ರೈತ ಮುಖಂಡ ಮಹದೇವ ಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ : ಕಾನೂನು ಕ್ರಮಕ್ಕೆ ಸಂಘಟನೆಗಳ ಆಗ್ರಹ

ಮಂಡ್ಯ :ಸಿಪಿಐಎಂ ಪಕ್ಷದ ಸದಸ್ಯರು, ಕರ್ನಾಟಕ ಪ್ರಾಂತ ರೈತ ಸಂಘದ ಮದ್ದೂರು ತಾಲ್ಲೂಕು ಮುಖಂಡರಾದ ಸಿಎಕೆರೆ ಹೋಬಳಿ ಮಣಿಗೆರೆ ಗ್ರಾಮದ ಮಹದೇವ ಸ್ವಾಮಿ ಬಿನ್ ಸ್ವಾಮಿ ರವರ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಶುಕ್ರವಾ ರಾತ್ರಿ 12 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಮನೆ ಕದ ಕುಟ್ಟಿದ್ದಾರೆ. ಯಾರೂ ನೆಂಟರು ಬಂದಿರಬೇಕು ಎಂದು ಮನೆ ಬಾಗಿಲು ತೆರೆದ ಇವರ ಮೇಲೆ ಸಾಯಿಸುವ ಉದ್ದೇಶದಿಂದಲೇ ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ. ಈಗ ನಿಮ್ಹಾನ್ಸ್ ಆಸ್ಪತ್ರೆ ಗೆ ಹೆಚ್ಚಿನ ಚಿಕಿತ್ಸೆ ಗೆ ಕರೆದುಕೊಂಡು ಹೋಗಿದ್ದಾರೆ ಎಂದು  ಮಹದೇವ ಸ್ವಾಮಿ ರವರ ಪತ್ನಿ ತಿಳಿಸಿದ್ದಾರೆ.

ಇವರ ಭಾಗಕ್ಕೆ ಹಿಂದೆ ಎಸಿ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಬಂದಿದ್ದ ಜಮೀನು ಉಳುಮೆ ಸಂಬಂಧ ವ್ಯಾಜ್ಯ ಉದ್ಬವಿಸಿ ,ಕರ್ನಾಟಕ ಹೈಕೋರ್ಟ್ ನಲ್ಲಿ ಇವರ ಭಾಗಕ್ಕೆ ಬಂದಿದ್ದ ಜಮೀನಿನ ಉಳುಮೆ ಹಕ್ಕಿಗೆ ಅಡ್ಡಿಪಡಿಸದಂತೆ ನ್ಯಾಯಲಯ ಸೂಚಿಸಿತ್ತು.

ಇದರಿಂದ ಕುಪಿತರಾದ ದುಷ್ಕರ್ಮಿಗಳು ಇವರನ್ನೇ ಮುಗಿಸುವ ಸಂಚು ನಡೆಸಿದ್ದಾರೆ. ಈ ಕೂಡಲೇ ಈ ಮಾರಣಾಂತಿಕ ಹಲ್ಲೆ ನಡೆಸಿ ಗ್ರಾಮದಲ್ಲಿ ಭಯ ಭೀತಿ ಸೃಷ್ಟಿಸಿರುವ ಹಲ್ಲೇಕೋರರನ್ನು ಹಾಗೂ ಈ ಚಿತಾವಣೆಯಲ್ಲಿ ಭಾಗಿಯಾದ ಎಲ್ಲಾ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮದ್ದೂರು ತಾಲ್ಲೂಕು ಸಮಿತಿ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *