ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಟ : ರಕ್ತಹೀನತೆ, ಅಪೌಷ್ಟಿಕತೆ, ಕೌಟುಂಬಿಕ ದೌರ್ಜನ್ಯ ಹೆಚ್ಚಳ

ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶೇ.30ರಷ್ಟು ಮಹಿಳೆಯರು ದೈಹಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ. 5 ನೇ ಹಂತದ  ರಾಷ್ಟ್ರೀಯ ಕುಟುಂಬ ಆಯೋಗ ಸಮೀಕ್ಷೆಯಿಂದ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಸಮೀಕ್ಷೆಯನ್ನು ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಟಿಕತೆ ಸಂಬಂಧಿತ ಸೂಚಕಗಳ ಮಾಹಿತಿ ಸಂಗ್ರಹಿಸುವ ಸಲುವಾಗಿ ಕುಟುಂಬ ಮಟ್ಟದ ಸಂದರ್ಶನಗಳನ್ನು ಒಳಗೊಂಡಂತೆ 6 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡತೆ  ಸಮೀಕ್ಷೆಯನ್ನು ನಡೆಸಲಾಗಿದೆ.

ಮಕ್ಕಳು, ಪುರುಷರು, ಹೆಣ್ಣುಮಕ್ಕಳ ಆರೋಗ್ಯ  ಆಘಾತಕಾರಿ ಸ್ಥಿತಿಯಲ್ಲಿದೆ  ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ರಕ್ತ ಹೀನತೆಯಿಂದ ಬಾಲಕೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಳಲುತ್ತಿದ್ದಾರೆ 49% ಬಾಲಕೀಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. 2015-16ರಲ್ಲಿ ಬಿಡುಗಡೆಯಾಗಿದ್ದ ಅಂಕಿ ಅಂಶದಲ್ಲಿಯೂ 45.3% ಯುವತಿಯರು ರಕ್ತಹೀನತೆಯಿಂದ ಬಳಲುತ್ತಿದ್ದರು. ಶಿಶು ಮರಣ ಪ್ರಮಾಣ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿವೆ. ಕೊರೊನಾ ಸಂದರ್ಭದಲ್ಲಂತೂ  ಈ ಸಂಕಷ್ಟ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಬಾಲ್ಯ ವಿವಾಹ ಪದ್ದತಿ ಇನ್ನೂ ಹಾಗೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 2019 ರಲ್ಲಿ 21.3% ಬಾಲ್ಯವಿವಾಹಗಳು ನಡೆದಿವೆ. ಉತ್ತರ ಕರ್ನಾಟಕ ಭಾಗದಲ್ಲಿ  ಹೆಚ್ಚು ಬಾಲ್ಯ ವಿವಾಹಗಳು ನಡೆದ ಬಗ್ಗೆ ವರದಿಯಾಗಿದೆ. ತಂಬಾಕು ಬಳಕೆ ಪ್ರಮಾಣದಲ್ಲಿ ಮಹಿಳೆಯರು 8.5 % ರಷ್ಟು  ತಂಬಾಕು ಸೇವನೆ ಮಾಡಿದರೆ, ಪುರುಷರು  27.1% ರಷ್ಟು ಜನ ತಂಬಾಕು ಸೇವನೆ ಮಾಡುತ್ತಿದ್ದಾರೆ.

ಕೌಟುಂಬಿಕ ದೌರ್ಜನ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ದೌರ್ಜನ್ಯಗಳ ಪ್ರಕರಣಗಳು ಹೆಚ್ಚಾಗಿವೆ.   ಕರ್ನಾಟಕದಲ್ಲಿ 18-49 ವರ್ಷ ವಯಸ್ಸಿನ ಶೇ.44.4 ರಷ್ಟು ಮಹಿಳೆಯರು ತಮ್ಮ ಸಂಗಾತಿಗಳಿಂದ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತಿಳಿಸಿದ್ದು ಆತಂಕವನ್ನು ಸೃಷ್ಟಿಸಿದೆ.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೆ115% ರಷ್ಟು ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿದೆ. ಅಸ್ಸಾಂ  ಎರಡನೇ ಸ್ಥಾನದಲ್ಲಿದ್ದು ಶೇ 32% ನಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ  ಶೇ. 30% ಹೆಚ್ಚಳವಾಗಿದೆ. ಕೌಟುಂಬಿಕ ದೌರ್ಜನ್ಯದಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದ್ದು ಶೇ 25 % ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ 18.3%  ರಷ್ಟು ಹೆಚ್ಚಳವಾಗಿದೆ. ಲೈಂಗಿಕ ದೌರ್ಜನ್ಯದ ಪ್ರಮಾಣವು  ಹೆಚ್ಚಾಗಿದ್ದು ಅಲ್ಲಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅಸ್ಸಾಂ ಎರಡನೇ ಸ್ಥಾನದಲ್ಲಿ, ಮಹರಾಷ್ಟ್ರ ಮೂರನೇ ಸ್ಥಾನದಲ್ಲಿದೆ.

ಕುಟುಂಬದ ಪುರುಷರಿಂದಲೇ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣ ಶೇ 115 ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆಯೋಗ ಸಮೀಕ್ಷೆಯ ಪ್ರಕಾರ ಇತ್ತೀಚೆಗೆ ವರದಿಯಾಗಿದೆ.  ಅದರಲ್ಲೂ ಕರ್ನಾಟಕ ಪ್ರಥಮ ಸ್ಥಾನದಲ್ಲಿರುವುದು ಆತಂಕಾರಿ ವಿಷಯವಾಗಿದೆ. ಹೆಣ್ಣಿನ ನಿರ್ಲಕ್ಷ್ಯ ಸಾಮಾನ್ಯ ಎನ್ನುವ ಮನೋಭಾಗ, ಅನಕ್ಷರತೆ, ಕುಡಿತ ಜೊತೆಗೆ ಕೋರೊನಾ ಪರಿಸ್ಥಿತಿ  ಎಲ್ಲವು ಕಾರಣವಾಗಿದೆ. ಇದಲ್ಲದೇ ಹೆಣ್ಣನ್ನು ಒಡೆಯುವುದು, ಅಸ್ತುಬದ್ಧದಲ್ಲಿಡುವುದು ಗಂಡಿನ ಹಕ್ಕು ಎಂಬ ಬಾವ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ಕೌಟಂಬಿಕ ದೌರ್ಜನ್ಯ ಮತ್ತು ಬಾಲ್ಯವಿವಾಹ ಹೆಚ್ಚಳವಾಗಿರುವುದಕ್ಕೆ ಆತಂಕವನ್ನು ವ್ಯಕ್ತಪಡಿಸಿರುವ ಈ ರೀತಿಯ ಕೌಟುಂಬಿಕ ದೌರ್ಜನ್ಯ, ಹಿಂಸಾಚಾರಕ್ಕೆ ಪುರುಷ ಪ್ರಧಾನ ಮೌಲ್ಯವೇ ಕಾರಣವಾಗಿದೆ. ಮತ್ತು ಸರಕಾರದ ನಿರ್ಲಕ್ಷವೇ ಇದಕ್ಕೆ ಕಾರಣ  ಎಂದು  ಲೇಖಕಿ ರೂಪಾ ಹಾಸನ ರವರು ಆರೋಪಿಸಿದ್ದಾರೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕೆ.ಎಸ್.ವಿಮಲಾ ರವರು ಆತಂಕವನ್ನು ವ್ಯಕ್ತಪಡಿಸಿದ್ದು, ಹಲ್ಲುಕಿತ್ತ ಹಾವಿನಂತಾಗಿರುವ ಕಾನೂನು ಹಾಗೂ ಸರಕಾರದ ನಿರ್ಲಕ್ಷವೇ ಇದಕ್ಕೆ ಕಾರಣ, ವರ್ಮಾ ಸಮಿತಿಯ ಶಿಫಾರಸ್ಸನ್ನು ಜಾರಿ ಮಾಡಿಬೇಕು ಎಂದು ಕೆ.ಎಸ್. ವಿಮಲಾ ಆಗ್ರಹಿಸಿದ್ದಾರೆ.

ಸಮೀಕ್ಷೆಗಳು ಈ ರೀತಿಯ ಆತಂಕವನ್ನು, ಕಳವಳವನ್ನು ಪ್ರತಿ ಬಾರಿಯೂ ವ್ಯಕ್ತಪಡಿಸುತ್ತಿವೆ. ಶೆ 50 ರಷ್ಟು ಬಾಲಕೀಯರು ರಕ್ತ ಹೀನತೆಯಿಂದ ಬಳಲುತ್ತಿರುವುದು, ಬಾಲ್ಯ ವಿವಾಹ ಹೆಚ್ಚಳವಾಗುತ್ತಿರುವುದು, ಕೌಟಂಬಿಕ  ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ಸರಕಾರ ಗಂಭಿರವಾಗಿ ಪರಿಗಣಿಸಬೇಕು. ಇವುಗಳಿಗೆ ಪರಿಹಾರ, ರಕ್ಷಣೆ, ನ್ಯಾಯವನ್ನು ನೀಡುವ ಮೂಲಕ ಇಂತಹ ಆತಂಕಗಳು ಪುನರಾವರ್ತೆನಾಯಾಗದಂತೆ ನೋಡಿಕೊಳ್ಳಬೇಕಿದೆ.

Donate Janashakthi Media

Leave a Reply

Your email address will not be published. Required fields are marked *