ಎಸ್‌ಐಆರ್‌: ‘ತಾರ್ಕಿಕ ವ್ಯತ್ಯಾಸ’ ನೋಟಿಸ್ ಪಡೆದವರ ಹೆಸರುಗಳನ್ನು ಪ್ರಕಟಿಸಿ – ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯಿಂದಾಗಿ ಜನರು ‘ಒತ್ತಡ’ದಲ್ಲಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗವು ಅರ್ಥ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಜನವರಿ 19ರಂದು ಹೇಳಿದ್ದೂ, ‘ತಾರ್ಕಿಕ ವ್ಯತ್ಯಾಸಗಳ’ ವರ್ಗದಡಿ ನೋಟಿಸ್‌ಗ ಳನ್ನು ಪಡೆದಿರುವವರ ಹೆಸರುಗಳನ್ನು ಬಿಡುಗಡೆ ಮಾಡುವಂತೆ ಆಯೋಗಕ್ಕೆ ಆದೇಶಿಸಿದೆ.

ಮ್ಯಾಪಿಂಗ್ ಮಾಡಲಾಗಿರುವ, ಮ್ಯಾಪಿಂಗ್ ಮಾಡದಿರುವ ಮತ್ತು ತಾರ್ಕಿಕ ವ್ಯತ್ಯಾಸಗಳನ್ನು ಹೊಂದಿರುವ: ಹೀಗೆ ಮೂರು ವರ್ಗಗಳ ಮತದಾರರಿಗೆ ಆಯೋಗವು ನೋಟಿಸ್‌ಗಳನ್ನು ನೀಡಿದೆ.

ಇದನ್ನೂ ಓದಿ: ಮೈಸೂರು | ಜಂಟಿ ಅಧಿವೇಶನ ಕಡ್ಡಾಯ ಕರೆಯಲು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮ್ಯಾಪಿಂಗ್ ಮಾಡಲಾಗಿರುವ ವರ್ಗವು ಮತದಾರರ ದತ್ತಾಂಶಗಳಿಗೆ ದಾಖಲೆಗಳನ್ನು ಲಿಂಕ ಮಾಡಿರುವ, ಆದರೆ ಹೆಚ್ಚಿನ ಪರಿಶೀಲನೆಯ ಅಗತ್ಯವಿರುವವರನ್ನು ಒಳಗೊಂಡಿದ್ದರೆ, ಮ್ಯಾಪಿಂಗ್ ಮಾಡದಿರುವ ವರ್ಗವು ಚುನಾವಣಾ ದತ್ತಾಂಶಗಳೊಂದಿಗೆ ದಾಖಲೆಗಳು ಲಿಂಕ್ ಆಗಿರದ ಮತದಾರರನ್ನು ಒಳಗೊಂಡಿದೆ. ಹಿಂದಿನ ಎಸ್ಐಆರ್‌ ಮತದಾರರ ಪಟ್ಟಿಗಳಿಗೆ ಹೋಲಿಸಿದರೆ ಪೋಷಕರ ಹೆಸರುಗಳೊಂದಿಗೆ ಹೊಂದಾಣಿಕೆಯಾಗದ, ವಿಭಿನ್ನ ಕಾಗುಣಿತಗಳು, ವಯಸ್ಸಿನ ಅಂತರ ಇತ್ಯಾದಿಗಳು ಕಂಡು ಬಂದಿರುವ ಅನುಮಾನಾಸ್ಪದ ಮತದಾರರನ್ನು ‘ತಾರ್ಕಿಕ ವ್ಯತ್ಯಾಸಗಳ’ ವರ್ಗದಲ್ಲಿ ಸೇರಿಸಲಾಗಿದೆ.

ಎಸ್ಐಆರ್ ವಿಚಾರಣೆಗಳ ಸಂದರ್ಭದಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಬೇಕು ಮತ್ತು ಸ್ಥಳಿಯ ಅಧಿಕಾರಿಗಳು ಜನರಿಂದ ಸ್ವೀಕರಿಸಿದ ದಾಖಲೆಗಳಿಗೆ ರಸೀದಿಗಳನ್ನು ನೀಡಬೇಕು. ಆಕ್ಷೇಪಣೆಗಳ ಕುರಿತು ಅಂತಿಮ ನಿರ್ಧಾರಕ್ಕೆ ಕಾರಣಗಳನ್ನು ಹಂಚಿಕೊಳ್ಳಬೇಕು ಎಂದೂ ನ್ಯಾಯಾಲಯವು ಚು.ಆಯೋಗಕ್ಕೆ ತಾಕೀತು ಮಾಡಿದೆ.

ತಾರ್ಕಿಕ ವ್ಯತ್ಯಾಸಗಳ ವರ್ಗದಡಿ ನೋಟಿಸ್ ನೀಡಲಾಗಿರುವ 1.25 ಕೋಟಿ ಜನರ ಹೆಸರುಗಳನ್ನು ಬಿಡುಗಡೆ ಮಾಡುವಂತೆ ಚು.ಆಯೋಗಕ್ಕೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು, ಈ ಹೆಸರುಗಳನ್ನು ಗ್ರಾಮ ಪಂಚಾಯತಿಗಳು,ಬ್ಲಾಕ್ ಕಚೇರಿಗಳು ಮತ್ತು ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಹಾಗೂ ನೋಟಿಸ್ ಪಡೆದವರಿಗೆ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಸೂಚಿಸಿದೆ.

ಇದನ್ನೂ ನೋಡಿ: ಸಂಕ್ರಾಂತಿ ಕವಿಗೋಷ್ಠಿ | ಕಾವ್ಯಗಳ ಹುಗ್ಗಿಯ ಸಂಭ್ರಮ Janashakthi Media

Donate Janashakthi Media

Leave a Reply

Your email address will not be published. Required fields are marked *