ರಾಜ್ಯ ಬಜೆಟ್ ನ ಪ್ರಮುಖ ಅಂಶಗಳು : (ಕ್ಷಣ ಕ್ಷಣದ ಬಜೆಟ್ ನ ಮಾಹಿತಿಯನ್ನು ಜನಶಕ್ತಿ ಮೀಡಿಯಾದಲ್ಲಿ ನೋಡ್ತಾ ಇರಿ)
ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2021-2022ರ ಸಾಲಿನ ಅಯವ್ಯಯವನ್ನು ವಿಧಾನಸಭೆಯಲ್ಲಿ ಮಂಡಸಿದರು. ರಾಜ್ಯ ಬಜೆಟ್ ಗಾತ್ರ 2,46,207 ಕೋಟಿ ರೂ.ಗಳು. ರಾಜ್ಯ ಬಜೆಟ್ 2021-2022ರ ಪ್ರಮುಖ ಅಂಶಗಳು
• ಪರಿಶಿಷ್ಟ ಜಾತಿ,ಪಂಗಡದವರಿಗೆ ಹಿಂದುಳಿದವರು, ಅಲ್ಪಸಂಖ್ಯಾತರು,ಮಹಿಳೆಯರು, ಮಕ್ಕಳು ಹಿರಿಯ ನಾಗರಿಕರು ಹಾಗು ವಿಕಲಚೇತನರಿಗೆ ಒತ್ತು
• ಕರ್ನಾಟಕದಲ್ಲಿ ಕೊರೊನಾ ನಿರ್ವಹಣೆಗೆ ಸುಮಾರು 5,372 ಕೋಟಿ ರೂಗಳ ವೆಚ್ಚ. ವಿವಿಧ ವರ್ಗಗಳ 63.59 ಲಕ್ಷ ಫಲಾನುಭವಿಗಳಿಗೆ ನೆರವು
• 35-45 ಲಕ್ಷ ರೂ.ಗಳವರೆಗಿನ ಮೌಲ್ಯದ ಅಪಾರ್ಟ್ಮೆಂಟ್ಗಳ ಖರೀದಿ ಮೇಲಿನ ನೋಂದಣಿ ಮುದ್ರಾಂಕ ತೆರಿಗೆ 5 ರಿಂದ 3 % ರಷ್ಟು ಕಡಿತ.
• ಪಿ.ಆರ್.ಆರ್. ಯೋಜನೆಗೆ ವೇಗ ಕೊಡಲು ನಿರ್ಧರಿಸಲಾಗಿದೆ. ಬೆಂಗಳೂರು ಸುತ್ತ 65 ಕಿ.ಮೀ ಉದ್ದದ 100 ಮೀ ಅಗಲದ ರಸ್ತೆ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಚಾಲನೆ. ಇದಕ್ಕಾಗಿ ಸ್ವಿಸ್ ಚಾಲೆಂಜ್ ಅಳವಡಿಸಿ ಟೆಂಡರ್ ಕರೆಯಲು ತೀರ್ಮಾನ.
• ಇದೇ ವರ್ಷ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು.
ಮಹಿಳಾ ದಿನಾಚರಣೆ ವಿಶೇಷ
• ಬಿಎಂಟಿಸಿ ಹಾಗೂ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಗಾರ್ಮೆಟ್ಸ್ ನಲ್ಲಿ ಕೆಲಸ ನಿರ್ಹಿಸುವ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಹೆಸರಿನಲ್ಲಿ ಬಿಎಂಟಿಸಿ ಬಸ್ ಪಾಸ್ ವಿತರಣೆ.
• ಆಸ್ಪತ್ರೆ ,ವೈದ್ಯಕೀಯ, ಮತ್ತಿತರ ಸೇವ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯಮಿಗಳಿಗೆ ಶೇ.4 ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ.
• ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 7500 ಸಿಸಿ ಕ್ಯಾಮರಾ ಅಳವಡಿಕೆ
• ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಗಳಿಗೆ ೬ ತಿಂಗಳವರೆಗೆ ಮಕ್ಕಳ ಆರೈಕೆಗಾಗಿ ಪ್ರಸೂತಿ ರಜೆ
75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೆಷ್ಮೆ ಮಾರುಕಟ್ಟೆ
75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೆಷ್ಮೆ ಮಾರುಕಟ್ಟೆ 100 ತಾಲೂಕು ಆಸ್ಪತ್ರೆಗಳಲ್ಲಿ 6 ಹಾಸಿಗೆಯ ಐಸಿಯು ನಿರ್ಮಾಣ ರೈಲು ಉಪನಗರ ಯೋಜನೆಗಳಿಗೆ 15767 ಕೋಟಿ ರೂ. ಮಹಿಳಾ ಸ್ವ ಸಹಾಯ ಸಂಘ ಉತ್ಪನ್ನಗಳಿಗೆ ಮಾರುಕಟ್ಟೆ ವೀರಶೈವ ಲಿಂಗಾಯತರಿಗೆ 500 ಕೋಟಿ ರೂ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.
75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೆಷ್ಮೆ ಮಾರುಕಟ್ಟೆ
ಕೇಂದ್ರದಿಂದ ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಕಡಿಮೆ ಮಾಡಲಾಗಿದೆ: ಯಡಿಯೂರಪ್ಪ
ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಕಡಿಮೆ ಮಾಡಲಾಗಿದೆ. ರಾಜ್ಯದ ಜಿಎಸ್ ಟಿ ಸಂಗ್ರಹಣೆ ಇಳಿಕೆ ಆಗಿರುತ್ತದೆ:
ರಾಜ್ಯದಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ: ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್, ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿದರದಲ್ಲಿ ಸಾಲ ಮತ್ತು ಕಷ್ಟದ ಸಮಯದಲ್ಲೂ ಸಂಬಳ, ಪಿಂಚಣಿ, ಸಬ್ಸಿಡಿ ಸಕಾಲದಲ್ಲಿ ನಿರ್ವಹಿಸಲಾಗಿದೆ.
ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಬಂದಿದೆ. ಕೊರೊನೋತ್ತರ ಕಾಲದಲ್ಲಿ ಭರವಸೆಯ ಆಶಾಕಿರಣ ಮೂಡಿಬಂದಿದೆ. ಕೃಷಿ, ನೀರಾವರಿ, ಮೂಲ ಸೌಕರ್ಯ ಸುಧಾರಣೆ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನಿಡಲಾಗಿದೆ:
ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಲು ನಮ್ಮ ಸರ್ಕಾರ ಪ್ರಯತ್ನಿಸಿದೆ ಯಡಿಯೂರಪ್ಪ ತಿಳಿಸಿದರು.
ಸಾಂಕ್ರಾಮಿಕವನ್ನು ಎದುರಿಸಲು ರಾಜ್ಯದಾದ್ಯಂತ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಕೊರೊನಾ ದುಃಸ್ವಪ್ನ, ಜೀವನವಿಡೀ ನೆನಪಿಸಿಕೊಳ್ಳುವಂತದ್ದು, ಈ ಸಮರದಲ್ಲಿ ಮಾನವಕುಲ ಜಯಿಸಿದೆ
ಭಾರತದ ಪಾತ್ರಕ್ಕೆ ಜಾಗತಿಕ ಮನ್ನಣೆ, ಕರ್ನಾಟಕದ ಪಾತ್ರ ಮಹತ್ತರ
ಕೊರೊನಾ ನಿಯಂತ್ರಣ, ಲಸಿಕೆ ಹಂಚಿಕೆಯಲ್ಲಿ ರಾಜ್ಯದ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮದ್ಯಪ್ರಿಯರಿಗೆ ಸಿಹಿ ಸುದ್ದಿ ಈ ಬಾರಿ ಅಬಕಾರಿ ಸುಂಕ ಹೆಚ್ಚಳ ಇಲ್ಲ.
• 2021-22 ರಲ್ಲಿ 12,655 ಕೋಟಿ ರೂ.ಗಳ ನೋಂದಣಿ ಮುದ್ರಾಂಕ ಇಲಾಖೆಯಿಂದ ಆದಾಯ ಸಂಗ್ರಹ ಗುರಿ
• ನೈಸರ್ಗಿಕ ಫಥ, ಮಕ್ಕಳ ಆಟದ ಅಂಗಳ, ಕುಡಿಯುವ ನೀರು ಇತ್ಯಾದಿ ಸೌಲಭ್ಯವುಳ್ಳ ಬೆಂಗಳೂರಿನ ಮೂರು ವೃಕ್ಷೋಧ್ಯನ ಅಭಿವೃದ್ಧಿ. ಮೊದಲಿಗೆ ಬೈಯಪ್ಪನಹಳ್ಳಿ ಬಳಿ ಇರುವ ಎನ್.ಜಿ.ಇ.ಎಫ್.ಗೆ ಸೇರಿದ 105 ಎಕರೆಯಲ್ಲಿ ವೃಕ್ಷೋಧ್ಯಾನ ಆರಂಭ
• ನಮ್ಮ ಮೇಟ್ರೊ ಮತ್ತು ಬಿಎಂಟಿಸಿ ಎರಡರಲ್ಲೂ ಬಳಸಬಹುದಾದ ಒಂದೇ ಕಾರ್ಡ್ ವಿತರಣೆಗೆ ಕ್ರಮ
• ಎಸ್.ಎಲ್.ಬೈರಪ್ಪನವರ ʻಪರ್ವʼ ನಾಟಕದ ಪ್ರದರ್ಶನ ರಂಗಾಯಣಗಳ ಮೂಲ ರಾಜ್ಯಾದ್ಯಂತ ಏರ್ಪಡಿಸುವುದು. ಇದಕ್ಕೆ 1 ಕೋಟಿ ಮೀಸಲಿಡುವುದು.
2021-22ರಲ್ಲಿ 24.580 ಕೋಟಿ ರಾಜ್ಯಸ್ವ ಸಂಗ್ರಹದ ಗುರಿ
• ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆ ಹೆಚ್ಚಳವಿಲ್ಲ.
• 2022ರ ಸಾಲಿನಲ್ಲಿ ಬೆಂಗಳೂರು ರಾಷ್ಟ್ರ ಮಟ್ಟದ ಎಲ್ಲಾ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಏರ್ಪಿಡಿಸುವುದು.
• ನಂದಿಬೆಟ್ಟ, ಕೆಮ್ಮನಗುಂಡಿಯನ್ನು ಅಂತರರಾಷ್ಟ್ರೀಯ ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವುದು.
• ರೂ.10 ಕೋಟಿ – ಮಂಡ್ಯ ಕ್ರೀಡಾಂಗಣ ಉನ್ನತೀಕರಣಕ್ಕಾಗಿ
• ರೂ. 50 ಕೋಟಿ – ಸರ್ಕಾರಿ ಶಾಲೆಗಳ ಪೀಟೋಪಕರಣಕ್ಕಾಗಿ
• ರೂ. 25 ಕೋಟಿ – ಅಡಿಕೆ ಬೆಳೆಗಾರರಿಗೆ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕಾಗಿ
• ರೂ. 75 ಕೋಟಿ – ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕಾಗಿ
• 9 ಸಾವಿರ ಕೋಟಿ ಅನುದಾನ – ಮೇಕೆದಾಟು ಯೋಜನೆಗಾಗಿ
• 30 ಸಾವಿರ ಕೋಟಿ ಬೆಂಗಳೂರು ಮೆಟ್ರೊ 1 ಹಾಗೂ ೨ನೇ ಹಂತದ ಯೋಜನೆಗಾಗಿ
• 14,788 ಕೋಟಿ – ಹೊರವರ್ತುಲ ರಸ್ತೆ ನಿರ್ಮಾಣಕ್ಕಾಗಿ
ಪ್ರವಾಸಿ ತಾಣ ಅಭಿವೃದ್ದಿಗೆ 500 ಕೋಟಿ ರೂ.
ಕಬಿನಿ ಡ್ಯಾಂ ಬಳಿ ಪಾರ್ಕ್ ನಿರ್ಮಾಣ -50 ಕೋಟಿ
ಕಡಲ ತೀರಗಳ ಅಭಿವೃದ್ದಿಗೆ 10 ಕೋಟಿ ರೂ.
ಉಡುಪಿ ಸೋಮೇಶ್ವರ ಕಡಲ ತೀರ ಅಭಿವೃದ್ದಿಗೆ – 10 ಕೋಟಿ
ಹೊಸ ಜಿಲ್ಲೆ ವಿಜಯನಗರದ ಅಭಿವೃದ್ದಿಗೆ ಆದ್ಯತೆ.
ಕ್ರೀಡಾ ವಿಜ್ಞಾನ ಕೇಂದ್ರಕ್ಕೆ 2 ಕೋಟಿ ರೂ.
ದೇವನಹಳ್ಳಿಯಲ್ಲಿ ಮಿಷನ್ ಒಲಂಪಿಕ್ಸ್ ನಿರ್ಮಾಣ
ಮಂಡ್ಯ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ 20 ಕೋಟಿ ರೂ.
ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ರಾಷ್ಟ್ರ ಒಂದು ಕಾರ್ಡ್ ಜಾರಿ
ನಮ್ಮ ಮೇಟ್ರೋ ಮತ್ತು ಬಿಎಂಟಿಸಿ ಎರಡರಲ್ಲೂ ಬಳಸಬಹುದಾದ ಕಾರ್ಡ್
ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹೊಸ ನಿಗಮ ಸ್ಥಾಪನೆ
ಕಲ್ಯಾಣ ಕರ್ನಾಟಕಕ್ಕೆ 1500 ಕೋಟಿ ಅನುದಾನ
ಓಕ್ಕಲಿಗರ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ
ಅಲ್ಪ ಸಂಖ್ಯಾತರಿಗೆ 1500 ಕೋಟಿ ರೂ. ಮೀಸಲು
19 ಜಿಲ್ಲೆಗಳಲ್ಲಿ 25 ಹಾಸಿಗೆಗಳ ಐಸಿಯು ನಿರ್ಮಾಣ
100 ತಾಲೂಕುಗಳಲ್ಲಿ 5 ಹಾಸಿಗೆಗಳ ಐಸಿಯು ನಿರ್ಮಾಣ ಮಾಡಲಾಗುವುದು
ಹೊಸದಾಗಿ 52 ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು
ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ
ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗೆ 5 ಕೋಟಿ ರೂ.\
ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 50 ಕೋಟಿ ರೂ
ಕೈಸ್ತ ಸಮುದಾಯಕ್ಕೆ 200 ಕೋಟಿ ರೂ.
ವೀರಶೈವ ಲಿಂಗಾಯತರಿಗೆ 500 ಕೋಟಿ ರೂ.
ST ಶಾಲೆಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ನಾಮಕರಣ
400 ಉರ್ದುಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭ
ಜೈನರ ಪವಿತ್ರ ಅಭಿವೃದ್ದಿಗೆ 50 ಕೋಟಿ
ಅಲ್ಪಸಂಖ್ಯಾತರ ಏಳಿಗೆಗೆ 1500 ಕೋಟಿ ರೂ
ಒಕ್ಕಲಿಗರ ಅಭಿವೃದ್ದಿಗೆ ನಿಗಮಕ್ಕೆ 50 ಕೋಟಿ ರೂ.
ಹಿಂದುಳಿದ ವರ್ಗಗಳ ನಿಗಮಕ್ಕೆ 500 ಕೋಟಿ ರೂ.
ಗ್ರಾಮಗಳಿಗೆ ಜಲಧಾರೆ ಯೋಜನೆ
ಜಲಧಾರೆ ಯೋಜನೆಗೆ 6201 ಕೋಟಿ ಮೀಸಲು
22 ಲಕ್ಷ ಮನೆಗಳಿಗೆ ನಳ ಸಂಪರ್ಕಕ್ಕೆ ಹಣ
ನಳ ಸಂಪರ್ಕಕ್ಕೆ ಕೋಟಿ ರೂ.ಮೀಸಲು
ಬೆಂಗಳೂರು ಉಪನಗರ ರೈಲು ಅಭಿವೃದ್ಧಿಗೆ 15,767 ಕೋಟಿ ರೂ.ಮೀಸಲು
6 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ
ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ. ಮೀಸಲು
ಗೊಬ್ಬರ ವಿತರಣೆಗೆ 10 ಕೋಟಿ ರೂ. ಹಂಚಿಕೆ
ಹೈಬ್ರಿಡ್ ಬೀಜ ರೈತರಿಗೆ ನೀಡಲು ಕ್ರಮ
ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರು
ರಾಜ್ಯ ಬಜೆಟ್ನ ಒಟ್ಟು ಗಾತ್ರ 2,46,207 ಕೋಟಿ
ಒಟ್ಟು ಜಮೆ 2.43,734 ಕೋಟಿ ರೂ.ಗಳು
ಒಟ್ಟು ರಾಜಸ್ವ 1.72,271 ಕೋಟಿ ರೂ.ಗಳು
ಒಟ್ಟು ಬಂಡವಾಳ 1.87,405 ಕೋಟಿ ರೂ
ಬೆಂಗಳೂರು ಸಮಗ್ರ ಒತ್ತು ʻಬೆಂಗಳೂರು ಮಿಷನ್ ೨೦೨೨ ಕಾರ್ಯಕ್ರಮʼ
• ರೂ. 7795 ಕೋಟಿ – ಬೆಂಗಳೂರು ನಗರ ಅಭಿವೃದ್ಧಿಗಾಗಿ ಅನುದಾನ
• ಉಪನಗರ ರೈಲು ಯೋಜನೆಗೆ 15,762 ಕೋಟಿ ರೂ. ಈ ಬಾರಿ ಬಜೆಟ್ ನಲ್ಲಿ 850 ಕೋಟಿ ರೂ.ಗಳ ಅನುದಾನ
• ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ಟರ್ಮಿನಲ್ ಕಾಮಗಾರಿಗೆ 4751 ಕೋಟಿ ರೂ.
• ಕೋರಮಂಗಲ ರಾಜಕಾಲುವೆ ನಿರ್ವಹಣೆ 169 ಕೋಟಿ ರೂ.ಗಳು
• ಕೆಸಿ ವ್ಯಾಲಿ ಪುನರುಜ್ಜೀವನ ಕಾಮಗಾರಿಗೆ 450 ಕೋಟಿ ರೂ.ಗಳು
• 33 ಕೋಟಿ – ಬಿಬಿಎಂಪಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ
ಆರೋಗ್ಯ ಕ್ಷೇತ್ರ
• 28 ಕೋಟಿ – ಬೆಂಗಳೂರಿನ ವಿಕ್ಟೋರಿಯಾ, ಜಯದೇವ ಆಸ್ಪತ್ರೆಯಲ್ಲಿ ಅಂಗಾಗ ಕಸಿಗೆ
• 20 ಕೋಟಿ – ಕೆ.ಸಿ.ಜನರಲ್ ಆಸ್ಪತ್ರೆ ವಿಸ್ತರಣೆಗಾಗಿ
• ಬೆಂಗಳೂರಿನ 57 ವಾರ್ಡ್ಗಳಲ್ಲಿ ಜನಾರೋಗ್ಯ ಕೇಂದ್ರದ ಸ್ಥಾಪನೆ
• ಶಿಕ್ಷಣ ಇಲಾಖೆ
• ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪಿಸಲಾಗಿದೆ. ಕಳೆದ ಬಜೆಟ್ ನಲ್ಲಿ 50 ಶಾಲೆಗಳಿಗೆ ತಲಾ 2 ಕೋಟಿ ನೀಡಲಾಗಿತ್ತು. ಈ ಬಾರಿ ಬಜೆಟ್ ಶಾಲೆಗಳ ಅಭಿವೃದ್ದಿ 100 ಕೋಟಿ ಮೀಸಲು
• ರೂ. 831 ಕೋಟಿ – ಕೃಷಿ ಸಂಚಯ ಯೋಜನೆಗಳಿಗಾಗಿ ಮೀಸಲು
• ರೂ. 500 ಕೋಟಿ – ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಯೋಜನೆ
• ರೂ. 10 ಕೋಟಿ – ನಾಥ ಪರಂಪರೆ ಪರಿಚಯಿಸಲು ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರದ ಸ್ಥಾಪನೆಗಾಗಿ
• ರೂ. 10 ಕೋಟಿ – ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ
• ರೂ. 2 ಕೋಟಿ – ಶಿವಕುಮಾರ್ ಸ್ವಾಮೀಜಿ ಗೌರವಾರ್ಥ ಸ್ಮೃತಿವನ ನಿರ್ಮಾಣಕ್ಕಾಗಿ
• ರೂ. 2 ಕೋಟಿ – ಉಡುಪಿಯ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿವನ ನಿರ್ಮಾಣಕ್ಕಾಗಿ
• ರೂ. 5 ಕೋಟಿ – ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ
• ರೂ. 50 ಕೋಟಿ – ಕಿತ್ತೂರು ರಾಣಿ ಚೆನ್ನಮ್ಮ ಪ್ರಾಧಿಕಾರಕ್ಕಾಗಿ
• ರೂ. 05 ಕೋಟಿ – ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳಗಿ ಅಭಿವೃದ್ಧಿಗಾಗಿ