ಲಕ್ನೋ : ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ನಡೆದ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿದ ಘಟನೆಗೆ ಸಾಕ್ಷಿಯಾದ ಉ.ಪ್ರ,ದ ಲಖಿಂಪುರ ಖೇರಿಗೆ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬುಧವಾರ ರಾತ್ರಿ ತಲುಪಿದ್ದಾರೆ.ಅಲ್ಲಿ ಅವರು ಮೃತಪಟ್ಟ ರೈತ 19 ವರ್ಷದ ಲವಪ್ರೀತ್ ಸಿಂಗ್ ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ನೀಡಿದ್ದಾರೆ.
‘ಕೇಂದ್ರ ಹಾಗೂ ಯುಪಿ ಸರ್ಕಾರದ ವಿರುದ್ಧ’ ವಾಗ್ದಾಳಿ ನಡೆಸಿದ್ರು. ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಹೋರಾಟ ಇಲ್ಲಿಗೆ ನಿಲ್ಲಲ್ಲ ಅನ್ನೋ ಎಚ್ಚರಿಕೆಯನ್ನೂ ರಾಹುಲ್ ಗಾಂಧಿ ನೀಡಿದ್ದಾರೆ.
शहीद सरदार नच्छतर सिंह के परिवारजनों से मिला, शोक संवेदनाएँ व्यक्त की।#लखीमपुर_नरसंहार के इन पीड़ित परिवारों ने दोहरी क्षति झेली है- अपनों को खोने का दुख तो है ही साथ में सरकार भी लगातार वार कर रही है।
लेकिन क्रूरता की इस रात की सुबह ज़रूर होगी।#NyayHokarRahega pic.twitter.com/A1tXRdqPlJ
— Rahul Gandhi (@RahulGandhi) October 6, 2021
ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಹತ್ಯೆಯಾದ ಕುಟುಂಬಸ್ಥರನ್ನ ಭೇಟಿಯಾಗಿದ್ದೇನೆ. ಅವರ ನೋವಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಈ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತಿದೆ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ನಿಯೋಗದಲ್ಲಿ ರಾಹುಲ್-ಪ್ರಿಯಾಂಕಾಗೆ ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಸಾಥ್ ನೀಡಿದ್ದರು.
‘ಸುಪ್ರಿಂ’ ನಲ್ಲಿ ಇಂದು ವಿಚಾರಣೆ : ಲಖೀಂಪುರ್ ಖೇರಿ ಹಿಂಸಾಚಾರದ ಬಗ್ಗೆ ಇಂದು ಸುಪ್ರಿಂ ಕೋರ್ಟ್ ಸುಮೋಟೋ ಕೇಸ್ನ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸುಪ್ರಿಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಹಿಂಸಾಚಾರ ಬಗ್ಗೆ ಸುಮೋಟೋ ಕೇಸ್ನ ವಿಚಾರಣೆಯನ್ನು ಇಂದು ಸುಪ್ರಿಂ ಕೋರ್ಟ್ನ ಮುಖ್ಯನ್ಯಾಯಮೂರ್ತಿಗಳ ಪೀಠ ಕೈಗೆತ್ತಿಕೊಳ್ಳಲಿದೆ. ಈ ಬೆಳವಣಿಗೆ ಸಾಕಷ್ಟೂ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಇಂದಿನ ಸುಪ್ರಿಂ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.