ನೇಮಕಾತಿ ಹಗರಣ | ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಸೇರಿ 12 ಜನರ ವಿರುದ್ಧ ಕೋಕಾ ಕಾಯ್ದೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಹಗರಣದ ಕಿಂಗ್‌ಪಿನ್ ರುದ್ರಗೌಡ ದೇವೇಂದ್ರಪ್ಪ ಪಾಟೀಲ್ ಮತ್ತು ಅವ್ಯವಹಾರದಲ್ಲಿ ಭಾಗಿಯಾಗಿರುವ ಇತರ 11 ಆರೋಪಿಗಳ ವಿರುದ್ಧ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ/KCOCA) ಅನ್ನು ಅನ್ವಯಿಸಿದ್ದಾರೆ. ಪಾಟೀಲ್ ಮಾತ್ರವಲ್ಲದೆ, ಆರೋಪಿಗಳಾದ ಸಂತೋಷ ಕೊಟ್ಟಳ್ಳಿ, ಶಿವಕುಮಾರ, ಸಿದ್ರಾಮ ಕೋಳಿ, ರವಿಕುಮಾರ್, ರುದ್ರಗೌಡ, ರಹೀಮ್ ಚೌಧರಿ, ಸಾಗರ್, ಬಸಣ್ಣ ಪೂಜಾರಿ, ಚಂದ್ರಕಾಂತ ಬುರಕಲ್, ಶಶಿಧರ ಜಮಾದಾರ ಮತ್ತು ಬಸವರಾಜ ಯಳವರ ವಿರುದ್ಧ  ಅಪರಾಧ ತನಿಖಾ ಇಲಾಖೆ (ಸಿಐಡಿ) ಕಠಿಣ ಕಾನೂನು ಜಾರಿ ಮಾಡಿದೆ.

2021 ರಲ್ಲಿ ಬೆಳಕಿಗೆ ಬಂದಿದ್ದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 45 ಕ್ಕೆ ಏರಿದ್ದರೂ, ಒಂದಕ್ಕಿಂತ ಹೆಚ್ಚು ಚಾರ್ಜ್‌ಶೀಟ್‌ಗಳಲ್ಲಿ ಹೆಸರುಗಳನ್ನು ಹೊಂದಿರುವವರ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೆಲಸ ಮಾಡಲು ಯುವ ಜನರ ಆದ್ಯತೆಯ ರಾಜ್ಯವಾಗಿ ಕೇರಳ: ವರದಿ

ಆರ್‌ಡಿ ಪಾಟೀಲ್ ಪಿಎಸ್‌ಐ ನೇಮಕಾತಿ ಹಗರಣದ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾಗಿದ್ದು, ಕೋಕಾ ಅಡಿಯಲ್ಲಿ ಪ್ರಕರಣ ದಾಖಲಾದ ಇತರ 11 ಜನರು 2021 ರಲ್ಲಿ ನಡೆದ ನೇಮಕಾತಿ ಹಗರಣದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪಾಟೀಲ್ ಅವರನ್ನು ಬಂಧಿಸಿದ ನಂತರ, ಹಿರಿಯ ಐಪಿಎಸ್ ಅಧಿಕಾರಿ ಮತ್ತು ಅಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) (ನೇಮಕಾತಿ) ಅಮೃತ್ ಪಾಲ್ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ಕೆಇಎ ನೇಮಕಾತಿ ಹಗರಣದಲ್ಲಿ ಪಾಟೀಲ್ ಹೆಸರು ಹೊರಬರುತ್ತಿದ್ದಂತೆ ತಲೆಮರಿಸಿಕೊಂಡಿದ್ದ ಆರೋಪಿ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದರು. ಬಂಧನಕ್ಕೂ ಮುನ್ನ ಅವರ ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನವನ್ನು ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: ಕುಸ್ತಿ ಫೆಡರೇಶನ್ ಅಧ್ಯಕ್ಷನಾಗಿ ಬ್ರಿಜ್ ಭೂಷಣ್ ಆಪ್ತ ಆಯ್ಕೆ; ಒಲಿಂಪಿಯನ್ ಸಾಕ್ಷಿ ಮಲಿಕ್ ನಿವೃತ್ತಿ ಘೋಷಣೆ

ಆರೋಪಿಗಳನ್ನು 30 ದಿನಗಳ ಅವಧಿಗೆ ಕಸ್ಟಡಿಯಲ್ಲಿಡಲು ಮತ್ತು ನಿಯೋಜಿತ ಅಧಿಕಾರಿಗಳ ಮುಂದೆ ಮಾಡಿದ ತಪ್ಪೊಪ್ಪಿಗೆಗಳನ್ನು ಸಾಕ್ಷ್ಯವಾಗಿ ಬಳಸಲು KCOCA ಕಾಯ್ದೆ ಪೊಲೀಸರಿಗೆ ಅನುಮತಿ ನೀಡುತ್ತದೆ. ಅಲ್ಲದೆ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರಿಗೆ ಅವಕಾಶವಿದೆ ಮತ್ತು ಆರೋಪಿ ಜಾಮೀನು ಪಡೆಯಲು ಅನರ್ಹನಾಗುತ್ತಾನೆ.

ಈ ನಡುವೆ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಿಯೋನಿಕ್ಸ್ ಮತ್ತು ಇತರ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಇಎ ಈ ವರ್ಷ ಅಕ್ಟೋಬರ್ 28 ರಂದು ನಡೆಸಿದ ಪರೀಕ್ಷೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ ಎಂದು ಸಿಐಡಿ ತಿಳಿಸಿದೆ. ಎಫ್‌ಡಿಎ ಪರೀಕ್ಷೆಯಲ್ಲಿ ಕಲಬುರಗಿ ಮತ್ತು ಯಾದಗಿರಿಯಲ್ಲಿ 20 ಕ್ಕೂ ಹೆಚ್ಚು ಆಕಾಂಕ್ಷಿಗಳು ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಸಿಕ್ಕಿಬಿದ್ದಿದ್ದಾರೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಡಿಯೊ ನೋಡಿ: ಪೂಜಾ ಸ್ಥಳ ಕಾಯ್ದೆ ಜಾರಿಯಾಗಿದ್ದರೂ ಸಹ ಗ್ಯಾನವಾಪಿ,ಶಾಹಿ ಮಸೀದಿಯ ಸಮೀಕ್ಷೆಗೆ ಅನುಮತಿ ಕೊಟ್ಟಿದ್ದು ನ್ಯಾಯಬದ್ಧವೇ?

Donate Janashakthi Media

Leave a Reply

Your email address will not be published. Required fields are marked *