ಮೀಸಲಾತಿ ‘ಹಂಚಿಕೆ’ : ಸುಪ್ರಿಂ ಕೋರ್ಟ್ ಗುದ್ದು

     – ಎಸ್.ವೈ. ಗುರುಶಾಂತ್

ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಶಿಫಾರಸಿನ ಆಧಾರದಲ್ಲಿ ಆರ್ಥಿಕ ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ನೀಡಲಾಗಿತ್ತು. ಅಂದರೆ ಬಿಜೆಪಿ ಬೇಕೆಂದೇ ಜನತೆಯನ್ನು ತಪ್ಪು ದಾರಿಗೆಳೆಯುವ ಕೆಲಸಕ್ಕೆ ಮುಂದಾಗಿತ್ತು. ಈಗ ನೀಡಲಾದ ಮೀಸಲಾತಿಗೆ ಯಾವುದೇ ವೈಜ್ಞಾನಿಕ ಅಧ್ಯಯನದ ಅಥವಾ ಆಯೋಗಗಳ ವಾಸ್ತವಿಕ ವರದಿಯ ಆಧಾರದಲ್ಲಿ ಇಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ.

 

ಇತರೆ ಹಿಂದುಳಿದ ವರ್ಗಗಳ ಪಟ್ಟಿಯ ೨ ಎ ಕ್ಯಾಟಗರಿಯಲ್ಲಿದ್ದ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಿಕೆಯಲ್ಲಿ ನೀಡಲಾಗುತ್ತಿದ್ದ ಶೇ.೪ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಪಂಚಮಸಾಲಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ತಲಾ ಶೇ.೨ ರಂತೆ, ಹಂಚಿಕೆ ಮಾಡಿ ಕರ್ನಾಟಕ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿತ್ತು. ಬಸವರಾಜ ಬೊಮ್ಮಾಯಿ ಸರಕಾರದ ಈ
ನಿರ್ಧಾರವನ್ನು ಮೇಲ್ನೋಟದಲ್ಲಿ ದೋಷಪೂರಿತ ಎಂದು ಹೇಳಿರುವ ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ಪ್ರಕಟಗೊಳ್ಳುವವರೆಗೆ ಯಾವುದೇ ನೇಮಕಾತಿ, ಪ್ರವೇಶಾವಕಾಶಗಳಿಗೆ ಅನ್ವಯಿಸಬಾರದು ಎಂದು ನಿರ್ಭಂಧಿಸಿದೆ.

ಸಾಮಾಜಿಕ ನ್ಯಾಯದ ತತ್ವವನ್ನೇ ವಿಕೃತಗೊಳಿಸಿ ಜನತೆಯನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ಫಸಲು ಪಡೆಯುವ ಉದ್ದೇಶ ಇರಿಸಿಕೊಂಡಿದ್ದ ಬಿಜೆಪಿ ಸರಕಾರಕ್ಕೆ ತೀವ್ರ ಏಟು ಕೊಟ್ಟಂತಾಗಿದೆ. ಒಕ್ಕಲಿಗರು ಮತ್ತು ಪಂಚಮಸಾಲಿ ಸಮುದಾಯಗಳು ತಮಗೆ ಮೀಸಲಾತಿ ನೀಡುವಂತೆ ಮತ್ತು ಹೆಚ್ಚಿಸುವಂತೆ ಸರ್ಕಾರದ ಮುಂದೆ ಬೇಡಿಕೆಯನ್ನು ಮಂಡಿಸಿದ್ದವು. ಆದರೆ ಅವರ್ಯಾರೂ ಮುಸ್ಲಿಮರ ಮೀಸಲಾತಿಯನ್ನು ಕಿತ್ತಿ ತಮಗೆ ಕೊಡಬೇಕೆಂದು ಕೇಳಿದ್ದೇ ಇಲ್ಲ. ಸರ್ಕಾರ ಒಂದು ವೇಳೆ ಆ ಸಮದಾಯಗಳು ಕೇಳಿದ್ದ ಮೀಸಲಾತಿ ನ್ಯಾಯ ಸಮ್ಮತವೆಂದು ಬಗೆದಿದ್ದಲ್ಲಿ ಈಗಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಇಲ್ಲವೇ ಬೇರೊಂದು ಬಗೆಯ ಪರಿಹಾರವನ್ನು ಕಂಡುಕೊಳ್ಳಬಹುದಾಗಿತ್ತು. ಆದರೆ ಸರ್ಕಾರದ ಉದ್ದೇಶ ಆ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎನ್ನುವುದಕ್ಕಿಂತ ಮುಸ್ಲಿಮರ ವಿರುದ್ಧ ಅಥವಾ ಮುಸ್ಲಿಮರನ್ನು ಆ ಸಮುದಾಯಗಳ ವಿರುದ್ಧ ಎತ್ತಿಕಟ್ಟಿ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎನ್ನುವ ಯೋಚನೆಯೇ ಆದ್ಯತೆಯನ್ನು ಪಡೆದಿತ್ತು. ಹೀಗಾಗಿ ಅಂತಹ ಒಂದು ಸಮ ಚಿತ್ತದ ಪರಿಹಾರ ರೂಪಿಸುವ ಬದಲು ಹಲವು ದಶಕಗಳಿಂದ ನೀಡಲಾಗುತ್ತಿದ್ದ ಮುಸ್ಲಿಂ ಮೀಸಲಾತಿಯನ್ನು
ರದ್ದುಗೊಳಿಸಿ ವಾದಕ್ಕಾಗಿ ಅವರಿಗೆ ಆರ್ಥಿಕ ಹಿಂದುಳಿದ ಮೀಸಲಾತಿ ಕೋಟಾದಲ್ಲಿ ಒದಗಿಸಿರುವುದಾಗಿ ಹೇಳಿತ್ತು. ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಪಡಿಸುವುದಕ್ಕೆ ಸರ್ಕಾರ ನೀಡಿದ ಕಾರಣ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ಮೀಸಲಾತಿ ಕೊಡುವಂತೆ ಇಲ್ಲ ಎನ್ನುವುದಾಗಿತ್ತು.  ವಾಸ್ತವದಲ್ಲಿ ಈ ಮೀಸಲಾತಿಯನ್ನು ಈ ಅಂಶದ ಆಧಾರದಲ್ಲಿ ಕೊಟ್ಟಿರಲಿಲ್ಲ.

ಇದನ್ನೂ ಓದಿ : ಮೀಸಲಾತಿ ಮರುಹಂಚಿಕೆ: ಆದೇಶ ಪ್ರಕಟ

ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಶಿಫಾರಸಿನ ಆಧಾರದಲ್ಲಿ ಆರ್ಥಿಕ ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ನೀಡಲಾಗಿತ್ತು. ಅಂದರೆ ಬಿಜೆಪಿ ಬೇಕೆಂದೇ ಜನತೆಯನ್ನು ತಪ್ಪು ದಾರಿಗೆಳೆಯುವ ಕೆಲಸಕ್ಕೆ ಮುಂದಾಗಿತ್ತು. ಈಗ ನೀಡಲಾದ ಮೀಸಲಾತಿಗೆ ಯಾವುದೇ ವೈಜ್ಞಾನಿಕ ಅಧ್ಯಯನದ ಅಥವಾ ಆಯೋಗಗಳ ವಾಸ್ತವಿಕ ವರದಿಯ ಆಧಾರದಲ್ಲಿ ಇಲ್ಲ ಎನ್ನುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಕರ್ನಾಟಕ ಸರಕಾರದ ಪರವಾಗಿ ವಿವರಗಳನ್ನು ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶವನ್ನು ಕೇಳಿದರೆ, ಯಾವುದೇ ಆದೇಶ ಹೊರಡಿಸುವ ಮೊದಲು ಪಂಚಮಸಾಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ವಾದಗಳನ್ನು ಆಲಿಸಬೇಕೆಂದು ಆ ಸಮುದಾಯಗಳ ಪರವಾಗಿ ವಕೀಲರು ವಿನಂತಿಸಿದ್ದಾರೆ. ಹೀಗಾಗಿ ನ್ಯಾಯಾಲಯವು ಅದಕ್ಕಾಗಿ ಒಂದಿಷ್ಟು ಕಾಲಾವಕಾಶವನ್ನು ಕೊಟ್ಟಿದೆ. ಆದರೆ ಒಟ್ಟಾರೆ ಮೀಸಲಾತಿ ಕೊಟ್ಟಂತೆ ಮತ್ತು ಯಾರಿಗೂ ಸಿಗದಂತೆ ಆದರೆ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸುವಂತೆ ಮಾಡಿದ್ದ ಸರ್ಕಾರದ ಹಂಚಿಕೆ ಈ ಹಂತದಲ್ಲಿ ಬಟಾ ಬಯಲುಗೊಂಡಿರುವುದು ವಾಸ್ತವ. ಈ ಮೂರು ಸಮುದಾಯಗಳು ಕುತಂತ್ರಕ್ಕೆ ಬಲಿಯಾಗದೇ ಇರುವುದು ಅಭಿನಂದನಾರ್ಹ. ಈಗಲೂ ಅದನ್ನು ಮತ್ತಷ್ಟೂ ಮನನ ಮಾಡಿಕೊಳ್ಳುವುದೂ ಅವಶ್ಯಕ.

Donate Janashakthi Media

Leave a Reply

Your email address will not be published. Required fields are marked *