಹಿಡಿಯುವುದು. ಅಂತರರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನುಗಳ ಅಡಿಯಲ್ಲಿ ಎಲ್ಲಾ ಕಡೆಯವರು ತಕ್ಷಣವೇ ಮತ್ತು ಸಂಪೂರ್ಣವಾಗಿ ಕಟ್ಟುಪಾಡುಗಳನ್ನು ಅನುಸರಿಸಬೇಕು” ಎಂದು ವಿಶ್ವಸಂಸ್ಥೆ ಅಸೆಂಬ್ಲಿ ನಿರ್ಣಯದಲ್ಲಿ ಒತ್ತಾಯಿಸಿತು.

ವಿಶೇಷವಾಗಿ ನಾಗರಿಕರು ಮತ್ತು ನಾಗರಿಕ ವಸ್ತುಗಳ ರಕ್ಷಣೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕಾನೂನುಗಳನ್ನು ಅನುಸರಿಸಬೇಕು ಎಂದು ವಿಶ್ವಸಂಸ್ಥೆ ನಿರ್ಣಯದಲ್ಲಿ ಹೇಳಿದೆ.

ನಿರ್ಣಯವು, ಮಾನವೀಯ ನೆರವು ಒದಗಿಸುವ ಸಿಬ್ಬಂದಿ, ಹೋರಾಟದ ವ್ಯಕ್ತಿಗಳು ಮತ್ತು ಮಾನವೀಯ ಸೌಲಭ್ಯಗಳು ಮತ್ತು ಸ್ವತ್ತುಗಳ ರಕ್ಷಣೆಗೆ ಒತ್ತಾಯಿಸಿದೆ. ಜೊತೆಗೆ ಗಾಜಾ ಪಟ್ಟಿಯಲ್ಲಿರುವ ಅಗತ್ಯವಿರುವ ಎಲ್ಲಾ ನಾಗರಿಕರನ್ನು ತಲುಪಲು ಅಗತ್ಯ ಸರಬರಾಜು ಮತ್ತು ಸೇವೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಲು ಮತ್ತು ಸುಗಮಗೊಳಿಸಲು ವಿಶ್ವಸಂಸ್ಥೆ ಒತ್ತಾಯಿಸಿದೆ.

ಇದನ್ನೂ ಓದಿ: ವಿಶ್ವಸಂಸ್ಥೆ ಎಚ್ಚರಿಕೆ – ಭಾರತದ ಅಂತರ್ಜಲ ಕುಸಿತದತ್ತ!

ಇದಲ್ಲದೆ, ಗಾಜಾ ಪಟ್ಟಿಯಲ್ಲಿರುವ ವಾಡಿ ಗಾಜಾದ ಉತ್ತರದ ಎಲ್ಲಾ ಪ್ರದೇಶಗಳ ಪ್ಯಾಲೆಸ್ತೀನ್‌ ನಾಗರಿಕರು, ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಮಾನವೀಯ ನೆರವು ಒದಗಿಸುವ ಕೆಲಸಗಾರರು ದಕ್ಷಿಣಕ್ಕೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್‌ನ ಆದೇಶವನ್ನು ರದ್ದುಗೊಳಿಸುವಂತೆ ನಿರ್ಣಯವು ಕರೆ ನೀಡಿದೆ.

ಅಕ್ರಮವಾಗಿ ಬಂಧಿಯಾಗಿರುವ ಎಲ್ಲಾ ನಾಗರಿಕರನ್ನು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸುರಕ್ಷತೆ, ಯೋಗಕ್ಷೇಮ ಮತ್ತು ಮಾನವೀಯ ಚಿಕಿತ್ಸೆಗಾಗಿ ತಕ್ಷಣ ಮತ್ತು ಬೇಷರತ್ತಾದ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡುದೆ. ಕದನ ವಿರಾಮ

ಸಂಬಂಧಿತ ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಮತ್ತು ದ್ವಿರಾಷ್ಟ್ರ ಪರಿಹಾರದ ಆಧಾರದ ಮೇಲೆ ಶಾಂತಿಯುತ ವಿಧಾನಗಳಿಂದ ಮಾತ್ರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷಕ್ಕೆ ನ್ಯಾಯಯುತವಾಗಿ ಮತ್ತು ಶಾಶ್ವತ ಪರಿಹಾರವನ್ನು ಸಾಧಿಸಬಹುದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪುನರುಚ್ಚರಿಸಿದೆ.

ವಿಡಿಯೊ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ?  

 

Donate Janashakthi Media

Leave a Reply

Your email address will not be published. Required fields are marked *