ಹೈದರಾಬಾದ್ : ಮೋದಿಗೆ ಎಲ್ಲವೂ ರಾಜಕೀಯ.ರಾಜಕೀಯಕ್ಕಾಗಿ ಮಾತ್ರ ಅವರ ಚಿಂತನೆ. ಮೋದಿಯವರ ಚಿಂತನೆ ದೇಶದ ಬಗ್ಗೆ ಸರಿಯಿಲ್ಲ. ಹಾಗಾಗಿ ದೇಶ ಈಗ ಬಿಜೆಪಿ ಇಲ್ಲದೆ, ಮೋದಿ ಇಲ್ಲದೆ ಬದುಕಬೇಕಾಗಿದೆ. ಏನೇ ಕೇಳಿದರೂ ಎಲ್ಲದಕ್ಕೂ ಜೈ ಶ್ರೀರಾಮ್ ಎಂದು ಮೋದಿ ಉತ್ತರಿಸುತ್ತಾರೆ. ಪುಲ್ವಾಮಾ ಘಟನೆ ನಡೆಯುವುದಕ್ಕೆ ಮೋದಿಯೆರ ಕಾರಣ. ಮೋದಿ ವಿಫಲರಾಗಿದ್ದಾರೆ. ”
ಮೋದಿಗೆ ಎಲ್ಲವೂ ರಾಜಕೀಯ.ಅವರು ಮಾಡುವುದೆಲ್ಲವೂ ಚುನಾವಣೆಯ ದೃಷ್ಟಿಯಿಂದ ಮಾತ್ರ.ಚುನಾವಣೆ ಗೆಲ್ಲಲು ಅವರು ಏನು ಬೇಕಾದರೂ ಮಾಡುತ್ತಾರೆ.ಚುನಾವಣೆಗಾಗಿ ಅವರು ಏನೂ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಪುಲ್ವಾಮಅ ಘಟನೆಯೇ ಸಾಕ್ಷಿ.
ಇದನ್ನು ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ : ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ
ಐಬಿಐ ಏನು ಮಾಡುತ್ತಿದೆ?ಗುಪ್ತಚರ ದಳ ಏನು ಮಾಡುತ್ತಿದೆ?ಎಂದು ಪ್ರಶ್ನಿಸಿದ ರೇವಂತ ರೆಡ್ಡಿ, ಪುಲ್ವಾಮಾ ಘಟನೆಯ ಬಳಿಕ ಸರ್ಜಿಜಲ್ ಸ್ಟ್ರೈಕ್‌ನಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಮೋದಿ ಪ್ರಯತ್ನಿಸಿದರು.ಇಷ್ಟೆಲ್ಲಾ ಆಗುತ್ತಿದ್ದಾಗ ಮೋದಿ ಏನು ಮಾಡುತ್ತಿದ್ದರು? ಪುಲ್ವಾಮಾ ಘಟನೆ ಏಕಾಯಿತು?ದೇಶದ ಆಂತರಿಕ ರಕ್ಷಣೆಗಾಗಿ ಮೋದಿ ಏನು ಮಾಡುತ್ತಿದ್ದರು? ಆರ್‌ಬಿ, ರಾ ಏಜೆನ್ಸಿಗಳನ್ನು ಮೋದಿ ಏಕೆ ಬಳಸಿಕೊಳ್ಳಲಿಲ್ಲ? ಎಂದು ಮೋದಿ ಅವರನ್ನುದ್ದೇಶಿಸಿ ಪ್ರಶ್ನಿಸಿದರು.
ಸರ್ಜಿಕಲ್ ಸ್ಟ್ರೈಕ್ ಆಗಿತ್ತೋ ಇಲ್ಲವೋ ಎನ್ನುವುದೂ ಇದೂವರೆಗೂ ಯಾರಿಗೂ ಸರಿಯಾಗಿ ಗೊತ್ತಿಲ್ಲ.ಇದಕ್ಕಾಗಿ ದೇಶದ ಆಂತರಿಕ ಸುರಕ್ಷೆ ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ.ನಾವು ದೇಶವನ್ನು ಯಾರದ್ದೋ ಕೈಯಲ್ಲಿ ಇಡಬಾರದು ಎಂದು ರೇವಂತ್ ರೆಡ್ಡಿ ಮಾರ್ಮಿಕವಾಗಿ ಹೇಳಿದರು.
ಇದನ್ನು ನೋಡಿ : ಲಾ ಪತಾ ಚುನಾವಣಾ ಆಯೋಗ: ಬೆನ್ನೆಲುಬು ಇಲ್ಲದ ಆಯುಕ್ತರು Janashakthi Media