1303, ದೆಹಲಿ ಸುಲ್ತಾನನಾದ ಅಲ್ಲಾವುದ್ದೀನ್ ಖಿಲ್ಜಿ ಜನವರಿ ತಿಂಗಳಿನಿಂದ ಎಂಟು ತಿಂಗಳ ಸುದೀರ್ಘ ಮುತ್ತಿಗೆಯ ನಂತರ ಗುಹಿಲ ರಾಜ ರತ್ನಸಿಂಹನಿಂದ ಚಿತ್ತೋರ್ ಕೋಟೆಯನ್ನು ಈ ದಿನ(ಆಗಸ್ಟ್ 26)ದಂದು ವಶಪಡಿಸಿಕೊಳ್ಳುತ್ತಾನೆ. ಈ ಸಂಘರ್ಷವನ್ನು ಐತಿಹಾಸಿಕ ಮಹಾಕಾವ್ಯ ಪದ್ಮಾವತ್ ಸೇರಿದಂತೆ ಹಲವಾರು ಪೌರಾಣಿಕ ಕಥೆಗಳಲ್ಲಿ ವಿವರಿಸಲಾಗಿದೆ.
ಅಲ್ಲಾವುದ್ದಿನ್ ಖಿಲ್ಜಿ ರತ್ನಸಿಂಹನ ಸುಂದರ ಪತ್ನಿ ಪದ್ಮಿನಿ ಯನ್ನು ಪಡೆಯುವುದಕ್ಕಾಗಿ ಈ ಕೃತ್ಯ ಎಸಗಿದನೆಂದು ಇತಿಹಾಸಕಾರರು ಹೇಳುತ್ತಾರೆ. ಈ ದಂತಕಥೆಯ ಆಧಾರದ ಮೇಲೆ ಚಿತ್ರಿಸಿದ ಪದ್ಮಾವತ್ ಸಿನಿಮಾ ಕೂಡ ಹಲವಾರು ವಿವಾದಗಳಗೆ ಗುರಿಯಾಗಿತ್ತು.
ವಾಯುವ್ಯ ಭಾರತದ ಮೇವಾರ್ ಪ್ರದೇಶವನ್ನು ಗುಹಿಲಾ ರಾಜವಂಶಸ್ತರು ಆಳುತ್ತಿದ್ದರು, ಅವರ ಆಸ್ಥಾನವು ಚಿತ್ತೋರ್ (ಚಿತ್ತೋರ್ಗಢ್) ಕೋಟೆಯಲ್ಲಿ ನೆಲೆಗೊಂಡಿತ್ತು. 1299 ರಲ್ಲಿ ಅಲ್ಲಾವುದ್ದೀನ್ ಸೇನಾಪತಿ ಉಲುಗ್ ಖಾನ್ ಗುಜರಾತ್‌ಗೆ ಹೋಗುವ ಮಾರ್ಗದಲ್ಲಿ ಮೇವಾರ್ ಪ್ರದೇಶದ ಮೇಲೆ ದಾಳಿ ನಡೆಸುತ್ತಾನೆ. ಆದಾಗ್ಯೂ, ಇದು ಗಂಭೀರ ಆಕ್ರಮಣಕ್ಕಿಂತ ಹೆಚ್ಚಾಗಿ ಲಘು ದಾಳಿಯಾಗಿ ಕಂಡುಬರುತ್ತದೆ. ಗುಹಿಲ ರಾಜ ಸಮರಸಿಂಹ ಬಹುಶಃ ಕಪ್ಪಕಾಣಿಕೆ ಕೊಡುವುದರ ಮೂಲಕ ತನ್ನ ರಾಜ್ಯವನ್ನು ಆಕ್ರಮಣದಿಂದ ರಕ್ಷಿಸಿಕೊಳ್ಳುತ್ತಾನೆ.
1301 ರಲ್ಲಿ ಅಲ್ಲಾವುದ್ದೀನ್ ದೆಹಲಿ ಮತ್ತು ಚತ್ತೋರ್ ನಡುವೆ ಇರುವ ರಣಥಂಬೋರ್ ಅನ್ನು ವಶಪಡಿಸಿಕೊಂಡು ದೆಹಲಿದೆ ಹಿಂತಿರುಗುತ್ತಾನೆ. ಅದೇ ವರ್ಷ, ರತ್ನಸಿಂಹ ಚಿತ್ತೋರಿನ ಸಿಂಹಾಸನವನ್ನು ಏರುತ್ತಾನೆ. ಮಲಿಕ್ ಮೊಹಮ್ಮದ್ ಜೈಸಿಯವರ ಮಹಾಕಾವ್ಯ ಪದ್ಮಾವತ್ ಆಧರಿಸಿದ ನಂತರದ ದಂತಕಥೆಗಳು, ರಾಘವ ಎಂಬ ವ್ಯಕ್ತಿ ಅಲ್ಲವುದ್ದೀನ್ ಗೆ ಪದ್ಮಿಣಿಯ ಅಸಾಧಾರಣ ಸೌಂದರ್ಯದ ಬಗ್ಗೆ ಹೇಳಿರುತ್ತಾನೆ, ರತ್ನಸಿಂಹನ ರಾಣಿ ಪದ್ಮಿನಿಯನ್ನು ಪಡೆಯಲು ಅಲ್ಲಾವುದ್ದೀನ್ ಚಿತ್ತೋರ್ ಅನ್ನು ಆಕ್ರಮಿಸಿದನೆಂದು ಹೇಳುತ್ತವೆ. ಅಲ್ಲಾವುದ್ದೀನ್‌ನ ಚಿತ್ತೋರ್ ವಿಜಯದ ಆರಂಭಿಕ ದಾಖಲೆಗಳಲ್ಲಿ ಪದ್ಮಿಣಿಯ ಉಲ್ಲೇಖಗಳು ಕಾಣುವುದಿಲ್ಲ, ಉದಾಹರಣೆಗೆ ಅಮೀರ್ ಖುಸ್ರು, ಬರಣಿ ಮತ್ತು ಇಸಾಮಿಯ ರಚನೆಗಳಲ್ಲಿ ಇದನ್ನು ನಾವು ಗಮನಿಸಬಹುದು .ಇತಿಹಾಸಕಾರರು ಪದ್ಮಿಣಿ ದಂಥಕಥೆಯ ಸತ್ಯಾಸತ್ಯತೆಯನ್ನು ತಿರಸ್ಕರಿಸುತ್ತಾರೆ. ಎಷ್ಡೇ ಆದರೂ ಈ ಘಟನೆ ಚರಿತ್ರೆಯಲ್ಲಿ ಮರೆಯಾಗದ ಅಕ್ಷರಗಳಾಗಿ ಅಚ್ಚುಳಿದಿದೆ.