ಮಹಿಳೆ ಮೇಲೆ ಹಲ್ಲೆ ನಡೆಸಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ

ಬೆಂಗಳೂರು: ಮಹಿಳೆ ಮೇಲೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಹಲ್ಲೆ ನಡೆಸಿದ ಭಯಾನಕ ಘಟನೆ ಜೂನ್ 14 ಶನಿವಾರದಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ, ಜಯನಗರದ ಬಾಟ್ ಶೋರೂಂ ಬಳಿ ಸಂಭವಿಸಿದೆ. ಶ್ರೇಯ ಎಂಬ ಮಹಿಳೆ ಹಲ್ಲೆಗೆ ಒಳಗಾಗಿದ್ದಾಳೆ.

ಘಟನೆ ಹೀಗಿದೆ:

ಶ್ರೇಯ ಆ ದಿನದಂದು ರ‍್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ (ರ್ಯಾಶ್ ಡ್ರೈವಿಂಗ್) ವಾಹನ ಚಲಾಯಿಸುತ್ತಿದ್ದುದರಿಂದ, ಶ್ರೇಯ ಅವರು ಅಪಾಯ ಭೀತಿಯಿಂದ ಚಾಲಕನನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಸಾವು

ಇದರಿಂದ ಬೇಸತ್ತ ಚಾಲಕ, ಮಾತಿಗೆ ಮಾತು ಬೆಳೆಸಿ ಜಗಳ ಆರಂಭಿಸಿದನು. ಜಗಳದ ಮಧ್ಯೆ ಆಕ್ರೋಶಗೊಂಡ ಚಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿಯೇ ಶ್ರೇಯ ಮೇಲೆ ಹಲ್ಲೆ ಮಾಡಿದ ಚಾಲಕ, ಸ್ಥಳದಿಂದ ಪರಾರಿಯಾದನು ಎಂದು ತಿಳಿದುಬಂದಿದೆ.

ಇನ್ನು ಈ ಗಂಭೀರ ಘಟನೆ ನಡೆದ ನಂತರವೂ ಮಹಿಳೆ ಹೋಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಸಮೇತ ಮಾಹಿತಿ ಪಡೆದುಕೊಂಡ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ತೀವ್ರ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ಶ್ರೇಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಮಹಿಳೆಯ ಮೇಲೆ ಹಲ್ಲೆ ಆಗುತ್ತಿದೆ. ಆದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ NCR ಎಂದು ಬರೆದು ಕೈತೊಳೆಯುತ್ತಾರೆ ಎಂದರೆ ಮಹಿಳೆಯರ ಸುರಕ್ಷತೆ ಯಾವ ಮಟ್ಟದಲ್ಲಿದೆ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಮಹಿಳಾ ಸುರಕ್ಷತೆಗೆ ಗಂಭೀರ ಪ್ರಶ್ನೆ:

ಈ ಘಟನೆ ಇಂತಹ ಆಪ್ ಆಧಾರಿತ ಸಾರಿಗೆ ಸೇವೆಗಳ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ. ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿರುವಾಗ, ಈ ರೀತಿಯ ನಿರ್ಲಕ್ಷ್ಯವು ಆತಂಕಕಾರಿಯಾಗಿದೆ.

ಇದನ್ನೂ ನೋಡಿ: ಜಾತಿ ಗಣತಿ ವಿರೋಧಿಸಿದ ಮೋದಿಯವರ ಯು ಟರ್ನ್… ಸಮರ್ಥಿಸಿದ‌ ಸಿದ್ದರಾಮಯ್ಯನವರು ಕವಲು ದಾರಿಯಲ್ಲಿ….

Donate Janashakthi Media

Leave a Reply

Your email address will not be published. Required fields are marked *