ಫ್ಯಾಕ್ಟ್-ಚೆಕ್ : “ನಶೆಯ ಅಮಲಿನಲ್ಲಿ ರಾಹುಲ್‌ ಗಾಂಧೀ ತೂರಿದ್ದು ನಿಜವೇ?

ಕೇರಳ: ಭಾರತ್‌ ಜೋಡೋ ಯಾತ್ರ ಸಂದರ್ಭದಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ರೆಸ್ಟೋರೆಂಟ್‌ನಿಂದ ಹೊರ ಬರುತ್ತಿರುವ  ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಕಾರ್ಯಕರ್ತರು ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಾರೆ ಎಂದು ನೆಟಿಜನ್‌ಗಳು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

ವೀಡಿಯೊದಲ್ಲಿ, ಹಲವಾರು ಕಾರ್ಯಕರ್ತರು ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವಾಗ ಮಟ್ಟಿಲ ಮೇಲೆ ಎಡವುತ್ತಿರುವುದು ಕಾಣುತ್ತದೆ.  ವೀಡಿಯೊದ ಕೊನೆಯಲ್ಲಿ, ರಾಹುಲ್ ಗಾಂಧಿ ಸ್ಥಳದಿಂದ ನಿರ್ಗಮಿಸುವುದನ್ನು ಕೂಡ ನಾವು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬರು “ನಶೆಯ ಅಮಲಿನಲ್ಲಿ ಕುಡುಕರ ಯಾತ್ರೆ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ʼಲಾಜಿಕಲ್ ಇಂಡಿಯಾ ಫ್ಯಾಕ್ಟ್-ಚೆಕ್ʼ ತಂಡವು ವೈರಲ್ ಆದ ವೀಡಿಯೋವನ್ನು ಪರಿಶೀಲಿಸಿದಾಗ ಇದು ಸುಳ್ಳು ಎಂದು ತಿಳಿದು ಬಂದಿದೆ.  ವೈರಲ್ ವೀಡಿಯೊದ ಶೀರ್ಷಿಕೆಗಳಿಂದ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ  ಸೆಪ್ಟೆಂಬರ್ 17, 2022 ರಂದು ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಲಾದ ಈ  ವೀಡಿಯೋ ಕಂಡು ಬಂದಿದೆ.

“ಇಲ್ಲಿ ರಾಹುಲ್ ಗಾಂಧಿ ಚಹಾ ಕುಡಿಯಲು ಟೀ ಅಂಗಡಿಗೆ ಪ್ರವೇಶಿಸುತ್ತಿದ್ದಾರೆ. ಎಲ್ಲರೂ ರಾಹುಲ್ ಜಿ ಅವರನ್ನು ನೋಡಲು ಹೊರಗೆ ಕಾಯುತ್ತಿದ್ದಾರೆ. ಅಸ್ವಸ್ಥ ತಾಯಿ ರಾಹುಲ್ ಜಿ ಅವರನ್ನು ನೋಡಲು ಮೈಲುಗಳಷ್ಟು ದೂರದಿಂದ ಪ್ರಯಾಣಿಸಿ ಬಂದಿದ್ದಾರೆ.” ಎಂದು ಫೇಸ್ ಬುಕ್ ನಲ್ಲಿ ಈ ವೀಡಿಯೋವನ್ನು ಶೇರ್‌ ಮಾಡಲಾಗಿದೆ.

ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಯಾತ್ರೆಯಿಂದ ವಿರಾಮ ತೆಗೆದುಕೊಂಡು ಚಹಾ ವಿರಾಮಕ್ಕೆ ನಿಂತಿದ್ದಾರೆ   ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಹೇಳಿದ್ದು, ವೀಡಿಯೋ ಮದ್ಯದಲ್ಲಿ ಮಲಬಾರ್‌ ಎಂಬ ಹೋಟಲ್‌ ನ ಹೆಸರನ್ನು ಸಹ ನಾವು ಗಮನಿಸಬಹುದು. ರಾಹುಲ್‌ ಗಾಂದಿ ಯವರು ಟೇಬಲ್‌ ಬಳಿ ಕೂತು ಸದಸ್ಯರೊಂದಿಗೆ ಮಾತನಾಡುತ್ತಿರುವ ಫೋಟೋಗಳು ಸಹ ಜಾಲತಾಣಗಳಲ್ಲಿ ಅಂಚಿಕೊಳ್ಳಲಾಗಿದೆ.

ಫೋಟೋಗಳು ಸಹ ಅದೇ ಹೋಟಲ್‌ ನಲ್ಲಿ ತೆಗದಿರುವುದು ಎಂದು ತಿಳಿದು ಬಂದಿದೆ. ಹೀಗಾಗಿ ವೈರಲ್‌ ಆಗಿರುವ ವೀಡಿಯೋದಲ್ಲಿ ಕಂಗ್ರೇಸ್ ಕಾರ್ಯಕರ್ತರು ಕುಡಿದಿಲ್ಲ ಎಂದು ನಾವು ಇಲ್ಲಿ ಕಚಿತ ಪಡಿಸಿಕೊಳ್ಳಬಹುದು.

Donate Janashakthi Media

Leave a Reply

Your email address will not be published. Required fields are marked *