ರಾಹುಲ್ ಗಾಂಧಿ ಪ್ರಧಾನಿ ಆಗುವ ತನಕ ಸಾಲ ನೀಡುವುದಿಲ್ಲ! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರುವ ಬೋರ್ಡ್

ಧ್ಯಪ್ರದೇಶ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ನಮಗೆ ದೇವರಿದ್ದಂತೆ-ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವರಲ್ಲ ಎಂಬಿತ್ಯಾದಿ ಬರಹಗಳ ಬೋರ್ಡ್​ಗಳು ಅಂಗಡಿ ಮುಂದೆ ನೇತಾಡುತ್ತಿರುತ್ತವೆ. ಈ ಮೂಲಕ ಪರೋಕ್ಷವಾಗಿ ಸಾಲ ಕೊಡುವುದಿಲ್ಲ, ಹಣ ಕೊಟ್ಟು ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯ್ಯಬಹುದು ಎಂದು ಗ್ರಾಹಕರಿಗೆ ತಿಳಿಸಲಾಗುತ್ತದೆ.

ಇದೀಗ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಕರ್ಬಲಾ ಚೌಕ್‌ನಲ್ಲಿರುವ ಪಾನ್ ಅಂಗಡಿಯ ಮಾಲೀಕ ಮೊಹಮ್ಮದ್ ಹುಸೇನ್ ಎಂಬುವರು ಗಮನ ಸೆಳೆಯುವ ರೀತಿಯಲ್ಲಿ ಪೋಸ್ಟರ್ ಒಂದನ್ನು ಅಳವಡಿಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಗ್ರಾಹಕರಿಗೆ ಸಾಲ ನೀಡಲು ಸಾಧ್ಯವಿಲ್ಲ ಎಂದು ಬರೆದಿರುವ ಪೋಸ್ಟರ್​ನ್ನು ಅಂಗಡಿ ಮುಂದೆ ನೇತಾಡಿಸಿದ್ದಾರೆ.

ಇದನ್ನೂ ಓದಿ : RSS ಕುರಿತು ಪರೋಕ್ಷ ಹೇಳಿಕೆ : ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ ದಾಖಲು

ಮೊಹಮ್ಮದ್ ಹುಸೇನ್ ರಾಹುಲ್​ ಗಾಂಧಿಯನ್ನು ಉಲ್ಲೇಖಿಸಿ ಹಾಕಿರುವ ಪೋಸ್ಟರ್​ನ ಫೋಟೋವನ್ನು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಕಷ್ಟು ಕಮೆಂಟ್​ಗಳು ಬರುತ್ತಿವೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಭರಿತ ವ್ಯಾಖ್ಯಾನಗಳು ನಡೆಯುತ್ತಿವೆ.

ಗ್ರಾಹಕರು ಪಾನ್ ಖರೀದು ಮಾಡುತ್ತಾರೆ. ದುಡ್ಡು ಕೇಳಿದರೆ ಸಾಲ ಬರೆದಿಟ್ಟುಕೋ ಎನ್ನುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿ, ಕಳೆದ ಜನವರಿ 1ರಿಂದ ಸಾಲ ನೀಡುವುದನ್ನು ನಿಲ್ಲಿಸಿದ್ದೇನೆ ಎಂದು ಮೊಹಮ್ಮದ್ ಹುಸೇನ್ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುವ ಸಾಧ್ಯತೆ ಕಡಿಮೆ. ಪ್ರಧಾನಿ ಆಗಬಾರದೆಂದು ನಾನು ಹೇಳುತ್ತಿಲ್ಲ, ವಾಸ್ತವದಲ್ಲಿ ರಾಹುಲ್​ಗೆ ಪ್ರಧಾನಿ ಪಟ್ಟವೇರುವ ಅವಕಾಶ ಕಡಿಮೆ ಇದೆ. ಹೀಗಾಗಿ ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ ಎಂಬುದನ್ನು ಉಲ್ಲೇಖಿಸಿ ಬೋರ್ಡ್ ಅಳವಡಿಸಿದೆ ಎಂದು ಮೊಹಮ್ಮದ್ ಹುಸೇನ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *