ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಒತ್ತಾಯ

ಧಾರವಾಡ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ  ಪಿಎಚ್‌.ಡಿ. ಮತ್ತು ಎಂ.ಫಿಲ್. Research Fellowships ಆದೇಶ ಮರುಪರಿಶೀಲನೆ ಮಾಡಬೇಕೆಂದು ಮತ್ತು  2016-17ನೇ ಸಾಲಿನ ಆದೇಶವನ್ನೇ ಯತಾವತ್ತಾಗಿ ಜಾರಿ ಮಾಡಿ, ಈ ಪತ್ರದಲ್ಲಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು 2018 ಮತ್ತು 2019ರಲ್ಲಿ ವಂಚಿತರಾದ ಸಂಶೋಧನಾರ್ಥಿಗಳಿಗೂ ಮಾಸಿಕ 25000/-ರೂಗಳಂತೆ (Research Fellowship- 25000) ಫೆಲೋಶಿಪ್‌ ನೀಡಬೇಕೆಂದು, ಪಿ.ಎಚ್.ಡಿ., ಎಂ.ಪಿಲ್ ಸಂಶೋಧನ ವಿಧ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯ, ಕರ್ನಾಟಕ ರಾಜ್ಯ ವೇದಿಕೆಯಿಂದ ಮು‍ಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳು ಧಾರವಾಡ ಇವರ ಮುಖಾಂತರ ಕಳುಹಿಸಿ ಕೊಡುವ ಮೂಲಕ ಒತ್ತಾಯಿಸಿದ್ದಾರೆ. ಫೆಲೋಶಿಪ್ 

ನವೆಂಬರ್-17 ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಅಲ್ಪಸಂಖ್ಯಾತ ಸಮುದಾಯದ ಪಿಎಚ್.ಡಿ.ಅಭ್ಯರ್ಥಿಗಳಿಗೆ ಇದುವರೆಗೂ ತಮ್ಮ ಸರ್ಕಾರದ ಅಧೀನ ಇಲಾಖೆಯು 24/01/2017ರ ಸರ್ಕಾರದ ಆದೇಶದಂತೆ “ಜೆ.ಆರ್.ಎಫ್.”ಮಾದರಿಯಲ್ಲಿ ತಿಂಗಳಿಗೆ 25.000 ರೂ.ಗಳಂತೆ ಪ್ರೋತ್ಸಾಹ ಧನವನ್ನು ಮತ್ತು ವಾರ್ಷಿಕ 10,000 ರೂ.ಗಳಂತೆ ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದು, ಇದು ನಮಗೆ ಸಂಶೋಧನೆ ಕೈಗೊಳ್ಳಲು ಸಹಾಯವಾಗಿತ್ತು. ಆದರೆ ಹಿಂದಿನ ಸರ್ಕಾರವು ಜಾರಿಗೆ ತಂದಿರುವ ಯೋಜನೆ ಹಾಗೂ ಅನುದಾನದ ಕಡಿತದ ನೆಪವೊಡ್ಡಿ ದಿನಾಂಕ 09-11- 2020 ರಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳ ಮುಖಾಂತರ ತಿದ್ದುಪಡಿ ಆದೇಶ ಜಾರಿಗೆ ತಂದು ಅಂದಿನ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾರ್ಥಿಗಳ ಅಧ್ಯಯನಕ್ಕೆ ಆತಂಕಕ್ಕೆ ಕಾರಣವಾಗಿತ್ತು ಎಂದು ಪಿಎಚ್.ಡಿ. ಮತ್ತು ಎಂ.ಪಿಲ್. ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಎಸ್‌ಎಫ್‌ಐ ಒತ್ತಾಯ

ಆದರೆ ನಾಡಿನ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳ ಮನವಿ, ರಾಜಕೀಯ ಮುಖಂಡರ ವಿರೋಧ ಮತ್ತು ನಾಡಿನ ಬುದ್ದಿಜೀವಿಗಳ ಒತ್ತಡದಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಸರ್ಕಾರವು ಸರ್ಕಾರಿ ಆದೇಶ ಸಂಖ್ಯೆMWD 141 MDS 2021ಬೆಂಗಳೂರು, ದಿನಾಂಕ 15-04- 2021ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತಿದ್ದುಪಡಿ ಆದೇಶ ಸಂಖ್ಯೆ: MWD 281MDS2020, ದಿನಾಂಕ:09/10-11-2020ರನ್ನು ಹಿಂಪಡೆಯಲಾಗಿದೆ ಹಾಗೂ ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ಪ್ರಥಮ ಆದ್ಯತೆ ನೀಡಿ ಇನ್ನುಳಿದ ವಿಷಯಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್.ಡಿ. ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್. ಮಾದರಿಯಲ್ಲಿ 2 ವರ್ಷ ಅವಧಿಗೆ ಮಾತ್ರ ಪ್ರತಿ ಮಾಹೆಯಾನ ರೂ.25,000/-ಗಳನ್ನು (ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ ರೂ.10,000/-ಗಳ (ಹತ್ತು ಸಾವಿರ ರೂಪಾಯಿಗಳು ಮಾತ್ರ ನಿರ್ವಹಣಾ ವೆಚ್ಚವನ್ನು (ಪ್ರತಿ ವರ್ಷಕ್ಕೆ ಒಟ್ಟು ಮೊತ್ತ 3.3.10ಲಕ್ಷಗಳು) ಫೆಲೋಶಿಪ್ ಮೂಲಕ ನೀಡಲು ಸರ್ಕಾರದ ಆದೇಶ ಸಂಖ್ಯೆ:MWD 462 MDS2016, ದಿನಾಂಕ:24-01-2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರೆಸಲಾಗಿದೆ ಎಂದು ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಸರ್ಕಾರದ ಉಪಕಾರ್ಯದರ್ಶಿ ಮುಖಾಂತರ ಜಾರಿಗೆ ತಂದು ಆತಂಕಕ್ಕೊಳಗಾದ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾರ್ಥಿಗಳಿಗೆ ಉಸಿರಾಡುವಂತೆ ಮಾಡಿತು ಎಂದರು.

ಆದರೆ ದಿನಾಂಕ 28/06/2022 ರಂದು ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಸರ್ಕಾರದ ಉಪಕಾರ್ಯದರ್ಶಿಗಳ ಮುಖಾಂತರ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರಿ ಆದೇಶ ಸಂಖ್ಯೆ :MWD198 MDS 2022, ಬೆಂಗಳೂರು. ಫೆಲೋಶಿಪ್ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಷರತ್ತುಗಳಿಗೊಳಪಟ್ಟು ಸರ್ಕಾರ ಮಂಜೂರಾತಿ ನೀಡಿದ ಆದೇಶವು ಸರ್ಕಾರದ ಆದೇಶ ಸಂಖ್ಯೆ: MWD 462 MDS 2016, ದಿನಾಂಕ:24-01-2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರಿಕೆಯ ತದ್ವಿರುದ್ಧವಾಗಿದೆ. ಈಗಾಗಲೇ ತಿದ್ದುಪಡಿ ಆದೇಶವನ್ನು ದಿನಾಂಕ : 15/04/2021ರಂದು ಸರ್ಕಾರವು ಹಿಂಪಡೆದು ಈ ಯೋಜನೆಯು ಮುಂದುವರಿಕೆಯ ಭಾಗವೆಂದು ಪರಿಗಣಿಸಿ ಮಾನ್ಯ ಮಾಡಿತ್ತು. ಆದರೆ ಯಾವ ಕಾರಣಕ್ಕಾಗಿ ಮತ್ತೆ ಈ ಆದೇಶವನ್ನು ತಳ್ಳಿಹಾಕಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಶೋಧನಾ ಅಧ್ಯಯನಕ್ಕೆ ತೊಡಕಾಗುವಂತೆ ಮಾಡಿದೆ.

ಇದನ್ನೂ ಓದಿ:ಬಿಜೆಪಿಯ ದ್ವೇಷ ರಾಜಕಾರಣ ಮುಂದುವರೆಸಿದ ಕಾಂಗ್ರೆಸ್ ಸರ್ಕಾರ | ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ

ಹಾಗೆಯೇ ದಿನಾಂಕ: 11/10/2023ರಂದು ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಂದ ತಮ್ಮ ಅಧೀನ ಇಲಾಖೆಯ ಅಲ್ಪಸಂಖ್ಯಾತ ನಿರ್ದೇಶನಾಲಯ, ನಿರ್ದೇಶಕರಿಗೆ ನಿರ್ದೇಶನ ಮಾಡಿರುವ ಮೂರು ಮುಖ್ಯಾಂಶಗಳಲ್ಲಿ 2 ಮತ್ತು 3ನೇ ಅಂಶವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರಕಬೇಕಾದ ಫೆಲೋಶಿಪ್‌ನಿಂದ ವಂಚಿತರನ್ನಾಗಿ ಮಾಡುವಂತೆ ಕಂಡುಬರುತ್ತದೆ. ಜೊತೆಗೆ ದಿನಾಂಕ: 19/02/2021 ಹಾಗೂ ದಿನಾಂಕ: 26/08/2023ರಂದು ಅರ್ಜಿ ಸಲ್ಲಿಸಿದ 2018-19 ಹಾಗು 2019-20 ಶೈಕ್ಷಣಿಕ ಸಾಲಿನ ವಿಧ್ಯಾರ್ಥಿಗಳ ಅರ್ಜಿಯು ಇಲಾಖೆಯು ಸ್ವೀಕರಿಸಿ ಮಾನ್ಯ ಮಾಡಿರುವ ಸಂಶೋಧನಾರ್ಥಿಗಳಿಗೆ ಮತ್ತು ಅವರು ಈಗಾಗಲೇ ಇಲಾಖೆಯ ನಿರ್ದೇಶಕರ ಮುಖಾಂತರ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ಗಮನಕ್ಕೆ ತಂದಿರುವ ಆಶಯಕ್ಕೆ ಸರ್ಕಾರದ ಕಾರ್ಯದರ್ಶಿಗಳ ನಿರ್ದೇಶನವು ವಿರೋಧ ನೀತಿಯಾಗಿ ಕಂಡುಬರುತ್ತದೆ ಅನಿಸುತ್ತದೆ. ಏಕೆಂದರೆ ತನ್ನ ಅಧೀನ ಇಲಾಖೆಗೆ ಪ್ರಶ್ನೆಯನ್ನು ಕೇಳುವುದಕ್ಕಿಂತ ಸಮಸ್ಯೆ ಬಗೆಹರಿಸಬೇಕೆಂದು ನಿರ್ದೇಶನ ಮಾಡಿ ನ್ಯಾಯ ಕೊಡಿಸಬೇಕು. ಆದರಿಂದ ಸರ್ಕಾರದ ಆದೇಶ ಸಂಖ್ಯೆ: MWD 462MDS2016. ದಿನಾಂಕ:24-01-2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸುತ್ತೇವೆ. ಹಾಗೆಯೇ ನಮ್ಮ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಬೇಡಿಕೆಗಳು

  • ಪ್ರತಿ ತಿಂಗಳು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದ ರೂ.25,000 ಗಳ ಪ್ರೋತ್ಸಾಹ ಧನ ಮತ್ತು ರೂ.10,000 ಗಳ ನಿರ್ವಹಣಾ ವೆಚ್ಚವನ್ನು ಮುಂದುವರೆಸಬೇಕು.
  • ಎಂ.ಫಿಲ್./ಪಿಎಚ್.ಡಿ ಸಂಶೋಧನಾರ್ಥಿಗಳಿಗೆ ಫೆಲೋಷಿಪ್ ಯೋಜನೆಯ ಮುಂದುವರೆದ ಭಾಗವಾಗಿ ಹೊಸ ಅರ್ಜಿಗಳನ್ನು ತಕ್ಷಣದಲ್ಲಿಯೇ ಕರೆದು 24/01/2017ರ ಸರ್ಕಾರದ ಆದೇಶಕ್ಕೆ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು.
  • ಈಗಾಗಲೇ ಪಿಎಚ್.ಡಿ. ಫೆಲೋಶಿಪ್ ಗಾಗಿ ಆಯಾ ಜಿಲ್ಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಅರ್ಜಿಯನ್ನು ದಿನಾಂಕ 19/02/2021 ಹಾಗೂ 26/08/2022ರಂದು ಆನ್ಸೆನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಅಂದರೆ 2018-19 ಹಾಗೂ 2019-20ರ ಶೈಕ್ಷಣಿಕ ಸಾಲಿಗೆ ಪೂರ್ವಾನ್ವಯವಾಗುವಂತೆ ಮಾನ್ಯತೆ ಮಾಡಿ ಕೂಡಲೇ 3 ವರ್ಷ ಪೂರ್ಣಾವಧಿಯ ಫೆಲೋಶಿಪ್ ಬಿಡುಗಡೆ ಮಾಡಬೇಕು ಹಾಗೆಯೇ ಕೇವಲ 2 ವರ್ಷಗಳ ಅವಧಿಗೆ ಮಾತ್ರ ಪಿಎಚ್.ಡಿ. ಫೆಲೋಶಿಪ್ ಪಡೆಯಬಹುದೆಂದು ಸೂಚಿಸಲಾದ ವಿದ್ಯಾರ್ಥಿಗಳಿಗೂ ಯಾವುದೇ ಅನ್ಯಾಯಕ್ಕೆ ಒಳಪಡಿಸದೆ ಫೆಲೋಶಿಪ್ ಅವಧಿಯನ್ನು ಇತರೆ ವಿದ್ಯಾರ್ಥಿಗಳಿಗೆ ಸಮನಾಗಿ 3 ವರ್ಷಗಳವರೆಗೆ ಫೆಲೋಶಿಪ್ ನೀಡಬೇಕು ಹಾಗೂ ಈಗಾಗಲೇ ಪಡೆಯುತ್ತಿರುವ ಅಭ್ಯರ್ಥಿಗಳ ಅವಾರ್ಡ್ ಲೆಟರ್‌ಗಳಲ್ಲಿನ ತಾರತಮ್ಯದ ಅವಧಿಗಳ ಗೊಂದಲವನ್ನು ಪರಿಹರಿಸಿ, ಫೆಲೋಷಿಪ್ ಪಡೆಯಬಹುದಾದ ಪೂರ್ಣಾವಧಿಗೆ ಫೆಲೋಷಿಪ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಬೇಕು.
  • ಇತ್ತೀಚೆಗೆ 2022ರ ಆದೇಶ ಸೂಚನೆ ಮತ್ತು ಷರತ್ತುಗಳನ್ನು ರದ್ದುಪಡಿಸಿ ಸರ್ಕಾರದ ಆದೇಶ ಸಂಖ್ಯೆ:ಎಂಡಬ್ಲ್ಯೂಡಿ 462 ಎಂಡಿಎಸ್ 2016, ದಿನಾಂಕ :24-01-2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರಿಸುವಂತೆ ಆದೇಶಿಸಬೇಕು 2022-23 ಮತ್ತು 2023-24ರ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೂ ಸಹ ಮಾಸಿಕ 25000ರೂಗಳಂತೆ 3 ವರ್ಷಗಳು ನೀಡಬೇಕು ಎಂದು ಆಗ್ರಹಿಸುತ್ತೇವೆ.
  • ಈ ಸಂಶೋಧನಾ ಫೆಲೋಶಿಪ್ ಅಭ್ಯರ್ಥಿಗಳಿಗೆ ಸಕಾಲಕ್ಕೆ ತಲುಪದೇ ತಡವಾಗುತ್ತಿದ್ದು, ಕೆಲವು ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೊ ಅಥವಾ ಅವರು ನೀಡುವ ಕಾರಣವಾದ ಇನ್ನೂ ಸರ್ಕಾರವೇ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳುವ ನೆಪದಿಂದ ಸಂಶೋಧನೆಯಲ್ಲಿ ತೊಡಗಿರುವವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ ಕಾರಣ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಶೀಘ್ರ ತಲುಪುವಂತೆ ಗಮನ ಹರಿಸಬೇಕು.
  • ಇತರೆ ಜಿಲ್ಲೆಗಳಿಗೂ ಹೋಲಿಸಿದರೆ ಬಳ್ಳಾರಿ ಜಿಲ್ಲೆ, ವಿಜಯನಗರ ಜಿಲ್ಲೆ, ಧಾರವಾಡ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 2018-19 ಹಾಗೂ 2019-20ರ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಅರ್ಜಿಗಳನ್ನು ಸ್ವೀಕೃತಗೊಳಿಸಿದರೂ ಕೂಡ ಯಾವುದೇ ಫೆಲೋಶಿಪ್ ನೀಡದೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಈ ಸಮಸ್ಯೆಯು ಕರ್ನಾಟಕದ ಹಲವು ಜಿಲ್ಲೆಗಳ ಸಂಶೋಧನಾ ವಿದ್ಯಾರ್ಥಿಗಳ ಸಮಸ್ಯೆಗಳು ಜೀವಂತವಾಗಿದ್ದು, ಅನೇಕ ಬಾರಿ ಇಲಾಖೆಯ ನಿರ್ದೇಶಕರಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ. ಇದರಿಂದ ಸುಮಾರು 18 ವಿದ್ಯಾರ್ಥಿಗಳು ವಂಚಿತರನ್ನಾಗಿ ಮಾಡಿದ ಕಾರಣ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಾಲದ ಹೊರೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಮನಗೊಂಡು ಅನುದಾನವನ್ನು ಸಕಾಲಕ್ಕೆ ಬಿಡುಗಡೆಗೊಳಿಸಬೇಕು.

ವೇದಿಕೆಯ ಕರ್ನಾಟಕ ರಾಜ್ಯ ಕೋರ್ ಕಮಿಟಿ ಸದಸ್ಯರಾದ  ನಜ್ಞಾ ನಝೀರ್ ಚಿಕ್ಕನೇರಳೆ ಪ್ರಗತಿಪರ ಹೋರಾಟಗಾರರು, ಬೆಂಗಳೂರು, ಭೀಮನಗೌಡ ಸುಂಕೇಶ್ವರಹಾಳ, ರಾಜ್ಯ ಕಾರ್ಯದರ್ಶಿಗಳು, ಎಸ್.ಎಫ್.ಐ, ಬೆಂಗಳೂರು, ಎಂ.ಕೆ.ಸಾಹೇಬ್ ಪ್ರಗತಿಪರಹೋರಾಟಗಾರರು, ಕೊಪ್ಪಳ, ಡಾ.ಫರ್ಹನಾಜ ಎಂ.ವಿ.ಎಸ್.ವಿಶ್ವವಿದ್ಯಾಲಯ, ಬಳ್ಳಾರಿ, ಡಾ. ಸಾಜಿದ ಯೂಸುಫ್ ಪ್ರಗತಿಪರ ಚಿಂತಕರು ಮಂಗಳೂರು, ರೆಹಾನಾ ಪಿಎಚ್.ಡಿ.ಸಂಶೋಧನಾರ್ಥಿ ದಾವಣಗೆರೆ ವಿಶ್ವವಿದ್ಯಾನಿಲಯ, ಮಹಮದ್ ಲಟಗೇರಿ ಪ್ರಗತಿಪರ ಹೋರಾಟಗಾರರು, ಇಳಕಲ್, ದಾದಾಹಯಾತ್ ಬಾವಾಜಿ ಪಿಎಚ್.ಡಿ.ಸಂಶೋಧನಾರ್ಥಿ ಕನ್ನಡ ವಿಶ್ವವಿದ್ಯಾಲಯ, ಮೊಹಮದ್ ಆರ್ ಹೊಸೂರ್ ಪಿಎಚ್.ಡಿ.ಸಂಶೋಧನಾರ್ಥಿ ಬೆಂಗಳೂರು ವಿಶ್ವವಿದ್ಯಾಲಯ, ಇಸ್ಮಾಯಿಲ್ ಸಿದ್ದಿಕ್ ಪಿಎಚ್.ಡಿ.ಸಂಶೋಧನಾರ್ಥಿ ಕನ್ನಡ ವಿಶ್ವವಿದ್ಯಾಲಯ, ಮೊಹಮ್ಮದ ಅಜರುದ್ದೀನ್ ಬಿ. ಆರ್ ಪಿಎಚ್. ಡಿ ಸಂಶೋಧನಾರ್ಥಿ ಜಿ.ಕೆ.ವಿ.ಕೆ ವಿಶ್ವವಿದ್ಯಾಲಯ, ಸೈಯದ ಅಬ್ದುಲ ಖಾದಿರ ಬಿ. ಮಕಾನದಾರ ಪಿಎಚ್. ಡಿ ಸಂಶೋಧನಾರ್ಥಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಸೈಯದ್ ಸೋಹಬ ಖಾಸಿಂ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ಮುಹಮ್ಮದ್ ಹಾಮಿದ್ ರಝಾ ಪಿಎಚ್. ಡಿ ಸಂಶೋಧನಾರ್ಥಿ ಕನ್ನಡ ವಿಶ್ವವಿದ್ಯಾಲಯ ಧಾರವಾಡ, ಇಸ್ಮಾಯಿಲ್ ಖಾದ್ರಿ ಪಿಎಚ್.ಡಿ.ಸಂಶೋಧನಾರ್ಥಿ ಕನ್ನಡ ವಿಶ್ವವಿದ್ಯಾಲಯ, ಒಶಿನ್ ಜೆಸಿಂತಾ ಡಿಸೋಜ ಪಿಎಚ್. ಡಿ ಸಂಶೋಧನಾರ್ಥಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದ್ದರು. ಫೆಲೋಶಿಪ್ 

ವಿಡಿಯೋ ನೋಡಿ:ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *