ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ದೇಶದ ಜನತೆ ಬಹುಕಾಲದಿಂದಲೂ ಬಯಸುತ್ತಿದೆ, ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯು ಭಾರತೀಯರ ಹಬ್ಬವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹಾಜರಾಗದಿರಲು ನಿರ್ಧರಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಏಕೆ ಹಾಜರಾಗುತ್ತಿಲ್ಲ” ಎಂಬುದನ್ನು ವಿವರಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ, ಆದರೆ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮಾತುಕತೆ ಮುಗಿದ ನಂತರ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಮತ್ತು ನಿರ್ಧಾರ ಕೈಗೊಂಡ ನಂತರ ಯಾವುದೇ ಗೊಂದಲವಿಲ್ಲ ಮತ್ತು ಎಲ್ಲವೂ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ | ಶಂಕರಾಚಾರ್ಯರ ನಿರ್ಧಾರ
ರಾಮಮಂದಿರ ಉದ್ಘಾಟನೆಗೆ ಬಾರದಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಗ್ಗೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿ, ”ಪಕ್ಷದ ಆದೇಶವನ್ನು ನಾವು ಪಾಲಿಸಬೇಕು, ಹೈಕಮಾಂಡ್ ಕಾರ್ಯಕ್ರಮಕ್ಕೆ ಹೋಗದಂತೆ ಕರೆ ನೀಡಿದ್ದರಿಂದ,
ನಾವು ಅಯೋಧ್ಯೆಯಲ್ಲಿ ಉದ್ಘಾಟನೆಗೆ ಹೋಗುವುದಿಲ್ಲ” ಎಂದು ಹೇಳಿದ್ದಾರೆ. ಕುಮಾರಸ್ವಾಮಿ
ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ಯಾಕೆ ಹೋಗುತ್ತಿಲ್ಲ ಎಂಬುವುದನ್ನು ವಿವರಿಸುತ್ತಾ, “ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣದಲ್ಲಿ ಸಾವಿರಾರು ವರ್ಷಗಳಿಂದ ರಾಮಮಂದಿರವಿದೆ. ಅಯೋಧ್ಯೆಯ ರಾಮಮಂದಿರದ ವಿಶಿಷ್ಟತೆಯೆಂದರೆ ರಾಮನ ಜನ್ಮಸ್ಥಳದಲ್ಲಿ ಅದನ್ನು ನಿರ್ಮಿಸಲಾಗಿದೆ. ಆದರೆ ವಾಲ್ಮೀಕಿ ರಾಮಾಯಣದ ಕರ್ತೃ. ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕು ಎಂಬುದು ಎಲ್ಲ ಸಮುದಾಯಗಳ ಆಗ್ರಹವಾಗಿದೆ” ಎಂದು ಹೇಳಿದ್ದಾರೆ. ರಾಮಲಲ್ಲಾನನ್ನು ಟೆಂಟ್‌ನಲ್ಲಿಟ್ಟು ಪೂಜಿಸುವಾಗ ನಾವು ಅಯೋಧ್ಯೆಗೆ ಹೋಗಿದ್ದೆವು, ಮುಂದೆ ರಾಮಮಂದಿರಕ್ಕೆ ಭೇಟಿ ನೀಡುತ್ತೇವೆ, ಇದು ವೈಯಕ್ತಿಕ ನಿರ್ಧಾರ ಎಂದು ರಾಜಣ್ಣ ಹೇಳಿದ್ದಾರೆ.
ರಾಜ್ಯ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, “ಹಿಂದೂ ಧರ್ಮ ಯಾರ ಸ್ವತ್ತೂ ಅಲ್ಲ. ದಲಿತರಾದ ನಮ್ಮನ್ನು ದೇವಾಲಯದ ಹೊರಗೆ ನಿಲ್ಲುವಂತೆ ಮಾಡಲಾಗಿದೆ. ಜನರು ನಮ್ಮನ್ನು ಒಳಗೆ ಆಹ್ವಾನಿಸುವುದಿಲ್ಲ. ಅಯೋಧ್ಯೆಗೆ ಭೇಟಿ ನೀಡಲೇ ಬೇಕು ಎಂದೇನಿಲ್ಲ, ಇಲ್ಲಿಂದಲೇ ಗೌರವ ಸಲ್ಲಿಸಬಹುದು. ಹಿಂದುತ್ವದ ಬಗ್ಗೆ ಮಾತನಾಡುವವರು ದಲಿತರ ಬಗ್ಗೆ ಕೂಡಾ ಮಾತನಾಡಬೇಕು. ಅವರ ಹಿಂದೂ ವ್ಯಾಖ್ಯಾನದಲ್ಲಿ ದಲಿತರು ಇದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’’ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್ ಎಂಬ ತೂಗುಗತ್ತಿ – ಕೆ. ಮಹಾಂತೇಶ್ Janashakthi Media