ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗಳಿಸಿದ ಹೈಕೋರ್ಟ್

ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ  ಕಾರು ಚಾಲಕನ ಮೊಬೈಲ್​​​​​ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯು ಇಂದು ಹೈಕೋರ್ಟ್​​​ನಲ್ಲಿ ಇತ್ಯರ್ಥಗೊಂಡಿದೆ. ಅತ್ಯಾಚಾರ 

SIT ವಶಕ್ಕೆ ಪಡೆದಿರುವ ವಿಡಿಯೋ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ನಡೆದಿದ್ದು, ಕಾನೂನು ಬದಲಾವಣೆ ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

ಇದನ್ನೂ ಓದಿ : ನ್ಯಾಯಮೂರ್ತಿಗಳ ಮಹಿಳೆಯರ ಕುರಿತ ಪಾಳೆಯಗಾರಿ ಮನಸ್ಥಿತಿ – ವಿಮೋಚನಾ ಸಂಘ ಹಾಗು ಮಕ್ಕಳ ಹೋರಾಟ ಸಮಿತಿಗಳ ಖಂಡನೆ

ಮಹಿಳೆಯರ ಖಾಸಗಿತನ ಗೌರವಿಸುವುದು ಕರ್ತವ್ಯ, ಇತರೆ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು. ಹೀಗಾಗಿ ಕಾನೂನು ಬದಲಾವಣೆಗೆ ಸಾಧ್ಯವಿಲ್ಲ ಎಂದಿರುವ ಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.

ಈಗಾಗಲೇ ಎಲ್ಲಾ ವಿಡಿಯೋ ಫೋಟೋ ನೀಡಲಾಗಿದೆ. ಪ್ರಕರಣ ವಿಳಂಬ ಮಾಡುಲು ಈ ರೀತಿ ಅರ್ಜಿ ಸಲ್ಲಿಸಲಾಗಿದೆ. ಕೆಳ ಹಂತದ ನ್ಯಾಯಾಲಯದಲ್ಲೂ ಸಿಡಿಆರ್​​ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಜ್ವಲ್ ಸಲ್ಲಿಸಿದ್ದ​​ ಅರ್ಜಿ ಕುರಿತು ಎಸ್​​​​ಪಿಪಿ ಜಗದೀಶ್ ಅವರು ತಮ್ಮ ವಾದದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ನೋಡಿ : ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *