ರೈತ ಸಮುದಾಯಕ್ಕೆ ದ್ರೋಹ ಎಸಗಿದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ – ರೈತ-ಕಾರ್ಮಿಕರ ಪಂಚಾಯತ್ ನಿರ್ಣಯ

ಚಿತ್ರದುರ್ಗ : ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹಾಗೂ ಜೆಸಿಟಿಯು ಜಂಟಿಯಾಗಿ ನವದೆಹಲಿಯಲ್ಲಿ ಮಾರ್ಚ್ 14,2024 ರಂದು ಸಂಘಟಿಸುತ್ತಿರುವ ಅಖಿಲ ಭಾರತ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನ ಪೂರ್ವ ತಯಾರಿಯಾಗಿ  ಚಿತ್ರದುರ್ಗ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ರಾಜ್ಯ ಮಟ್ಟದ ರೈತ-ಕಾರ್ಮಿಕರ ಪಂಚಾಯತ್ ನಡೆಯಿತು. ರೈತ

ಮೋದಿ ಸರ್ಕಾರವು ದೆಹಲಿ ಐತಿಹಾಸಿಕ ರೈತ ಚಳವಳಿಯ ಲಿಖಿತ ಭರವಸೆಗಳನ್ನು ಈಡೇರಿಸದೇ ರೈತ ಸಮುದಾಯಕ್ಕೆ ದ್ರೋಹ ಎಸಗಿದೆ. ಈ ದ್ರೂಹವನ್ನು ಪ್ರತಿಭಟಿಸಿ ದೆಹಲಿ ಚಲೋ ನಡೆಸುತ್ತಿರುವ ರೈತರ ಮೇಲೆ ಶತೃ ಸೈನ್ಯದ ರೀತಿ ಡ್ರೋಣ್ ಬಳಸಿ ಅಶ್ರುವಾಯು ಶೆಲ್ ಗಳನ್ನು ಸಿಡಿಸಲಾಗುತ್ತಿದೆ. ಕೂಡಲೇ ರೈತರ ಮೇಲೆ ದೌರ್ಜನ್ಯ ನಿಲ್ಲಿಸಿ ,ಮಾತುಕತೆ ಮೂಲಕ ಪರಿಹಾರ ಕಾಣಬೇಕು ಎಂದು ಆಗ್ರಹಿಸಿದ ನಾಯಕರು,  ಮಾರ್ಚ್ 14,2024 ರ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನಲ್ಲಿ ರಾಜ್ಯದಿಂದ ಕನಿಷ್ಠ ಒಂದು ಸಾವಿರ ರೈತ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ, ಹೆಚ್ ಆರ್ ಬಸವರಾಜಪ್ಪ,  ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜನಾಂದೋಲನ ಮಹಾ ಮೈತ್ರಿಯ  ಎಸ್ ಆರ್ ಹಿರೇಮಠ್, ಎಐಸಿಸಿಟಿಯುನ  ಪಿಆರ್ ಎಸ್ ಮಣಿ, ಪಿಪಿ ಅಪ್ಪಣ್ಣ , ಕರ್ನಾಟಕ ಜನಶಕ್ತಿ ಸಂಘಟನೆಯ ನೂರ್ ಶ್ರೀಧರ್ , ಕುಮಾರ್ ಸಮತಳ , ಚಿತ್ರದುರ್ಗ ಜಿಲ್ಲೆಯ ಸಿಐಟಿಯು ಮುಖಂಡರುಗಳಾದ ನಿಂಗಮ್ಮ, ತಿಪ್ಪೇಸ್ವಾಮಿ, ಗೌಸಾಪೀರ್ ,ಕರ್ನಾಟಕ ಪ್ರಾಂತ ರೈತ ಸಂಘದ ಮಲಿಯಪ್ಪ, ಶ್ರೀನಿವಾಸ್ ಸೇರಿದಂತೆ ಸುಮಾರು ಐದು ನೂರಕ್ಕೂ ಹೆಚ್ಚು ವಿವಿಧ ರೈತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ರೈತ

ರೈತ ಕಾರ್ಮಿಕರ ಪಂಚಾಯತ್‌ನಲ್ಲಿ ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಲಾಯಿತು

1. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ, ಕಾರ್ಮಿಕರ ಹಿತ ಕಾಯುವ ಸಾಲು ಸಾಲು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವು ದೇಶದ ದುಡಿಯುವ ಜನತೆಗೆ ಮಹಾದ್ರೋವೆಸಗಿದೆ. ರೈತರ ಮತ್ತು ಕಾರ್ಮಿಕರ ಹಿತವನ್ನು ಕಾರ್ಪೋರೇಟ್ ಶಕ್ತಿಗಳಿಗ ಬಲಿಕೊಟ್ಟಿದೆ. ರೈತರ ಭೂಮಿ ಮತ್ತು ಬೆಳೆ ಎರಡನ್ನೂ ಕಂಪನಿಗಳ ಪಾಲಾಗಿಸಲು ಭೂ ಕಾಯ್ದೆಯಲ್ಲಿ, ಎಪಿಎಂಸಿ ಕಾಯ್ದೆಯಲ್ಲಿ, ಗುತ್ತಿಗೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತಂದಿದೆ. ವಿಮೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಟ್ಟಿದೆ. ವಿದ್ಯುತ್ ಅನ್ನು ಖಾಸಗೀಕರಿಸಲು ಹೊರಟಿದೆ. ಸಬ್ಸಿಡಿಗಳನ್ನು ಕಡಿತಗೊಳಿಸುತ್ತಿದೆ. ಕಾರ್ಮಿಕರ ಬಹುತೇಕ ಹಕ್ಕುಗಳನ್ನು ಅಮಾನ್ಯಗೊಳಿಸಿದೆ. ನಾಲ್ಕು ಕೋಡ್ ಹೆಸರಿನಲ್ಲಿ ಕಾರ್ಮಿಕರ ಮರಣಶಾಸನ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರದ ಈ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಈ ರೈತ – ಕಾರ್ಮಿಕ ಪಂಚಾಯತ್ ಉಗ್ರವಾಗಿ ಖಂಡಿಸುತ್ತದೆ.

2. ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈ ಕೂಡಲೇ ಜಾರಿ ಮಾಡಬೇಕೆಂದು ಈ ಪಂಚಾಯತ್ ಒತ್ತಾಯಿಸುತ್ತದೆ. ಸಿಂಗು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಜಾಗ, ಅವರ ಕುಟುಂಬಕ್ಕೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಹೋರಾಟ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಎಲ್ಲಾ ಪೋಲಿಸ್ ಕೇಸ್‌ಗಳನ್ನು ವಾಪಸ್ಸು ಪಡೆಯಬೇಕು. ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಮೇಲೆ ಸರ್ಕಾರ ನಡೆಸುತ್ತಿರುವ ದಮನಕಾಂಡವನ್ನು ಪಂಚಾಯತ್ ಉಗ್ರವಾಗಿ ಖಂಡಿಸುತ್ತದೆ.

3. ಇಡೀ ದೇಶದ ರೈತ – ಕಾರ್ಮಿಕರು ಒಗ್ಗೂಡಿ ಹೋರಾಟ ನಡೆಸಲು ಅಖಿಲ ಭಾರತ ಮಟ್ಟದಲ್ಲಿ ಆಗಿರುವ ತೀರ್ಮಾನ ಐತಿಹಾಸಿಕವಾದದ್ದಾಗಿದೆ. ಹೋರಾಟದ ಮುಂದಿನ ನಡೆಗಳನ್ನು ನಿರ್ಣಯಿಸಲು ಮಾರ್ಚ 14 ರಂದು ದಹಲಿಯ ರಾಮಲೀಲ ಮೈದಾನದಲ್ಲಿ ಬೃಹತ್ ರೈತ – ಕಾರ್ಮಿಕ ಪಂಚಾಯತ್ ಸಮಾವೇಶಗೊಳ್ಳುತ್ತಿದೆ. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಿಂದ 1500 ಜನ ಪ್ರತಿನಿಧಿಗಳು ಈ ಅಖಿಲ ಭಾರತ ಪಂಚಾಯತ್ ನಲ್ಲಿ ಹೋಗಿ ಭಾಗವಹಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡುತ್ತೇವೆ.

4. ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರ ಅ2+50% ಪ್ರಕಾರ ಕನಿಷ್ಟ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್‌ಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರು ಬಳಸುವ ಟ್ರಾಕ್ಟರ್, ಟಿಲ್ಲರ್, ಹಾರ್ವೆಸ್ಟರ್ ಮುಂತಾದ ಯಂತ್ರೋಪಕರಣಗಳ ಮೇಲೆ ನ್ಯಾಯಸಮ್ಮತ ಎಂ ಆರ್ ಪಿ ನಿಗದಿಯಾಗಬೇಕು ಮತ್ತು ಬಹಿರಂಗವಾಗಿ ಘೋಷಣೆಯಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು. ರೈತ

ಇದನ್ನೂ ಓದಿರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

5. ಕಾರ್ಪೊರೇಟ್ ಪರವಾದ ಪಿಎಂ ಫಸಲ್ ಭೀಮಾ ಯೋಜನೆಯನ್ನು ರದ್ದುಪಡಿಸಿ, ಎಲ್ಲಾ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆ ಜಾರಿಮಾಡಬೇಕು

6. ರಾಷ್ಟ್ರೀಯ ಕನಿಷ್ಟ ವೇತನ ಮಾಸಿಕ 26,000 ರೂ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಎಫ್‌ಟಿಇ ಪದ್ಧತಿಯನ್ನು ರದ್ದುಪಡಿಸಬೇಕು.

7. ಎಲ್ಲಾ ರೀತಿಯ ಅಸಂಘಟಿತ ವಲಯದ ಕಾರ್ಮಿಕರನ್ನು ನೊಂದಾಯಿಸಿ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಸುರಕ್ಷತೆಯನ್ನು ಒದಗಿಸಬೇಕು. ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಾಯಿಸಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಯೋಜನೆ, ತಾಯ್ತನದ ಆರೈಕೆ ಸೌಲಭ್ಯ, ಜೀವ ಹಾಗೂ ಅಂಗವೈಕಲ್ಯ ವಿಮೆ, ಮತ್ತಿತರ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕು.

8. ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್‌)ನ್ನು ರದ್ದು ಮಾಡಿ, ಹಳೇ ಪಿಂಚಣಿ ಯೋಜನೆ(ಒಪಿಎಸ್‌) ಜಾರಿ ಮಾಡಬೇಕು.

9. ಬಗರ್ ಹುಕುಂ ರೈತರಿಗೆ ಮತ್ತು ಅರಣ್ಯ ವಾಸಿಗಳ ಹಕ್ಕನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಗೌರವಿಸಬೇಕು. ರೈತರು ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿ ರೈತ ಮಕ್ಕಳಿಗೆ ದಕ್ಕಬೇಕು. ಬಡಜನರನ್ನು ಅಲೆಸುವುದನ್ನು, ಹಿಂಸಿಸುವುದನ್ನು, ಅವರ ಹಕ್ಕನ್ನು ಕೊಡದೆ ಸತಾಯಿಸುವುದನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ಈ ಪಂಚಾಯತ್ತ ಬಲವಾಗಿ ಒತ್ತಾಯಿಸುತ್ತದೆ.

10. ಭೂ ಸ್ವಾಧೀನ ಕಾಯ್ದೆ ರದ್ದಾಗಬೇಕು. ರೈತರ ಭೂಮಿಗೆ ರೈತರೇ ಮಾಲೀಕರಾಗಿ ಉಳಿಯಬೇಕು. ರೈತರ ಜೊತೆ ಇಂತಿಷ್ಟು ವಾರ್ಷಿಕ ಆದಾಯ ನೀಡುವ ಒಡಂಬಡಿಕೆ ಮಾತ್ರವಾಗಬೇಕು. ಭೂ ಸ್ವಾಧೀನಕ್ಕೆ ಒಳಗಾದ ಭೂಮಿ ಮೂರು ವರ್ಷದಲ್ಲಿ ಆ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಅದನ್ನು ಹಿಂದಿರುಗಿಸಬೇಕು.

11. ಮೂರು ದಶಕಗಳ ಕಾಲ ಕಾಡಿಸಿ, ಬೇಡಿಸಿ ಸಮ್ಮತಿ ಪಡೆದ ಭದ್ರ ಮೇಲ್ದಂಡೆ ಯೋಜನೆ ಬಯಲುಸೀಮೆಯ ಜನರಲ್ಲಿ ಆಶಾಕಿರಣ ಮೂಡಿಸಿದೆ. ಆದರೆ ಅದರ ಕಾಮಗಾರಿಯೂ ಪೂರ್ಣಗೊಳ್ಳದೆ ನಿಂತಿದೆ. ಮೋದಿ ಸರ್ಕಾರವು ತನ್ನ ಬಜೆಟ್‌ನಲ್ಲಿ ಘೋಷಿಸಿದ್ದ 5800 ಕೋಟಿ ಹಣವನ್ನು ಬಿಡುಗಡೆ ಮಾಡದೆ ವಂಚಿಸಿದೆ. ರಾಜ್ಯಕ್ಕೆ ಆಗುತ್ತಿರುವ ಈ ವಂಚನೆ ನಿಲ್ಲಬೇಕು, ಕೂಡಲೇ ಘೋಷಿತ ಹಣ ಬಿಡುಗಡೆ ಆಗಬೇಕು ಎಂದು ಈ ಪಂಚಾಯತ್ ಒತ್ತಾಯಿಸುತ್ತದೆ.

12. ರಾಜ್ಯ ಬರ್ಬರವಾದ ಬರಕ್ಕೆ ತುತ್ತಾಗಿದೆ. ರೈತರ ನೆರವಿಗೆ ಬರಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಆದರೆ ಕರ್ನಾಟಕಕ್ಕೆ ಆಪತ್ಕಾಲೀನ ನಿಧಿಯಿಂದ ಹಣ ಬಿಡುಗಡೆ ಮಾಡಲು ಕೇಂದ್ರ ನಿರಾಕರಿಸುತ್ತಿದೆ. ರೈತರ ಬವಣೆಗೆ ನೆರವಾಗಲು ನಿರಾಕರಿಸುತ್ತಿದೆ. ಕೇಂದ್ರದ ಈ ಜೀವವಿರೋಧಿ ಧೋರಣೆಯನ್ನು ಈ ಪಂಚಾಯತ್ ತೀವ್ರವಾಗಿ ಖಂಡಿಸುತ್ತದೆ. ಆಪತ್ಕಾಲೀನ ನಿಧಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತದೆ. ಅತಿವೃಷ್ಟಿ, ಅನಾವೃಷ್ಟಿಯಲ್ಲಿ ನಷ್ಟಕ್ಕೆ ಗುರಿಯಾದವರಿಗೆ ಕೂಡಲೇ ಪರಿಹಾರ ದಕ್ಕುವಂತಾಗಬೇಕು. ರೈತ

13. ಮಲೆನಾಡುವಾಸಿಗಳು ಅನೇಕ ಬಗೆಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಅರಣ್ಯ ಇಲಾಖೆಯ ಕಿರುಕುಳ ಹೆಚ್ಚಾಗಿದೆ. ಪರಿಹಾರ ಕಾಣದ ಬೆಳೆ ರೋಗಗಳು ಹಬ್ಬುತ್ತಿವೆ. ಸಾಲದೆಂಬಂತೆ ಇಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಏಲಕ್ಕಿ ಮುಂತಾದವುಗಳ ಬೆಲೆ ಕುಸಿಯುತ್ತಿದೆ. ಅಂತರಾಷ್ಟಿçÃಯ ಮಾರುಕಟ್ಟೆಯಿಂದ ಈ ಎಲ್ಲಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಈ ಕುಸಿತಕ್ಕೆ ಕಾರಣವಾಗಿದೆ. Wಖಿಔ ಒಪ್ಪಂದದಿAದ ಭಾರತದ ಕೃಷಿ ಹೊರಬರಬೇಕು ಎಂದು ಒತ್ತಾಯಿಸುತ್ತೇವೆ.

14. ಕೊಬರಿ ಬೆಳೆಗಾರರು ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ. ದೀರ್ಘಕಾಲೀನ ಬೆಳೆಯನ್ನು ಬೆಳೆದಿರುವ ಕೊಬರಿ ರೈತರ ರಕ್ಷಣೆಗೆ ಸರ್ಕಾರ ಧಾವಿಸಬೇಕು. ಕೊಬರಿಗೆ ನ್ಯಾಯಸಮ್ಮತ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಎಂದು ಈ ಪಂಚಾಯತ್ ಒತ್ತಾಯಿಸುತ್ತದೆ.

15. ಸಾಲ ವಸೂಲಿಗಾಗಿ ಬ್ಯಾಂಕುಗಳ ಕಿರುಕುಳ ಹೆಚ್ಚಾಗಿದೆ. ಅಕ್ರಮ ರೀತಿಯಲ್ಲಿ ಬಡ್ಡಿಗಳನ್ನು ಹಾಕಲಾಗುತ್ತಿದೆ. ಅಸಲಿಗಿಂತ ಹತ್ತು ಪಟ್ಟು ಬಡ್ಡಿ ಸೇರಿಸಿ ವಸೂಲಿಗಾಗಿ ಪೀಡಿಸಲಾಗುತ್ತಿದೆ. ಈ ಕಿರುಕುಳ ನಿಲ್ಲಿಸಬೇಕು ಮತ್ತು ಎಲ್ಲಾ ರೈತರ ಸಮಗ್ರ ಸಾಲಗಳನ್ನು ಮನ್ನಾ ಮಾಡುವ ದಿಟ್ಟ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಈ ಪಂಚಾಯತ್ ಒತ್ತಾಯಿಸುತ್ತದೆ.

16. ಜಿ.ಎಸ್.ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜನಸಾಮಾನ್ಯರ ಹಾಗೂ ರಾಜ್ಯದ ಹಣವನ್ನು ಲೂಟಿ ಮಾಡುತ್ತಿದೆ. ಮಾತ್ರವಲ್ಲ ಕರ್ನಾಟಕದಿಂದ ಸಂಗ್ರವಾದ ಜಿ ಎಸ್ ಟಿಯಲ್ಲಿನ ಕರ್ನಾಟಕದ ಪಾಲನ್ನೂ ಹಿಂದುರುಗಿಸದೆ ರಾಜ್ಯದ ಜನರನ್ನು ಪೀಡಿಸುತ್ತಿದೆ. ಕೇಂದ್ರ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ಈ ಪಂಚಾಯತ್ ಖಂಡಿಸುತ್ತದೆ ಮತ್ತು ಜಿ ಎಸ್ ಟಿ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ.

17. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಖಾಲಿಯಿರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗಿ ಯುವಜನತೆಗೆ ಕೆಲಸ ಒದಗಿಸಲು, ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೆಲಸ ದಿನಗಳನ್ನು 200 ದಿನಕ್ಕೆ ವಿಸ್ತರಿಸಿ, ರೂ.600 ಕೂಲಿ ನಿಗದಿ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಭಾಗಕ್ಕೂ ವಿಸ್ತರಿಸಬೇಕು.

18. ವಿದ್ಯುತ್ ರಂಗವನ್ನು ಖಾಸಗೀಕರಣಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ಸಂಸತ್ತಿನಿAದ ವಾಪಸ್ಸು ಪಡೆಯಬೇಕು. ಯಾವುದೇ ಕಾರಣಕ್ಕೂ ಪ್ರೀ ಪೇಯ್ಡ್ ಮೀಟರ್ ಅಳವಡಿಸಬಾರದು.

19. ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ ರದ್ದಾಗಬೇಕು.

20. ಬೆಲೆ ಏರಿಕೆ ನಿಯಂತ್ರಿಸಬೇಕು. ಅಗತ್ಯ ವಸ್ತುಗಳಾದ ಆಹಾರ, ಔಷಧಿ, ನೇಕಾರಿಕೆ, ಕೃಷಿ ಯಂತ್ರೋಪಕರಣಗಳ ಮೇಲಿನ ಜಿ.ಎಸ್ ರದ್ದುಪಡಿಸಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು.

21. ಕೋವಿಡ್ ನೆಪದಲ್ಲಿ ಹಿರಿಯ ನಾಗರೀಕರು, ಮಹಿಳೆಯರು, ಅಂಗವಿಕಲರು, ಕ್ರೀಡಾಪಟುಗಳಿಗೆ ರದ್ದುಪಡಿಸಿದ್ದ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ಪುನರ್ ಸ್ಥಾಪಿಸಬೇಕು. ರೈಲ್ವೆ ಖಾಸಗೀಕರಣ ನಿಲ್ಲಿಸಬೇಕು.

22. ಆಹಾರ ಭದ್ರತೆ, ಪೋಷಕಾಂಶ ಸುರಕ್ಷತೆಯನ್ನು ಖಾತರಿಪಡಿಸಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು. ಜೀವನಾವಶ್ಯಕ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ವಿತರಿಸಬೇಕು. ನೇರ ನಗದು ವರ್ಗಾವಣೆ ರದ್ದುಪಡಿಸಬೇಕು.

23. ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ನೀರು ಮತ್ತು ನೈರ್ಮಲ್ಯವನ್ನು ಮೂಲಭೂತ ಹಕ್ಕಾಗಿ ಒದಗಿಸಬೇಕು. ಜನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2020 ರದ್ದಾಗಬೇಕು.

24. ಅರಣ್ಯ ಹಕ್ಕು ಕಾಯ್ದೆ-2006ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಪೊರೇಟ್ ಪರವಾದ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ-2023 ಹಾಗೂ ಜೀವ ವೈವಿಧ್ಯ ಕಾಯ್ದೆಯನ್ನು ರದ್ದುಪಡಿಸಬೇಕು.

25. ಖನಿಜ ಹಾಗೂ ಲೋಹ ಗಣಿಗಾರಿಕೆ ಕಾಯ್ದೆಗೆ ತಿದ್ದುಪಡಿ ಮಾಡಿ ಕಲ್ಲಿದ್ದಲು ಸೇರಿದಂತೆ ಗಣಿ ಕಂಪನಿಗಳ ಲಾಭದ ಶೇ.50ರಷ್ಟನ್ನು ಆದಿವಾಸಿಗಳು, ರೈತರು, ಮುಂತಾದ ಸ್ಥಳೀಯ ನಿವಾಸಿಗಳ ಅಭಿವೃದ್ಧಿಗೆ ಬಳಸಬೇಕು.

26. ಗೃಹ ಆಧಾರಿತ ಕಾರ್ಮಿಕರಿಗೆ ಐಎಲ್‌ಓ ಸಮ್ಮೇಳನ ಶಿಫಾರಸ್ಸುಗಳ ಖಾತ್ರಿಗೆ ಸೂಕ್ತ ಕಾನೂನು ರಚಿಸಬೇಕು. ಅಂತರ್ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ) ಕಾಯ್ದೆ 1979ನ್ನು ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಬಲಪಡಿಸಬೇಕು.

27. ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸಬೇಕು. ಅದರ ನಿರ್ಣಯಗಳನ್ನು ಸರ್ಕಾರಗಳು ಜಾರಿ ಮಾಡಬೇಕು.

28. ರೈತ ಮಹಿಳೆಯರನ್ನು ರೈತರು ಎಂದು ಪರಿಗಣಿಸಿ ರೈತರಿಗೆ ಸಿಗುವ ಎಲ್ಲ ಸೌಲಭ್ಯ ಸಿಗುವಂತಾಗಬೇಕು ಮತ್ತು Sಊಉ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿAದ ಕೃಷಿಗಾಗಿ ಸಾಲ ಪಡೆದ ಮಹಿಳೆಯರ ಸಾಲ ಮನ್ನಾ ಮಾಡುವಂತಾಗಬೇಕು.

29. ಮಹಿಳೆ, ದಲಿತ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಜಾತಿ, ಧರ್ಮ, ಅಂತಸ್ತುಗಳ ಹೆಸರಿನಲ್ಲಿ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆ, ಹಿಂಸೆ ತಡೆಗಟ್ಟಲು ಕಾನೂನು ಮತ್ತು ತ್ವರಿತ ವಿಶೇಷ ಮಹಿಳಾ ನ್ಯಾಯಲಗಳನ್ನು ಸ್ಥಾಪಿಸಬೇಕು.

30. ಸಂವಿಧಾನದ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಭಾಷೆ, ವೈವಿಧ್ಯತೆ, ಸಾಂಸ್ಕೃತಿಕತೆ, ಸಮಾನತೆ, ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ ಮುಂತಾದವುಗಳ ಮೇಲಿನ ಆಕ್ರಮಣವನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು.

ವಿಡಿಯೋ ನೋಡಿ“ಮೋದಿ ಹಟಾವೋ, ದೇಶ್ ಬಚಾವೋ” – ರೈತ – ಕಾರ್ಮಿಕ – ದಲಿತರ ಒಕ್ಕೊರಲ ದನಿ

 

Donate Janashakthi Media

Leave a Reply

Your email address will not be published. Required fields are marked *