ರೈತರ ಸಮಾಧಿ ಮೇಲೆ ಹೆದ್ದಾರಿ ನಿರ್ಮಾಣ ಅಭಿವೃದ್ಧಿ ಅಲ್ಲ ವಿನಾಶ; ರೈತ ಸಂಘ ಕಟು ಟೀಕೆ

ಕೋಲಾರ: ಭೂ ಸ್ವಾಧೀನ ಪರಿಹಾರ ವಿತರಿಸದೇ ಹೆದ್ದಾರಿ ಕಾಮಗಾರಿ ಮಾಡಬಾರದು. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿ ಇಡೀ ಯೋಜನಾ ವಿನ್ಯಾಸವನ್ನು ಸಾರ್ವಜನಿಕ ಅಹವಾಲಿಗೆ ಒಳಪಡಿಸಬೇಕು. ಪಿ ನಂಬರ್ ಆರ್‌ಟಿಸಿ (ಪೋಡಿ -ದುರಸ್ತು ಆಗದ ಜಮೀನು) ರೈತರಿಗೆ ಅಗತ್ಯ ದಾಖಲಾತಿ ನಿರ್ಮಿಸಿ ಪರಿಹಾರ ವಿತರಿಸಬೇಕು. ರೈತ ವಿರೋಧಿ ಭೂ ಸ್ವಾಧೀನ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿ ಕಛೇರಿ ಎದುರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಧರಣಿ ಉದ್ಘಾಟಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ರೈತರ ಸಮಾಧಿ ಮೇಲೆ ಹೆದ್ದಾರಿ ನಿರ್ಮಾಣ ಅಭಿವೃದ್ಧಿ ಅಲ್ಲ; ಇದು ವಿನಾಶ. ಕಾರ್ಪೊರೇಟ್ ಕಂಪನಿ ಕೇಂದ್ರಿತ ಭೂ ಸ್ವಾಧೀನ ನೀತಿ ರದ್ದುಪಡಿಸಿ ರೈತ ಕೇಂದ್ರಿತ ಭೂ ನೀತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಧರಣಿ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘ ಕೋಲಾರ ಜಿಲ್ಲಾ ಅಧ್ಯಕ್ಷ ಟಿ ಎಂ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಕಲಾವಿದ ಸ್ವಾಮಿ, ಪಿ ಶ್ರೀನಿವಾಸ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಗಾಂಧಿನಗರ ನಾರಾಯಣ ಸ್ವಾಮಿ ಮುಂತಾದವರು ವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *