ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಪಡಿತರ ಚೀಟಿ ಹೊಂದಿರುವವರ ಎಲ್ಲಾ ರೀತಿಯ ಮಾಹಿತಿಗಳನ್ನು ಕಲೆ ಹಾಕಿರುವ ಇಲಾಖೆಯು ಸದ್ಯ ಅದರಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಸ್ತರಕ್ಕೆ ಸೇರದ ಸುಮಾರು 91,189 ಜನರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ.
ಇಲಾಖೆಯು ಅತ್ಯಂತ ಕುಲಂಕೂಷವಾಗಿ ಮೌಲ್ಯಮಾಪನ ಮಾಡಿದ್ದು, ಹಲವು ರೀತಿಯಲ್ಲಿ ಡೇಟಾವನ್ನು ಸಂಗ್ರಹಿಸಿದೆ. ಬಿಪಿಎಲ್ ಮಾನದಂಡದಿಂದ ಹೊರಿಗಿರುವ ಸಾಕಷ್ಟು ಪ್ರಮಾಣದ ಹೆಚ್ಚನ ಪಡಿತರದಾರರು ಸರ್ಕಾರದ ಸಬ್ಸಿಡಿಗಳನ್ನು ಬಳಸುತ್ತಿದ್ದಾರೆ. ಇಲಾಖೆ ಅಂತಹ ಪ್ರಕರಣಗಳನ್ನು ಗುರುತಿಸಿದೆ.
ಇದನ್ನು ಓದಿ: ಕಳಪೆ ಆಹಾರದ ಕಿಟ್ ವಿತರಣೆ ನಿರ್ಲಕ್ಷ್ಯವೋ!? ಅಥವಾ ಭ್ರಷ್ಟಾಚಾರವೋ!!?
ಪ್ರಮುಖವಾಗಿ ರದ್ದುಪಡಿಸಲಾದ ಪಡಿತರ ಚೀಟಿ ಹೊಂದಿರುವ ಅನೇಕ ವ್ಯಕ್ತಿಗಳು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದಾರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದೆ. ಪಡಿತರ ಚೀಟಿ ಹೊಂದಿರುವ ಕೆಲವರು ಮೃತರಾಗಿದ್ದಾರೆ ಇತರರು ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆ ಅಥವಾ ಹೆಚ್ಚು ಆದಾಯ ಗಳಿಸುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಅವರುಗಳು ಇನ್ನೂ ಬಿಪಿಎಲ್ ಕಾರ್ಡುದಾರರಾಗಿದ್ದಾರೆ ಮತ್ತು ಮಾಸಿಕ ಸಬ್ಸಿಡಿ ಪಡಿತರವನ್ನು ಪಡೆಯುತ್ತಿದ್ದಾರೆ.
ಇಂತಹ ಹಲವು ಪ್ರಕರಣಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪರಿಶೀಲನೆ ನಡೆಸಿದ್ದು, ಇತ್ತೀಚಿನ ವರದಿಯ ಪ್ರಕಾರ, ಅವರ ಆದಾಯ ತೆರಿಗೆ ವಿವರಗಳ ಆಧಾರದ ಮೇಲೆ ಒಟ್ಟು 91,189 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 50,060 ಜನರು ಆಂತ್ಯೋದಯ ಅನ್ನ ಯೋಜನೆ (ಎಎವೈ), ಪ್ರಾಥಮಿಕ ನಿವಾಸಿ (ಪಿಎಚ್‌ಹೆಚ್) ಕಾರ್ಡ್‌ಗಳನ್ನು ಹೊಂದಿದ್ದಾರೆ, 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿದ 85,204 ಆದಾಯ ತೆರಿಗೆ ಪಾವತಿದಾರರು ಮತ್ತು 2,18,125 ಜನರು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಆದಾಯ ತೆರಿಗೆ ಸಲ್ಲಿಸಿದ ಆಧಾರಗಳನ್ನು ಒಟ್ಟುಕೊಂಡು ಒಟ್ಟು 79,069 ಎಎವೈ ಪಡಿತರ ಚೀಟಿಗಳು ಮತ್ತು ಪಿಎಚ್‌ಹೆಚ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಇಲಾಖೆಯ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ: ಜೀವಹಿಂಡುವ ಬೆಲೆಯೇರಿಕೆ
ಆಹಾರ ಫಲಾನುಭವಿಗಳ ಆಧಾರದಲ್ಲಿ ಬೇರೆ ಬೇರೆ ಇಲಾಖೆಗಳ ಫಲಾನುಭವಿಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇಲಾಖೆ ಯಾವುದೇ ಪಡಿತರ ಚೀಟಿ ನೀಡಿಲ್ಲ, ಮತ್ತು ಸಾಂಕ್ರಾಮಿಕ ರೋಗದ ಒಂದು ವರ್ಷಕ್ಕೂ ಹೆಚ್ಚು ಕಾಲ ಅಕ್ರಮ ಫಲಾನುಭವಿಗಳನ್ನು ತೆಗೆದು ಹಾಕಲು ಬಳಸಿಕೊಳ್ಳಲಾಗಿದೆ. ಡೇಟಾವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು.
ಇದರಿಂದ ಇಲಾಖೆಗೆ ತಿಂಗಳಿಗೆ 5.01 ಕೋಟಿ ರೂ. ಮತ್ತು ವಾರ್ಷಿಕವಾಗಿ 60.20 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಆದಾಯ-ತೆರಿಗೆ ಸಲ್ಲಿಸುವ ಡೇಟಾವನ್ನು ಆಧರಿಸಿ ನೋಡಿದ್ದಲ್ಲಿ 79,069 ಪಡಿತರ ಚೀಟಿ ಹೊಂದಿರುವವರಲ್ಲಿ 4,893 ಮಂದಿ ಎಎವೈ ಕಾರ್ಡ್ ಹೊಂದಿರುವವರು ಮತ್ತು 74,176 ಪಿಎಚ್‌ಹೆಚ್ ಕಾರ್ಡ್ ಹೊಂದಿರುವವರು ಎಂದು ಇಲಾಖೆ ಗುರುತಿಸಿದೆ.
ಕಂದಾಯ ಇಲಾಖೆಯು ಮೂಲಕ ಪರಿಶೀಲಿಸಿದಾಗ 12,120 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಮತ್ತು ಸಾವಿನ ಮಾಹಿತಿಯ ನೋಂದಣಿಯ ಆಧಾರದ ಮೇಲೆಯೂ 4,01,307 ಪಡಿತರ ಚೀಟಿ ಹೊಂದಿರುವವರನ್ನು ಇಲಾಖೆಯು ಗುರುತಿಸಿದೆ.
ಮಾಹಿತಿ ಸಂಗ್ರಹವು ಆಧಾರ್ ಕಾರ್ಡ್‌ಗಳ ಡೇಟಾವನ್ನು ಆಧರಿಸಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಲು ಭೂಮಿ ಡೇಟಾ ಸಂಚಯದ ದಾಖಲೆಗಳನ್ನು ಸಹ ಪರಿಶೀಲಿಸಲಾಯಿತು.
ಕೇಂದ್ರವು ಈಗ ವಿವರವಾದ ವರದಿಯನ್ನು ಕೋರಿದೆ ಮತ್ತು ಸಬ್ಸಿಡಿಯನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲರನ್ನು ಕಂಡುಹಿಡಿಯಲು ಅದೇ ಮಾದರಿಯನ್ನು ಬಳಸಿಕೊಳ್ಲಲು ಇತರ ರಾಜ್ಯಗಳನ್ನು ಕೇಳಿದೆ.
- ರಾಜ್ಯದಲ್ಲಿ ಒಟ್ಟು ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 1,48,89,430
- ಅನರ್ಹ ಪಡಿತರ ಚೀಟಿಗಳು 5,53,969
- ಸ್ವೀಕರಿಸಲಾದ ಹೊಸ ಪಡಿತರ ಚೀಟಿ ಅರ್ಜಿ 3,37,920
- ಪರಿಶೀಲಿಸಲಾಗಿರುವ ಅರ್ಜಿ 1,86,092
- ತಿರಸ್ಕರಿಸಲಾದ ಅರ್ಜಿ 57,423