ರೈತ ಪ್ರತಿಭಟನೆಗಳ ಮೇಲೆ ದಿಲ್ಲಿ ಪೋಲೀಸ್ ರ ಅಮಾನವೀಯ ಮುತ್ತಿಗೆ

ರೈತರನ್ನು ಉಪವಾಸ ಕೆಡವಿ, ಅವರ ಪ್ರತಿಭಟನೆಗಳನ್ನು ಚದುರಿಸುವ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸುವಂತೆ  ದಿಲ್ಲಿ ಪೋಲಿಸ್‍ ಗೆ ಕೇಂದ್ರ ಸರಕಾರ ನಿರ್ದೇಶನ ನೀಡಬೇಕು – ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹ.

ನವದೆಹಲಿ  ಫೆ 03: ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ದಿಲ್ಲಿಯ ಗಡಿಗಳಲ್ಲಿ ಒಂದು ಧೀರ ಹೋರಾಟದಲ್ಲಿ ತೊಡಗಿರುವ ರೈತರಿಗೆ ಪಕ್ಕದ ರಾಜ್ಯಗಳಿಂದ ಜನಗಳು ಕಳಿಸಿದ ನೀರು, ಆಹಾರ ಮತ್ತು ಇತರ ಅವಶ್ಯಕ ಸಾಮಗ್ರಿಗಳು ಅವರಿಗೆ ತಲುಪದಂತೆ ಮಾಡಲು ದಿಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಇನ್ನೂ ಹೊಲಸು ಸಂಗತಿಯೆಂದರೆ, ದಿಲ್ಲಿ ಸರಕಾರ ತನ್ನ ಅಡಿಯಲ್ಲಿರುವ ದಿಲ್ಲಿ ಜಲಮಂಡಳಿಯ ನೀರಿನ ಟ್ಯಾಂಕರುಗಳಿಂದ ರೈತರಿಗೆ ನೀರು ಪೂರೈಸುವುದನ್ನು ತಡೆಯಲಾಗಿದೆ. ಕೊವಿಡ್‍ ಮಹಾಸೋಂಕಿನ ಸಮಯದಲ್ಲಿ ಬಹಳ ಮಹತ್ವದ್ದಾಗಿರುವ ಶೌಚಾಲಯ ಮತ್ತಿತರ ನೈರ್ಮಲ್ಯದ ಸೌಕರ್ಯಗಳನ್ನು ದಿಲ್ಲಿ ಸರಕಾರ ಗುರು ತೇಗಬಹಾದ್ದೂರ್ ಸ್ಮಾರಕದಲ್ಲಿ ಒದಗಿಸುತ್ತಿದ್ದು ಅವನ್ನು ಬಲವಂತದಿಂದ ತೆರವು ಮಾಡಿಸಲಾಗಿದೆ. ದಿಲ್ಲಿಯ ಚುನಾಯಿತ ಸರಕಾರವನ್ನು ತನ್ನದೇ ಸೊತ್ತಿನಲ್ಲಿ ತನ್ನ ಕರ್ತವ್ಯಗಳನ್ನು ನಿಭಾಯಿಸದಂತೆ ತಡೆಯುವುದು ಕಾನೂನುಬಾಹಿರ ಕೃತ್ಯ ಎಂದು ಪೊಲಿಟ್‍ ಬ್ಯುರೊ ನೆನಪಿಸಿದೆ.

  ಚಿತ್ರಕೃಪೆ: ನ್ಯೂಸ್‍ ಲಾಂಡ್ರಿ

 

ಪ್ರತಿಭಟಿಸುತ್ತಿರುವ ರೈತರ ನೈಜವಾದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಕೇಂದ್ರ ಸರಕಾರ ಮೊಂಡುತನದಿಂದ ನಿರಾಕರಿಸುತ್ತಿರುವಾಗಲೇ,  ಕೇಂದ್ರ ಗೃಹ ಮಂತ್ರಾಲಯದ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ರೈತರನ್ನು ಉಪವಾಸ ಕೆಡವಲು, ಆ ಮೂಲಕ ಅವರ ಪ್ರತಿಭಟನೆಗಳನ್ನು ಛಿದ್ರಗೊಳಿಸಲು, ಚದುರಿಸಲು ಇಂತಹ ಅಮಾನವೀಯ ಕ್ರಮಗಳನ್ನು ಪ್ರಯತ್ನಿಸುತ್ತಿದೆ. ಆದರೆ ಕೇಂದ್ರ ಸರಕಾರದ ಇಂತಹ ಅಮಾನವೀಯ ವರ್ತನೆ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ರೈತ ಆಂದೋಲನ ಸಾರಿ ಹೇಳಿದೆ. ಹೆಚ್ಚೆಚ್ಚು ರೈತರು ಈ ಹೋರಾಟವನ್ನು ಸೇರಿಕೊಳ್ಳಲು ಬರುತ್ತಿದ್ದು, ಅವರ ಈ ಸಂಕಲ್ಪ ಮತ್ತು ದೃಢನಿರ್ಧಾರ ಇನ್ನಷ್ಟು ಬಲಗೊಂಡಿದೆ.

ಕೇಂದ್ರ ಸರಕಾರ ತನ್ನ ಇಂತಹ ಕರಾಳ ಅಮಾನವೀಯ ಕ್ರಮಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ. ದಿಲ್ಲಿ ಪೋಲೀಸ್‍ ನೀರು, ನೈರ್ಮಲ್ಯ ಸೌಕರ್ಯಗಳು ಮತ್ತು ಇತರ ಆವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ತಡೆಯಲು ಸಾಧ್ಯವಿಲ್ಲ. ಕೇಂದ್ರ ಸರಕಾರ ತಕ್ಷಣವೇ ಈ ಕ್ರಮಗಳನ್ನು ಹಿಂತೆಗೆದುಕೊಳ್ಳಲು ಮತ್ತು ಅಮಾನವೀಯ ಮುತ್ತಿಗೆಯನ್ನು ತೆರವು ಮಾಡಲು ದಿಲ್ಲಿ ಪೋಲೀಸ್‍ ಗೆ ನಿರ್ದೇಶನ ನೀಡಬೇಕು ಎಂದು ಪೊಲಿಟ್‍ ಬ್ಯುರೊ ಒತ್ತಾಯಿಸಿದೆ.

Donate Janashakthi Media

One thought on “ರೈತ ಪ್ರತಿಭಟನೆಗಳ ಮೇಲೆ ದಿಲ್ಲಿ ಪೋಲೀಸ್ ರ ಅಮಾನವೀಯ ಮುತ್ತಿಗೆ

  1. ಅವರು ದೇಶದ ಧ್ವಜ ಕ್ಕೆ ಅವಮಾನ ಮಾಡಿದ್ದಾರೆ ಅದರ ಬಗ್ಗೆ ಯಾಕೆ ಪ್ರಶ್ನೆ ಕೇಳುತಿಲ್ಲ?

Leave a Reply

Your email address will not be published. Required fields are marked *