ಒಳಮೀಸಲಾತಿ: ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಮನವಿ

ಲಬುರ್ಗಾ: ನ್ಯಾಯಮೂರ್ತಿ ನಾಗಮೋಹನ ದಾಸ್ ರ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಅಧಿವೇಶನದಲ್ಲಿ ಜಾರಿಗೆ ಒತ್ತಾಯಿಸಬೇಕು ಎಂದು ಪಟ್ಟಣದ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಗೆ ಮನವಿ ಮಾಡಿದರು. ಒಳಮೀಸಲಾತಿ

ಪಟ್ಟಣದ ಶಾಸಕರ ಕಚೇರಿಯಲ್ಲಿ ರಾಯರಡ್ಡಿ ರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡ ಹೋರಾಟ ಸಮಿತಿ ಮುಖಂಡರು,’ ಸುಮಾರು ವರ್ಷಗಳ ಬೇಡಿಕೆಯಂತೆ ಸಮಿತಿ ಉತ್ತಮ ಸಲಹೆಗಳನ್ನು ನೀಡಿದೆ. ಮಾದಿಗ ಸಮಾಜಕ್ಕೆ ಶೇ 6ರಷ್ಟು ಮೀಸಲಾತಿಗೆ ಶಿಫಾರಸು ಮಾಡಿದ್ದು ಸ್ವಾಗತಾರ್ಹವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡದೇ ಜಾರಿಗೆ ಮುಂದಾಗಬೇಕಾಗಿದೆ’ ಎಂದು ಮನವಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಅಂಗಡಿ ಕಳ್ಳತನ ನೋಡಿದನೆಂದು ಮಾಲೀಕನ ಹತ್ಯೆ

ಬೆಂಬಲ: ಮನವಿಗೆ ಪ್ರಕ್ರಿಯಿಸಿದ ರಾಯರಡ್ಡಿ,’ನಿಮ್ಮ ಬೇಡಿಕೆಗೆ ಸಂಪೂರ್ಣವಾದ ಬೆಂಬಲವಿದೆ. ನಾಗಮೋಹನ ದಾಸ್ ಅವರು ಸರಿಯಾದ ವರದಿ ನೀಡಿದ್ದಾರೆ. ಸಣ್ಣಪುಟ್ಟ ಬದಲಾವಣೆ ಮಾಡಿ ಶೀಘ್ರದಲ್ಲಿಯೇ ಜಾರಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಮುಖ್ಯವಾಗಿ ಮಾದಿಗ ಸಮಾಜದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ಸರ್ಕಾರ ಹಾಗೂ ವೈಯಕ್ತಿಯವಾಗಿ ತಾವೂ ಒತ್ತಾಯಿಸುತ್ತೇವೆ’ ಎಂದು ಹೇಳಿದರು.

ಮುಖಂಡರಾದ ಈರಪ್ಪ ಕುಡಗುಂಟಿ, ಶಿವಾನಂದ ಬಣಕಾರ, ಮಲೆಯಪ್ಪ ರಾಜೂರ, ಚಂದ್ರಪ್ಪ ದೊಡ್ಮನಿ, ಹೇಮಣ್ಣ ಪೂಜಾರ, ಸುರೇಶ ನಡೂಲಮನಿ, ಬಸವರಾಜ ಮ್ಯಾಗೇರಿ ಕಲ್ಲೂರ ಸೇರಿ ಅನೇಕರು ಇದ್ದರು.

ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಕಾಂಗ್ರೆಸ್‌, ಬಿಜೆಪಿಯ ನಾಯಕರುಗಳೆ.. ನಿಮಗೆ ಮನುಷ್ಯತ್ವ ಇಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *