ಮೀಸಲಾತಿ ಒದಗಿಸುವುದು ಮೆರಿಟ್‌ಗೆ ವಿರುದ್ಧವಲ್ಲ: ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಒಬಿಸಿ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಮೆರಿಟ್‌ಗೆ ವಿರುದ್ಧವಲ್ಲ. ಬದಲಿಗೆ ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆ ಮೂಲಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(ನೀಟ್‌) ಅಖಿಲ ಭಾರತ ಕೋಟಾ(ಎಐಕ್ಯು) ಸೀಟುಗಳಡಿ ರಾಜ್ಯ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇಕಡಾ 27ರಷ್ಟು ಮೀಸಲಾತಿ ಒದಗಿಸುವುದನ್ನು ಎತ್ತಿ ಹಿಡಿದಿದೆ.

ರಾಜ್ಯ ಸರ್ಕಾರಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ಜನವರಿ 7ರಂದು ನೀಡಲಾದ ಆದೇಶವನ್ನು ಎತ್ತಿ ಹಿಡಿದಿದೆ.

ಸಂವಿಧಾನದ “15(4) ಮತ್ತು 15(5)ನೇ ವಿಧಿಗಳು ಮೂಲಭೂತ ಸಮಾನತೆಯ ಅಂಶಗಳಾಗಿವೆ. ಕೆಲವು ವರ್ಗಗಳಿಗೆ ಇರುವ ಆರ್ಥಿಕ ಸಾಮಾಜಿಕ ಅನುಕೂಲಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಪ್ರತಿಬಿಂಬಿಸುತ್ತಿಲ್ಲ. ಕೆಲ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅನೂಕಲಗಳನ್ನು ಪ್ರತಿಫಲಿಸುತ್ತದೆ. ಪರೀಕ್ಷೆ ಮುಗಿಯುವವರೆಗೆ ಮೀಸಲಾತಿ ಮತ್ತು ಸೀಟುಗಳ ಸಂಖ್ಯೆಯನ್ನು ಬಹಿರಂಗಪಡಿಸದ ಕಾರಣ, ಸೀಟುಗಳ ಸಂಖ್ಯೆ ಬದಲಾಯಿಸಲಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

2021-22ರ ಎನ್‍ಇಇಟಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಅನುಮತಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಾಂವಿಧಾನ ಬದ್ಧವಾಗಿದೆ. ಹೆಚ್ಚಿನ ಅಂಕಗಳು ಅರ್ಹತೆಯ ಏಕೈಕ ಮಾನದಂಡವಲ್ಲ. ಜೇಷ್ಠತೆ ಪರಿಗಣನೆಯ ವೇಳೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಸಂದರ್ಭೋಚಿತವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಹಿಂದುಳಿದಿರುವಿಕೆಯನ್ನು ನಿವಾರಿಸುವಲ್ಲಿ ಮೀಸಲಾತಿಯ ಪಾತ್ರವನ್ನು ನಿರಾಕರಿಸಲಾಗುವುದಿಲ್ಲ. ಮೀಸಲಾತಿಯು ಅರ್ಹತೆಗೆ ವಿರುದ್ಧವಾಗಿಲ್ಲ, ಬದಲಾಗಿ ಸಾಮಾಜಿಕ ನ್ಯಾಯದ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಎಂಟು ಲಕ್ಷ ವಾರ್ಷಿಕ ಆದಾಯ ಹೊಂದಿರುವವ ಆರ್ಥಿಕ ದುರ್ಬಲ ವರ್ಗದವರು ಈ ಬಾರಿ ಎನ್‍ಇಇಟಿ-ಸ್ನಾತಕೋತ್ತರ ಪ್ರವೇಶಕ್ಕೆ ಮೀಸಲಾತಿಯಡಿ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ವೈದ್ಯಕೀಯ ಶಿಕ್ಷಣ ಕೋರ್ಸ್‍ನ ಪ್ರವೇಶದ ಈ ಹಂತದಲ್ಲಿ ನ್ಯಾಯಾಂಗದ ಹಸ್ತಕ್ಷೇಪವು ಪ್ರವೇಶಾತಿಯನ್ನು ವಿಳಂಬಗೊಳಿಸುತ್ತದೆ.

ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯದಲ್ಲಿರುವ ಸಂದರ್ಭದಲ್ಲಿ ನ್ಯಾಯಾಲಯದ ವೈದ್ಯಕೀಯ ಕೋರ್ಸ್‍ಗೆ ತಡೆ ನೀಡಿದರೆ, ವೈದ್ಯರ ಕೊರತೆಯಾಗಲಿದೆ, ಕೋವಿಡ್ ಹೆದರಿಸಲು ಇದರಿಂದ ಹಿನ್ನೆಡೆಯಾಗಲಿದೆ. ಆದ್ದರಿಂದ 2021-2022 ಸಾಲಿನ ಮೀಸಲಾತಿ ಮಾನದಂಡಗಳ ಕುರಿತು ಯಾವುದೇ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

“ಎಐಕ್ಯೂ ಸೀಟುಗಳಲ್ಲಿ ಮೀಸಲಾತಿ ನೀಡುವ ಮೊದಲು ಕೇಂದ್ರವು ಈ ನ್ಯಾಯಾಲಯದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ. ಆದ್ದರಿಂದ ಅವರ ನಿರ್ಧಾರ ಸರಿಯಾಗಿದೆ. ಎಐಕ್ಯೂನಲ್ಲಿ ಒಬಿಸಿಗಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ನೀಡುವ ಮೀಸಲಾತಿಯು ಸಾಂವಿಧಾನಿಕವಾಗಿ ಮಾನ್ಯವಾಗಿದೆ” ಎಂದು ಅದು ಹೇಳಿದೆ.

ಈ ತೀರ್ಪನ್ನು ಕೇಂದ್ರ ಸರ್ಕಾರದ ಅಖಿಲ ಭಾರತ ವೈದ್ಯಕೀಯ ಸೀಟುಗಳ ಹಂಚಿಕೆಯ ಖೋಟಾದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯ ಮೆಡಿಕಲ್ ಕಾಲೇಜುಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.ಇಂದು ವಿವರವಾದ ತೀರ್ಪನ್ನು ಪ್ರಕಟಿಸಲಾಗಿದ್ದು, ಮೀಸಲಾತಿಯನ್ನು ಎತ್ತಿ ಹಿಡಿಯುವ ಜೊತೆಗೆ ರಾಜ್ಯ ಸರ್ಕಾರಗಳು ನಡೆಸುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಹಂಚಿಕೆಗಾಗಿ ರೂಪಿಸಲಾದ ವ್ಯವಸ್ಥೆಯನ್ನು ಬೆಂಬಲಿಸಿದೆ.

ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸದೆ ಮತ್ತು ಬಡವರು ಹಾಗೂ ಕಡುಬಡವರ ಮೀಸಲಾತಿ ನಿರ್ಧರಣೆಯ ಪುರಾವೆಗಳನ್ನು ಪರಿಗಣಿಸದೆ ಶೈಕ್ಷಣಿಕ ಮೀಸಲಾತಿ ಅರ್ಹತೆ ಕುರಿತು ಏಕಾಏಕಿ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದು ನ್ಯಾಯಾ ಪೀಠ ಹೇಳಿದೆ.

ಕೇಂದ್ರ ಸರ್ಕಾರ ಸೀಟು ಹಂಚಿಕೆಗೂ ಮುನ್ನಾ ಮತ್ತೊಮ್ಮೆ ಈ ನ್ಯಾಯಾಲಯದ ಆದೇಶವನ್ನು ಕಾಯಬೇಕಿಲ್ಲ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸಾಂವಿಧಾನಾತ್ಮಕವಾಗಿ ಸರಿ ಇದೆ. ಅದನ್ನೆ ಮುಂದುವರೆಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಆರ್ಥಿಕ ಹಿಂದುಳಿಯುವಿಕೆ ಮೀಸಲಾತಿ ಮತ್ತು ಅರ್ಹತಾ ಸ್ಥಿತಿಯ ಸಿಂಧುತ್ವ ಸುಪ್ರೀಂ ಕೋರ್ಟ್ ವಿಷಯವನ್ನು ಮಾರ್ಚ್ ಮೂರನೇ ವಾರದಲ್ಲಿ ವಿಚಾರಣೆ ನಡೆಸುವವರೆಗೂ ಅಸ್ತಿತ್ವದಲ್ಲಿರಲಿದೆ. ಈ ಮಧ್ಯೆ 2021ನೇ ಸಾಲಿನ ನೀಟ್‌ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಯು ಒಬಿಸಿಗಳಿಗೆ ಶೇ 27ರಷ್ಟು ಹಾಗೂ ಇಡಬ್ಲ್ಯೂಎಸ್‌ಗೆ ಶೇ 10ರಷ್ಟು ಎಂಬ ಈಗಿನ ಮೀಸಲಾತಿ ಪ್ರಕಾರ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *