ನವದೆಹಲಿ: ಬಾಬರಿ ಮಸೀದಿ ಒಡೆದು ಕಟ್ಟಿದ ಕಟ್ಟಡವಾದ ರಾಮಮಂದಿರ ಉದ್ಘಾಟನೆ ವಿಚಾರ ಇದೀಗ ತೀವ್ರ ವಿವಾದವಾಗುತ್ತಿದೆ. ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದರಿಂದ ತಾವು ಅಲ್ಲಿಗೆ ಹೋಗುತ್ತಿಲ್ಲ ಎಂದು ಪುರಿಯ ಪೂರ್ವಂಮಣ್ಯ ಗೋವರ್ಧನ ಪೀಠದ 145 ನೇ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಹೇಳಿದ್ದಾರೆ. ಮೋದಿಯವರು ಅಲ್ಲಿಗೆ ಹೋಗಿ ಮೂರ್ತಿಯನ್ನು ಮುಟ್ಟಿ ಪ್ರತಿಷ್ಠಾಪನೆ ಮಾಡುವಾಗ ಅಲ್ಲಿ ಚಪ್ಪಾಳೆ ತಟ್ಟಲು ನಾನು ಅಲ್ಲಿಗೆ ಹೋಗಬೇಕೆ ? ಎಂದು ಅವರು ಕೇಳಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದ ಅವರು, “ಪ್ರಧಾನ ಮಂತ್ರಿಗಳೇ ಎಲ್ಲವನ್ನೂ ಮಾಡುವುದಾದರೆ ಧರ್ಮಾಚಾರ್ಯರುಗಳಿಗೆ ಅಲ್ಲಿ ಹೋಗಿ ಮಾಡುವುದೇನಿದೆ. ಸ್ವಾಮೀಜಿಗಳು ಮತ್ತು ಸಂತರು ಮಾಡಬೇಕಾದ ಪುಣ್ಯ ಕಾರ್ಯಗಳೆಲ್ಲವನ್ನೂ ಪ್ರಧಾನಿಯವರೇ ಮಾಡುತ್ತಿದ್ದಾರೆ” ಎಂದು ಕೇಳಿದ್ದಾರೆ. ಅದಾಗ್ಯೂ, ಮೋದಿಯವರು ತಾವು ಜಾತ್ಯತೀತ ಮುಖಂಡ ಎಂದು ಬಿಂಬಿಸಿಕೊಳ್ಳದೆ ಸನಾತನ ಧರ್ಮವನ್ನು ಗೌರವಿಸುತ್ತಿರುವುದನ್ನು ಅವರು ಹೊಗಳಿದ್ದಾರೆ.
ಇದನ್ನೂ ಓದಿ: ‘ಬಯೋಕಾನ್ ಹೆಬ್ಬಗೋಡಿ ಮೆಟ್ರೊ ನಿಲ್ದಾಣ’ | ಯಾವುದೆ ಬದಲಾವಣೆ ಇಲ್ಲ ಎಂದ BMRCL!
ಅವರದೇ ಧಾಟಿಯಲ್ಲಿ ಮಾತನಾಡಿರುವ ಉತ್ತರಖಾಂಡದ ಜ್ಯೋತಿಷ್ ಪೀಠದ 1008 ನೇ ಶಂಕರಾಚಾರ್ಯರಾಗಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, “ಪೂರ್ಣ ನಿರ್ಮಾಣವಾಗದ ಮಂದಿರವನ್ನು ಉದ್ಘಾಟನೆ ಮಾಡುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ. ಅಯೋಧ್ಯಾ ರಾಮಮಂದಿರ ಪುಣ್ಯ ಕಾರ್ಯ ಮಾಡುವಾಗ ಯಾವ ಸಂಪ್ರದಾಯಗಳನ್ನೂ ಪಾಲಿಸುತ್ತಿಲ್ಲ” ಎಂದು ಹೇಳಿದ್ದಾರೆ.
“ಭಾರತದಲ್ಲಿ ರಾಜರು ಹಾಗೂ ಧಾರ್ಮಿಕ ಮುಖಂಡರುಗಳು ಯಾವಾಗಲೂ ಬೇರೆ ಬೇರೆಯೇ ಆಗಿದ್ದಾರೆ. ಆದರೆ ಈಗ ರಾಜಕೀಯ ಮುಖಂಡರು ಧಾರ್ಮಿಕ ಮುಖಂಡರಾಗುತ್ತಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದದ್ದು ಮತ್ತು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಮಂದಿರ ನಿರ್ಮಾಣ ಪೂರ್ಣವಾಗದೇ ಯಾವ ದೇವಸ್ಥಾನಕ್ಕೂ ಪ್ರವೇಶವಿಲ್ಲ ಅಥವಾ ಅಲ್ಲಿ ಪುಣ್ಯಕಾರ್ಯ ಮಾಡುವ ಹಾಗಿಲ್ಲ. ಅವರು ಮಾಡುತ್ತಿರುವುದು ಹಿಂದೂವಾದದ ಸಂಪ್ರದಾಯಕ್ಕೆ ಸರಿಹೊಂದುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾಗೂ ವಿ.ಹೆಚ್.ಪಿ.ಯ ಹಿರಿಯ ಮುಖಂಡರೂ ಆಗಿರುವ ಚಂಪಟ್ ರಾಯ್ ಅವರು, “ರಾಮಮಂದಿರವು ರಮಾನಂದ ಪಂಥದ ಜನರಿಗೆ ಸೇರಿದ್ದು, ಶಂಕರಾಚಾರ್ಯರಿಗಾಗಲೀ, ಶೈವರಿಗಾಗಲೀ ಅಥವಾ ಶಾಕ್ತ ಪಂಥವರಿಗಾಗಲೀ ಸೇರಿದ್ದಲ್ಲ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, “ಹಾಗಾದರೆ ಚಂಪಟ್ ರಾಯ್ ರಾಜೀನಾಮೆ ನೀಡಬೇಕು ಮತ್ತು ಮಂದಿರವನ್ನು ರಮಾನಂದ ಪಂಥದವರಿಗೆ ಬಿಟ್ಟುಕೊಡಬೇಕು” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್ ಎಂಬ ತೂಗುಗತ್ತಿ – ಕೆ. ಮಹಾಂತೇಶ್ Janashakthi Media
ಇವನು/ರು ಅತಿ ಸೊಕ್ಕಿನ ಮನುಷ್ಯ. ರಾಮ್ ಮಂದಿರವನ್ನು (ಜಾಗೆ ಬಿಡಿಸಿಕೊಳ್ಲುವುದರಿಂದ ಹಿಡಿದು, ನಿರ್ಮಾಣ ಟ್ರಸ್ಟ್, ಶಂಕು ಸ್ಥಾಪನೆ ಯ ವರೆಗಿನ ಕಾರ್ಯಗಳಲ್ಲಿ ಅತ್ಯಂತ ಶಕ್ತಿಯುತ ಕೇಂದ್ರವಾಗಿ, ಬಂಡೆಗಲ್ಲಿನಂತೆ ನಿಂತು) ನಿರ್ಮಿಸುವ ಕೆಲಸದಲ್ಲಿನ ಉತ್ಸುಕತೆ ಮೋದಿಯವರಲ್ಲಿ ಎಷ್ಟಿದೆಯೋ ಅದರ ೧ ಪ್ರತಿಶತವಾದರೂ ಇವರಲ್ಲಿ ಇದ್ದರೆ ಇವರನ್ನೇ ಕರೆಯಬಹುದಿತ್ತೇನೋ… ಇವರು ಕಾಂಗ್ರೆಸ್ಸಿಗೆ ಒಂದು ಅಸ್ತ್ರವಿದ್ದಂತೆ…
Hindu ಧರ್ಮದ ಮೇಲೆ ಗುಬೆ ಕೂಡ್ಸೂ ನಿಮ್ಮಂತ ಸ್ವಾಮೀಜಿ ಗಳಿಗೆ ಸರ್ಕಾರ ಕರ್ದರ್ಸ್ಟು ಬಿಟ್ಟರೆಷ್ಟು ನಿಮ್ಮಂತವರು ಮನೆಯಲ್ಲೇ ಕೂತು ಟಿವಿ ನೋಡ್ತಾ ಇರಿ ಗೋವರ್ಧನ ಪೀಠದ 145 ನೇ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು Niu ಬರಲಾರದರೆ ಒಳ್ಳೆಯದು ನಿಮ್ಮಂತವರು, ಹಿಂದುರಸ್ತ್ರದಲ್ಲಿ ಇರುವದೆ ವೆಸ್ಟ್ ಜೈ ಶ್ರೀರಾಮ್, ಜೈ ಹಿಂದುಸ್ಥಾನ್,