ಮಕ್ಕಳ ಕಷ್ಟಗಳನ್ನು ಬಿಡಿಸಿಡುವ “ರೈಲ್ವೆ ಚಿಲ್ಡ್ರನ್”

-ಎಚ್.ಆರ್. ನವೀನ್ ಕುಮಾರ್, ಹಾಸನ

ಬಡತನದಂತಹ ಸಾಮಾಜಿಕ ಹಿನ್ನೆಲೆಯಿರುವ ಕುಟುಂಬಗಳಲ್ಲಿನ ಸಮಸ್ಯೆಗಳು, ಮೌಡ್ಯ, ಶಿಕ್ಷಣದ ಕೊರತೆಯಿಂದಾಗಿ ಮಕ್ಕಳ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಅವರು ಮನೆ ಬಿಟ್ಟು ನಗರಗಳಿಗೆ ಹೋಗಿ, ಅಲ್ಲಿಯ ಅಪಾಯಕಾರಿ ಶಕ್ತಿಗಳ ಕೈ ಸೇರಿ, ಅವರ ಶೋಷಣೆಗೆ ಗುರಿಯಾಗುವ ಅಪ್ರಾಪ್ತ ಮಕ್ಕಳ ಕಷ್ಟಗಳನ್ನು ಹಸಿಹಸಿಯಾಗಿ ಬಿಡಿಸಿಡುವ ಅತ್ಯುತ್ತಮ ಕಥಾ ಹಂದರವಿರುವ ಸಿನಿಮಾ “ರೈಲ್ವೆ ಚಿಲ್ಡ್ರನ್”

ಇತ್ತೀಚೆಗೆ ಸಾಮಾಚಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ “ಹದಿನೇಳೆಂಟು” ಸಿನಿಮಾದ ನಿರ್ದೇಶಕರಾದ ಪೃಥ್ವಿ ಕೊಣನೂರು ಅವರೇ ರೈಲ್ವೆ ಚಿಲ್ಡ್ರನ್ ಸಿನಿಮಾದ ನಿರ್ದೇಶಕರು.

ಮಕ್ಕಳ ಮನಸ್ಸುಗಳನ್ನು ಅರಿಯಲು ಶಕ್ತರಾಗದ ಕಡು ಬಡತನದಲ್ಲಿರುವ ಪೋಷಕರು, ತಂದೆ ತಾಯಂದಿರ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದ ಮಕ್ಕಳು. ಇಂತಹ ಸಮಾಜದ ಉತ್ಪನ್ನಗಳಾಗಿ ಹಳ್ಳಿಗಳನ್ನು ತೊರೆದು ಪಟ್ಟಣ ಸೇರಿ‌. ಅಲ್ಲಿ ಹಸಿವನ್ನು ನೀಗಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಇಂತಹ ಅಸಹಾಯಕ ಮಕ್ಕಳನ್ನ ದುರ್ಬಳಕೆ ಮಾಡಿಕೊಂಡು ತಮ್ಮ ಲಾಭ ಹೆಚ್ಚಿಸಿಕೊಳ್ಳುವ ಕೆಲವು ದಂದೆಕೋರರ ಅಸಲಿ ಮುಖವನ್ನ ಅನಾವರಣ ಮಾಡುವ ಕೆಲಸವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ದೇಶಕರು ನಿರ್ವಹಿಸಿದ್ದಾರೆ‌. ಅಷ್ಟು ಮಾತ್ರವಲ್ಲ ಮಾದಕ ವಸ್ತುಗಳ ಚಟಗಳಿಗೆ ಮಕ್ಕಳು ಹೇಗೆ ತೊಡಗಿಸಿಕೊಳ್ಳುತ್ತಾರೆ. ಮತ್ತು ಅದನ್ನು ಹಾಗೇ ನಿಯಂತ್ರಿಸುವ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸಿನಿಮಾ ಅರ್ಥ ಮಾಡಿಸಲು ಪ್ರಯತ್ನಿಸಿದೆ.

ಇದನ್ನೂ ಓದಿ: ನೆಲಕ್ಕುರುಳಿದ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಪ್ರತಿಮೆ

ಎಲ್ಲಾ ಬಾಲಕಲಾವಿದರು ಅತ್ಯಂತ ಸಹಜವಾಗಿ ಪಾತ್ರಗಳಿಗೆ ಜೀವತುಂಬಿದ್ದಾರೆ. ಎಲ್ಲಿಯೂ ಅನಗತ್ಯ ಎನ್ನಿಸುವ ವಿಷಯಗಳನ್ನು ತುರುಕದೆ. ಬೆಂಗಳೂರಿನಂತಹ ಮಹಾನಗರಗಳ ರೈಲ್ವೇ ನಿಲ್ದಾಣಗಳ ಸುತ್ತಮುತ್ತ ನಾವು ನೋಡುವ ಘಟನೆಗಳನ್ನೇ ಪೋಣಿಸಿ ಅವುಗಳ ಮೂಲಕ ನಮಗೇ ಹರಿವಿಲ್ಲದಂತೆ ಈ ಸಮಾಜ ಮಕ್ಕಳನ್ನ ನಡೆಸಿಕೊಳ್ಳುತ್ತಿರುವ ಅಪಾಯಕಾರಿ‌ ಮನಸ್ಥಿತಿಯನ್ನು ಅರ್ಥಮಾಡಿಸಲು ಈ ಸಿನಿಮಾ ಯಶಸ್ವಿಯಾಗಿದೆ.

ಕೇವಲ ಬಡತನ, ಆರ್ಥಿಕ ಸಂಕಷ್ಟ ಮೌಡ್ಯದ ವಿಚಾರಗಳಲ್ಲದೆ ಮಕ್ಕಳಲ್ಲಾಗುವ ಕೆಲವು ದಹಿಕ ಬದಲಾವಣೆಗಳ ಕುರಿತು, ಅವರ ಮಾನಸಿಕ ತುಮುಲಗಳನ್ನು ಅರ್ಥಮಾಡಿಕೊಳ್ಳದೆ ಸ್ವಾತಿಯಾಗಿದ್ದ ಹುಡುಗಿ, ರಾಜು ಎಂಬ ಹುಡುಗನಾಗುವ ಕಥೆಯೂ ಇದರೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಬೆಸೆದುಕೊಂಡಿದೆ.

ಇಂತಹ ಸಿನಿಮಾಗಳನ್ನು ಸಮಾಜ ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ಸಮಾದ ಸ್ವಾಸ್ಥ್ಯ ವನ್ನು ಕಾಪಾಡಬಹುದು. ಈ ಸಿನಿಮಾವನ್ನು ಪ್ರೌಢಶಾಲಾ ಹಂತದ ಮಕ್ಕಳಿಗೆ ಒಂದು ಆಂದೋಲನದ ರೂಪದಲ್ಲಿ ಪ್ರದರ್ಶಿಸಿಸುವ ಅಗತ್ಯವಿದೆ‌.

ಸೃಜನಶೀಲ, ಮತ್ತು ಸೂಕ್ಷ್ಮ ಸಂವೇದಿಯಾಗಿರುವ ನಿರ್ದೇಶಕ ಪೃಥ್ವಿ ಕೊಣನೂರು ಅವರು ಇನ್ನೂ ಹಲವು ಸಿನಿಮಾಗಳನ್ನು ಮಾಡಲಿ. ಅದಕ್ಕೆ ಎಲ್ಲರೂ ಪ್ರೋತ್ಸಾಹಿಸಿ.

ರೈಲ್ವೆ ಚಿಲ್ಡ್ರನ್ ಸಿನಿಮಾವನ್ನ ಯೂಟ್ಯೂಬ್ ನಲ್ಲಿ ನೋಡಲು ಈ ಲಿಂಕ್ ಒತ್ತಿ: https://youtu.be/xaVpTc_EEIg?si=UjuZiDtK60Rmwla-

ಇದನ್ನೂ ನೋಡಿ: ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೂ ಮತ್ತು ಹೊರಗೂ ಹೋರಾಟಗಾರರಾಗಿದ್ದರು -ಸಿಎಂ ಸಿದ್ದರಾಮಯ್ಯ Janashakthi Media

 

Donate Janashakthi Media

Leave a Reply

Your email address will not be published. Required fields are marked *