ಆರ್‌. ಮಾಧವನ್ FTII ಸೊಸೈಟಿಯ ಅಧ್ಯಕ್ಷ: ಕೇಂದ್ರ ಸರ್ಕಾರ ಘೋಷಣೆ

ಪುಣೆ: ನಟ ಆರ್‌. ಮಾಧವನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಶುಕ್ರವಾರ  ನೇಮಿಸಿದೆ. ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ್ ಕಪೂರ್ ಅವರ ಅಧಿಕಾರಾವಧಿಯು 2023 ಮಾರ್ಚ್ 3 ರಂದು ಕೊನೆಗೊಂಡಿತ್ತು.

“ಶ್ರೀ ಆರ್‌. ಮಾಧವನ್ ಅವರನ್ನು ಎಫ್‌ಟಿಐಐ ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ಸಚಿವಾಲಯವು ನಮಗೆ ಔಪಚಾರಿಕವಾಗಿ ತಿಳಿಸಲಾಗಿದೆ” ಎಂದು ಎಫ್‌ಟಿಐಐ ರಿಜಿಸ್ಟ್ರಾರ್ ಸಯ್ಯದ್ ರಬೀಹಶ್ಮಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ | ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ವಿರುದ್ಧ ಎಫ್‌ಐಆರ್‌

ಎಫ್‌ಟಿಐಐ ಅಧ್ಯಕ್ಷರ ನೇತೃತ್ವದ ಎಫ್‌ಟಿಐಐ ಸೊಸೈಟಿಯು 12 ನಾಮನಿರ್ದೇಶಿತರನ್ನು ಹೊಂದಿದ್ದು, ಅವರಲ್ಲಿ ಎಂಟು ಮಂದಿ ‘ಪರ್ಸನ್ಸ್ ಆಫ್ ಎಮಿನೆನ್ಸ್’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ನಾಲ್ವರು ಎಫ್‌ಟಿಐಐ ಹಳೆಯ ವಿದ್ಯಾರ್ಥಿಗಳಾಗಿರುತ್ತಾರೆ.

ಸಂಸ್ಥೆಯ ಅಧ್ಯಕ್ಷರನ್ನು ನೇಮಿಸುವಾಗ ಸಚಿವಾಲಯವು ಸಾಮಾನ್ಯವಾಗಿ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತದೆ. ಆದರೆ ಈ ಸಂಪ್ರಾದಾಯವನ್ನು 2017ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ತೊರೆದಿತ್ತು. ಅಂದು ನಟ ಅನುಪಮ್ ಖೇರ್ ಅವರನ್ನು ನೇರವಾಗಿ ಅಧ್ಯಕ್ಷರನ್ನಾಗಿ ನೇಮಿಸಿತ್ತು.

ಮಾಧವನ್ ಅವರು ‘3 ಈಡಿಯಟ್ಸ್’, ‘ತನು ವೆಡ್ಸ್ ಮನು’ ಮತ್ತು ‘ರಂಗ್ ದೇ ಬಸಂತಿ’ಯಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿಯು ಗುರುತಿಸಿಕೊಂಡಿದ್ದಾರೆ. ಈ ಚಿತ್ರವು ಕಳೆದ ವಾರ ಘೋಷಿಸಲಾದ 69 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.

ವಿಡಿಯೊ ನೋಡಿ: ಇಕ್ರಲಾ ವದೀರ್ಲಾ : ಕವಿ – ಸಿದ್ದಲಿಂಗಯ್ಯ, ಪ್ರಸ್ತುತಿ : ಜಂಗಮಪದ Janashakthi Media

Donate Janashakthi Media

Leave a Reply

Your email address will not be published. Required fields are marked *