ಬೆಂಗಳೂರು: ಸತತ ಎರಡನೇ ದಿನವೂ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ನಗರದಲ್ಲಿ ಮೇ 13 ಮಂಗಳವಾರ ಮಧ್ಯಾಹ್ನ ಹಲವಾರು ಪ್ರದೇಶಗಳಲ್ಲಿ ಜೋರು ಮಳೆ ಸುರಿಯುತ್ತಿದೆ. ರಾಜ್ಯಾ
ಸದ್ಯ ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗುತ್ತಿದೆ. ಒಂದು ವಾರ ರಾಜ್ಯಾದ್ಯಂತ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬೆನ್ನಲ್ಲೆ ಎರಡು ವಾರದ ಬಳಿಕ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿತ್ತು. ಕೆಲ ಪ್ರದೇಶಗಳಲ್ಲಿ ರಾತ್ರಿ ಪೂರ್ತಿ ಮಳೆಯಾಗಿತ್ತು. ಇನ್ನು ಮಂಗಳವಾರವು ಮಳೆ ಮುಂದುವರೆದಿದೆ.
ಇದನ್ನೂ ಓದಿ: ಮಾತುಗಾರಿಕೆ ಸಂಸತ್ತಿನಲ್ಲಿ ವಿಷಯವಾರು ಚರ್ಚೆಗೆ ಬದಲಿಯಾಗುವುದು ಸಾಧ್ಯವಿಲ್ಲ- ಎಂ.ಎ.ಬೇಬಿ
ಮಂಗಳವಾರ ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಿತ್ತು. 10 ಗಂಟೆಯಾಗುವ ವೇಳೆ ತಾಪಮಾನ ಮತಷ್ಟು ಹೆಚ್ಚಾಗಿ ಬಿಸಿಲು ಬೇಗೆಯಿಂದ ಜನ ಸುಸ್ತಾಗಿದ್ದರು. ಮಧ್ಯಾಹ್ನ 3 ಗಂಟೆಯಾಗುವಷ್ಟರಲ್ಲಿ ಕಾರ್ಮೋಡ ಕವಿದು, ಸಿಡಿಲು ಗುಡುಗಿನ ಅಬ್ಬರದೊಂದಿಗೆ ಒಮ್ಮೆಗೆ ಮಳೆ ಆರಂಭವಾಯಿತು.
ಬೆಂಗಳೂರಿನ ಯಾವೆಲ್ಲಾ ಪ್ರದೇಶಗಳಲ್ಲಿ ಮಳೆ?
ಬೆಂಗಳೂರಿನ ಕೇಂದ್ರ ಭಾಗಗಳಾದ ಮೆಜೆಸ್ಟಿಕ್, ಗಾಂಧಿ ನಗರ, ಎಂಜಿ ರಸ್ತೆ, ಹಲಸೂರು, ಇಂದಿರಾನಗರ, ರಾಜಾಜಿನಗರ, ಯಶವಂತಪುರ, ಬನಶಂಕರಿ, ಜಯನಗರ, ಬಸವನಗುಡಿ, ಜೆಪಿ ನಗರ, ಕನಕಪುರ ರಸ್ತೆ, ಸಾರಕ್ಕಿ, ವಿಜಯನಗರ, ಚಂದ್ರಾ ಲೇಔಟ್, ಮಾಗಡಿ ರಸ್ತೆ, ದೀಪಾಂಜಲಿ ನಗರ, ಮೈಸೂರು ರಧಿಸ್ತೆ, ನಾಗರಬಾವಿ, ಮೂಡಲಪಾಳ್ಯ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ರಾಜರಾಜೇಶ್ವರಿನಗರ ಸೇರಿದಂತೆ ರಾಜಧಾನಿಯ ಹಲವೆಡೆ ಮಳೆಯಾಗಿದೆ.
ಇನ್ನೂ ಒಂದು ವಾರ ಬೆಂಗಳೂರಿನಲ್ಲಿ ಮಳೆ
ರಾಜಧಾನಿಯಲ್ಲಿಇನ್ನೂ ಒಂದು ವಾರ ಮಳೆಯಾಗಲಿದ್ದು, ಮೇ 14 ಮತ್ತು 16ರಂದು ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ನೀಡಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ 158| ಹಲವು ಸಿನಿಮಾಗಳ ಪಕ್ಷಿನೋಟ |ಮ. ಶ್ರೀ. ಮುರಳಿಕೃಷ್ಣ Janashakthi Media