ಜಪಾನ್: ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಡೆದ ಕುಸ್ತಿ ವಿಭಾಗದ ಪಂದ್ಯದ ಫೈನಲ್‌ನಲ್ಲಿ ಕಾದಾಟ ನಡೆಸಿದ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾ ಬೆಳ್ಳಿ ಪದಕ ಪಡೆಯುವುದರೊಂದಿಗೆ ಸಾಧನೆ ಮಾಡಿದ್ದಾರೆ. ಇಂದು ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್ ಪಂದ್ಯನಲ್ಲಿ ರವಿಕುಮಾರ್ ವಿಶ್ವ ಚಾಂಪಿಯನ್ ಆಗಿರುವ ರಷ್ಯಾದ ಜವೂರ್ ಉಗುವೆ 4-7ರಲ್ಲಿ ಎದುರು ಸೋಲು ಕಂಡರು.
ಒಲಿಂಪಿಕ್ಸ್ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರವಿಕುಮಾರ್ ದಹಿಯಾ, ಸುಶೀಲ್ ಕುಮಾರ್ ಸಾಧನೆ ಸರಿಗಟ್ಟಿದ್ದಾರೆ. 2012ರಲ್ಲಿ ಸುಶೀಲ್ ಕುಮಾರ್ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕ ಗೆದ್ದಿದ್ದರು. ಸುಶೀಲ್ ಒಟ್ಟು ಎರಡು ಪದಕಗಳ (ಬೆಳ್ಳಿ ಮತ್ತು ಕಂಚು) ಸಾಧನೆ ಮಾಡಿದ್ದರು.
ಇದನ್ನು ಓದಿ: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ
ರವಿ ಕುಮಾರ್ ದಹಿಯಾ ಅವರದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿರುವ ಭಾರತದ ಐದನೇ ಕುಸ್ತಿಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಆರನೇ ಪದಕ ಒಲಿದು ಬಂದಿದೆ.
ರವಿ ಕುಮಾರ್ ದಹಿಯಾ ಹರಿಯಾಣದ ಸೋನಿಪತ್ ಮೂಲದ 23 ವರ್ಷದ ಯುವ ಕುಸ್ತಿಪಟು. ಸೆಮಿಫೈನಲ್‌ನಲ್ಲಿ ಕಝಖಸ್ತಾನದ ನುರಿಸ್ಲಾಮ್ ಸನಯೆವ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರೂ ಭರ್ಜರಿ ಸಾಧನೆ ಮಾಡಿದರು. ಇದರ ಮೂಲಕ ಅವರು ಫೈನಲ್ ಅರ್ಹತೆಗೆ ಮುಂದಾದರು. ಈ ಹಿಂದೆ ಕೊಲಂಬಿಯಾ ಮತ್ತು ಬಲ್ಗೇರಿಯಾದ ಕುಸ್ತಿಪಟುಗಳನ್ನು ಮಣಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದವರು ರವಿ ಕುಮಾರ್ ದಹಿಯಾ.
ರವಿ ಕುಮಾರ್ ದಹಿಯಾ ಪ್ರಮುಖ ಸಾಧನೆ
- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಬೆಳ್ಳಿ ಪದಕ ಖಾತ್ರಿ
- 2019ರ ವಿಶ್ವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಕಂಚು
- 2020ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ
- 2021ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಸಾಧನೆ
- 2018ರ ಅಂಡರ್ 23 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ
ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತೀಯರು:
1952ರಲ್ಲಿ ಕೆ.ಡಿ. ಜಾಧವ್ ಕಂಚು ವಿಚೇತ
2008ರಲ್ಲಿ ಕಂಚು ಮತ್ತು 2012ರಲ್ಲಿ ಬೆಳ್ಳಿ ಪದಕ ವಿಜೇತ ಸುನಿಲ್ ಕುಮಾರ್
2012ರಲ್ಲಿ ಕಂಚು ವಿಜೇತ ಯೋಗೇಶ್ವರ್ ದತ್
2016ರಲ್ಲಿ ಕಂಚು ವಿಜೇತೆ ಸಾಕ್ಷಿ ಮಲಿಕ್
ಮತ್ತು ಈ ಬಾರಿ ರವಿಕುಮಾರ್ ದಹಿಯಾ ಬೆಳ್ಳಿ ವಿಜೇತ
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂದಂತಾಗಿದೆ. ಮೀರಾ ಬಾಯಿ ಚಾನು ಮೊದಲಿಗೆ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಕ್ರೀಡಾಕೂಟದಲ್ಲಿ ಭಾರತ ಎರಡು ಬೆಳ್ಳಿ ಮತ್ತು ಮೂರು ಕಂಚು ಸೇರಿ ಒಟ್ಟು ಐದು ಪದಕಗಳನ್ನು ಗೆದ್ದಂತಾಗಿದೆ.