ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಡಿ ಒಟ್ಟು 32,438 ನೇಮಕಾತಿ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದ್ದೂ, ದೇಶಾದ್ಯಂತ 1.08 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಅರ್ಜಿಗಳು ಮುಂಬೈ ವಲಯದಿಂದ ಬಂದಿವೆ. ಮುಂಬೈನಿಂದ ಒಟ್ಟು 15,59,100 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರೈಲ್ವೆಯ ವಿವಿಧ ಇಲಾಖೆಗಳಲ್ಲಿ ಲೆವೆಲ್-1 ಹುದ್ದೆಗಳಿಗೆ ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ.
ಇದರಲ್ಲಿ ಟ್ರ್ಯಾಕ್ ಮೇಂಟೇನರ್ ಗ್ರೇಡ್-IV, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು ಸೇರಿವೆ. ಈ ಹುದ್ದೆಗಳು ವಿದ್ಯುತ್, ಯಾಂತ್ರಿಕ ಮತ್ತು ಸಿಗ್ನಲ್ ಮತ್ತು ದೂರಸಂಪರ್ಕ ವಿಭಾಗಗಳಲ್ಲಿವೆ.
ಇದನ್ನೂ ಓದಿ: ಇರಾನ್-ಯು.ಎಸ್ ಮಾತುಕತೆ : ಅಣು ಒಪ್ಪಂದಕ್ಕೆ ಹಾದಿಯೋ, ಯುದ್ಧಕ್ಕೆ ಮುನ್ನುಡಿಯೋ?
ದೇಶಾದ್ಯಂತ 1.08 ಕೋಟಿ ಅರ್ಜಿಗಳು:
ರೈಲ್ವೆ ವಲಯದ ಪ್ರಕಾರ , ಚಂಡೀಗಢದಿಂದ 11.60 ಲಕ್ಷ, ಚೆನ್ನೈನಿಂದ 11.12 ಲಕ್ಷ, ಸಿಕಂದರಾಬಾದ್‌ನಿಂದ 9.60 ಲಕ್ಷ, ಪ್ರಯಾಗ್‌ರಾಜ್‌ನಿಂದ 8.61 ಲಕ್ಷ ಮತ್ತು ಕೋಲ್ಕತ್ತಾದಿಂದ 7.93 ಲಕ್ಷ ಅರ್ಜಿಗಳು ಬಂದಿವೆ. ಒಟ್ಟು 1,08,22,423 ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟೊಂದು ಅರ್ಜಿಗಳು ಬಂದ ನಂತರ, ಯುವಕರಲ್ಲಿ ಸರ್ಕಾರಿ ಉದ್ಯೋಗಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿವೆ.
ರಾಷ್ಟ್ರೀಯ ಅಂಕಿಅಂಶ ಕಚೇರಿಯ (NSO) ಇತ್ತೀಚಿನ ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ 2024 ರ ತ್ರೈಮಾಸಿಕದಲ್ಲಿ ನಗರ ನಿರುದ್ಯೋಗ ದರವು ಶೇ. 6.4 ಕ್ಕೆ ಇಳಿದಿದೆ, ಇದು ಸಕಾರಾತ್ಮಕ ಸಂಕೇತವಾಗಿದೆ. ಮತ್ತೊಂದೆಡೆ, ಭಾರತ ಉದ್ಯೋಗ ವರದಿ 2024 ಸಹ ಉದ್ಯೋಗದ ಗುಣಮಟ್ಟ ಮತ್ತು ಸ್ಥಿರತೆಯು ಇನ್ನೂ ಕಳವಳಕಾರಿ ವಿಷಯವಾಗಿದೆ. ವಿಶೇಷವಾಗಿ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳ ಕೊರತೆಯಿದೆ.
ಸರ್ಕಾರ ಈಗ ಉದ್ಯೋಗ ಸಂಬಂಧಿತ ಡೇಟಾವನ್ನು ಹೆಚ್ಚು ಪಾರದರ್ಶಕಗೊಳಿಸುವತ್ತ ಕ್ರಮಗಳನ್ನು ತೆಗೆದುಕೊಂಡಿದೆ. ಮೇ 15 ರಿಂದ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಪ್ರತಿ ತಿಂಗಳು ನಿರುದ್ಯೋಗ ಡೇಟಾವನ್ನು ಬಿಡುಗಡೆ ಮಾಡುತ್ತದೆ. ಇವುಗಳನ್ನು ಮೊದಲು ಪ್ರತಿ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಇದು ನೀತಿಗಳನ್ನು ರೂಪಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ.
ಇದನ್ನೂ ನೋಡಿ: ವಚನಾನುಭವ 28| ಒಲಿದವರ ಕೊಲುವಡೆ ಮಸೆದ ಕೂರಲಗೇಕೆ? ಗಜೇಶ ಮಸಣಯ್ಯ Janashakthi Media