ಜಮ್ಮು ಮತ್ತು ಕಾಶ್ಮೀರ: ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಮೇಲೆ ನಿರೀಕ್ಷೆ ಇಟ್ಟಿದೆ. ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇನ್ನೊಂದು ಕಡೆ ಜಮ್ಮು ಮತ್ತು ಕಾಶ್ಮೀರದಲ್ಲಿ 3 ಹಂತದಲ್ಲಿ ಸೆಪ್ಟೆಂಬರ್ 08, 25 ಹಾಗೂ ಅಕ್ಟೋಬರ್ 01 ರಂದು ಚುನಾವಣೆ ನಡೆದಿತ್ತು. ಅಲ್ಲಿನ ಮತದಾರನ ಮನದಾಳ ಹೇಗಿದೆ? ಯಾರ ಪರ ಅಲೆಯಿದೆ? ಇಲ್ಲಿದೆ ಎಕ್ಸಿಟ್ ಪೋಲ್‌ನ ಸಂಪೂರ್ಣ ಮಾಹಿತಿ.
ಕಾಶ್ಮೀರದಲ್ಲಿ ಎನ್‌ಸಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಭವಿಷ್ಯ ನುಡಿದಿದೆ.
ಜಮ್ಮು ಕಾಶ್ಮೀರ ಒಟ್ಟು 90 ಸ್ಥಾನಗಳು
ಜಮ್ಮು ಕಾಶ್ಮೀರ ಒಟ್ಟು 90 ಸ್ಥಾನಗಳು
ಸಿ-ವೋಟರ್-ಇಂಡಿಯಾ ಟುಡೇ
ಎನ್‌ಸಿ-ಕಾಂಗ್ರೆಸ್ 40-48 ಸ್ಥಾನಗಳು
ಬಿಜೆಪಿ 27-32 ಸ್ಥಾನಗಳು
ಇದನ್ನೂ ಓದಿ: ಬೆಂಗಳೂರು ಮಳೆ: ನಗರದಲ್ಲಿ ರಸ್ತೆಗಳು ಹೊಳೆ; 36 ಮಿ.ಮೀ. ಮಳೆ ದಾಖಲು
ದೈನಿಕ್ ಭಾಸ್ಕರ್
ಎನ್‌ಸಿ-ಕಾಂಗ್ರೆಸ್ 35-40 ಸ್ಥಾನಗಳು
ಬಿಜೆಪಿ 20-25 ಸ್ಥಾನಗಳು
ಎನ್‌ಸಿ-ಕಾಂಗ್ರೆಸ್ 46-50 ಸ್ಥಾನಗಳು
ಬಿಜೆಪಿ 23-27 ಸ್ಥಾನಗಳು
ರಿಪಬ್ಲಿಕ್-ಗುಲಿಸ್ತಾನ್
ಎನ್‌ಸಿ-ಕಾಂಗ್ರೆಸ್ 31-36 ಸ್ಥಾನಗಳು
ಬಿಜೆಪಿ 28-30 ಸ್ಥಾನಗಳು.
ಹರ್ಯಾಣದಲ್ಲಿ ಕಾಂಗ್ರೆಸ್‌ಗೆ, ಜಮ್ಮು ಕಾಶ್ಮೀರದಲ್ಲಿ ಎನ್‌ಸಿಗೆ ಗೆಲುವು
ಹರ್ಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳಿಗೆ ನಡೆಸಲಾದ ಎಕ್ಸಿಟ್ ಪೋಲ್‌ಗಳು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವನ್ನು ನೀಡಿವೆ. ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿಕೂಟಕ್ಕೆ ಗೆಲುವು ಎಂದು ಅಂದಾಜಿಸಿವೆ.
ಹರ್ಯಾಣದಲ್ಲಿ ಎಕ್ಸಿಟ್ ಪೋಲ್ ಸರ್ವೆ
ಹರ್ಯಾಣ – ಒಟ್ಟು 90 ಸ್ಥಾನಗಳು
ದೈನಿಕ್ ಭಾಸ್ಕರ್
ಕಾಂಗ್ರೆಸ್ 44-54 ಸ್ಥಾನಗಳು
ಬಿಜೆಪಿ 15-29 ಸ್ಥಾನಗಳು
ರಿಪಬ್ಲಿಕ್-ಮ್ಯಾಟ್ರಿಜ್
ಕಾಂಗ್ರೆಸ್ 55-62 ಸ್ಥಾನಗಳು
ಬಿಜೆಪಿ 18-24 ಸ್ಥಾನಗಳು
ರೆಡ್ ಮೈಕ್-ದತಾಂಶ
ಕಾಂಗ್ರೆಸ್ 50-55 ಸ್ಥಾನಗಳು
ಬಿಜೆಪಿ 20-25 ಸ್ಥಾನಗಳು
ಪೀಪಲ್ಸ್ ಪಲ್ಸ್
ಕಾಂಗ್ರೆಸ್ 49-60 ಸ್ಥಾನಗಳು
ಬಿಜೆಪಿ 20-32 ಸ್ಥಾನಗಳು
ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಸಚಿನ್ ಪೈಲಟ್ ಭರವಸೆ
ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನಾನು ಭರವಸೆ ಹೊಂದಿದ್ದೇನೆ. ಜನರು ನಮ್ಮ ಪ್ರಚಾರಗಳು, ಪ್ರಣಾಳಿಕೆ ಮತ್ತು ಭರವಸೆಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಏಳು ಭರವಸೆಗಳು ಮತ್ತು ನಾವು ಜನರಿಗೆ ಏನು ನೀಡುತ್ತಿದ್ದೇವೆ ಎಂಬುದರ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿರುತ್ತೇವೆ. 10 ವರ್ಷಗಳಿಂದ, ಸಾರ್ವಜನಿಕರು ಬಿಜೆಪಿಯ ಕಾರ್ಯಕ್ಷಮತೆಯನ್ನು ನೋಡಿದ್ದಾರೆ. ಎಲ್ಲರೂ ಪರಿವರ್ತನೆಯತ್ತ ಒಲವು ತೋರುತ್ತಿದ್ದಾರೆ. ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದೆ. ಹಾಗಾಗಿ ನಾವು (ಹರಿಯಾಣದಲ್ಲಿ) ಸರ್ಕಾರ ರಚಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ: ರಿಪಬ್ಲಿಕ್-ಮ್ಯಾಟ್ರಿಜ್ ಸರ್ವೆ
ರಿಪಬ್ಲಿಕ್-ಮ್ಯಾಟ್ರಿಜ್ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ 55-62 ಸ್ಥಾನಗಳನ್ನು ಮತ್ತು ಬಿಜೆಪಿಗೆ 18-24 ಸ್ಥಾನಗಳನ್ನು ನಿರೀಕ್ಷಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ 35-45 ಸ್ಥಾನ: ಆಕ್ಸಿಸ್ ಮೈ ಇಂಡಿಯಾ
ಆಕ್ಸಿಸ್ ಮೈ ಇಂಡಿಯಾ
ಜಮ್ಮು ಕಾಶ್ಮೀರ – 90
ಕಾಂಗ್ರೆಸ್ 35- 45
ಬಿಜೆಪಿ 24-34
ಪಿಡಿಪಿ 4-6
ಎಐಪಿ 3-8
ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯತೆ: ಪೀಪಲ್ಸ್ ಪಲ್ಸ್ ಸರ್ವೆ
90 ಸ್ಥಾನಗಳ ಬಲಾಬಲವನ್ನು ಹೊಂದಿರುವ ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 55 ಸ್ಥಾನಗಳನ್ನು ಗೆದ್ದು ಗೆಲುವು ಸಾಧಿಸಲಿದೆ: ಪೀಪಲ್ಸ್ ಪಲ್ಸ್ ಸರ್ವೆ
ಕಾಶ್ಮೀರದಲ್ಲಿ ಬಿಜೆಪಿ 23 ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ
ಕಾಶ್ಮೀರದಲ್ಲಿ ಬಿಜೆಪಿ 23 ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಎರಡನೇ ದೊಡ್ಡ ಪಕ್ಷವಾಗಲಿದೆ: ಪೀಪಲ್ಸ್ ಪಲ್ಸ್
ಜಮ್ಮು ಕಾಶ್ಮೀರದಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಇಲ್ಲ
ಪೀಪಲ್ಸ್ ಪಲ್ಸ್ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಒಂದು ಪಕ್ಷವು ತನ್ನದೇ ಆದ ಬಹುಮತವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟಕ್ಕೆ 40-48 ಸ್ಥಾನ
ಇಂಡಿಯಾ ಟುಡೇ-ಸಿವೋಟರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟಕ್ಕೆ 40-48 ಸ್ಥಾನಗಳನ್ನು ನಿರೀಕ್ಷಿಸಿದೆ.
ಹರಿಯಾಣದಲ್ಲಿ ಕಾಂಗ್ರೆಸ್ 51-61 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ: ರಿಪಬ್ಲಿಕ್ ಟಿವಿ ಪಿ-ಮಾರ್ಕ್ ಎಕ್ಸಿಟ್ ಪೋಲ್
ಹರಿಯಾಣದಲ್ಲಿ ಕಾಂಗ್ರೆಸ್ 51-61 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಬಿಜೆಪಿ 27-35 ನಡುವೆ ಗೆಲ್ಲುತ್ತದೆ ಎಂದು ರಿಪಬ್ಲಿಕ್ ಟಿವಿ ಪಿ-ಮಾರ್ಕ್ ಎಕ್ಸಿಟ್ ಪೋಲ್ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಟುಡೇ ಪ್ರಕಾರ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ
ಇಂಡಿಯಾ ಟುಡೇ
ಜಮ್ಮು ಕಾಶ್ಮೀರ ಒಟ್ಟು ಸ್ಥಾನ 90
ನ್ಯಾಷನಲ್ ಕಾಂಗ್ರೆಸ್ 40- 48
ಬಿಜೆಪಿ 27- 32
ಪಿಡಿಪಿ 6-12
ಇತರೆ 6-11
ದೈನಿಕ್ ಭಾಸ್ಕರ್: ಕಾಂಗ್ರೆಸ್ 44-54 ಸ್ಥಾನ ಪಡೆಯುವ ಸಾಧ್ಯತೆ
ದೈನಿಕ್ ಭಾಸ್ಕರ್ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್ 10 ವರ್ಷಗಳ ನಂತರ 44-54 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ ಮತ್ತು ಬಿಜೆಪಿ 19-29 ಸ್ಥಾನಗಳ ನಡುವೆ ಸೀಮಿತವಾಗಬಹುದು.
ಮ್ಯಾಟ್ರಿಜ್ ಸರ್ವೆ: ಜಮ್ಮು ಕಾಶ್ಮೀರ
ಮ್ಯಾಟ್ರಿಜ್ ಸರ್ವೆ
ಜಮ್ಮು ಕಾಶ್ಮೀರ: ಒಟ್ಟು ಸ್ಥಾನ 90
ಮ್ಯಾಜಿಕ್ ನಂಬರ್ 46
ಕಾಂಗ್ರೆಸ್ 12- 12
ಜೆಕೆಎನ್‌ಸಿ 15-15
ಇತರೆ 7-7
ಪಿಡಿಪಿ 28-28
ಬಿಜೆಪಿ 25-25
ಇದು ಪ್ರಜಾಪ್ರಭುತ್ವದ ಮಹಾ ಹಬ್ಬ
ಇದು ಪ್ರಜಾಪ್ರಭುತ್ವದ ಮಹಾ ಹಬ್ಬ. ಅಧಿಕಾರವನ್ನು ಯಾರಿಗೆ ಕೊಡಬೇಕೆಂದು ಜನ ನಿರ್ಧರಿಸುತ್ತಾರೆ. ಸಬ್ ಕ ಸಾಥ್, ಸಬ್ ಕ ವಿಶ್ವಾಸ್ ನಮ್ಮ ಧ್ಯೇಯ: ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ
ಒಬಿಸಿ ವರ್ಗದ ನಿಲುವೇನು?
ಹರಿಯಾಣದಲ್ಲಿ ನಾಲ್ಕನೇ ಒಂದು ಭಾಗದಷ್ಟಿರುವ ಹಿಂದುಳಿದ ವರ್ಗದ ಜನ, ಚುನಾವಣೆ ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಈ ಸಮುದಾಯದ ಬೆಂಬಲ ಗಳಿಸಲು ಕಾಂಗ್ರೆಸ್-ಬಿಜೆಪಿ ಪ್ರಯತ್ನಿಸಿವೆ. ಬಿಜೆಪಿ ರಾಜಕೀಯ ನೀತಿಗಳು, ಮೋದಿಯವರ ನಾಯಕತ್ವ ವರ್ಚಸ್ಸು ಸಹಜವಾಗಿಯೇ ಒಬಿಸಿ ವರ್ಗ ಬಿಜೆಪಿಯತ್ತ ವಾಲುವಂತೆ ಮಾಡಿದೆ.
ಪ್ರಾದೇಶಿಕ ಪಕ್ಷಗಳ ಪ್ರಭಾವವೇನು?
ಗ್ರಾಮೀಣ ಭಾಗದ ಅದರಲ್ಲೂ ಜಾಟ್ ಸಮುದಾಯದ ಹಿಡಿತ ಹೊಂದಿರುವ ಪ್ರಾದೇಶಿಕ ಪಕ್ಷಗಳಾದ ರಾಷ್ಟ್ರೀಯ ಲೋಕದಳ, ಜನನಾಯಕ ಜನತಾ ಪಕ್ಷಗಳು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಲ್ಲಶಕ್ತಿ ಹೊಂದಿವೆ. ಆದರೆ, ನಗರ ಪ್ರದೇಶದಲ್ಲಿಅಷ್ಟೊಂದು ಪ್ರಭಾವ ಹೊಂದಿಲ್ಲ. ಹೀಗಾಗಿ ಬಿಜೆಪಿ-ಕಾಂಗ್ರೆಸ್ ಅನ್ನು ಮಣಿಸುವುದು ಸುಲಭವಲ್ಲ.
ಆಡಳಿತ ವಿರೋಧಿ ಅಲೆ ಸಾಧ್ಯತೆ
ಕೈಗಾರಿಕೆ ವಲಯ, ಉದ್ಯಮ, ವ್ಯಾಪಾರ, ಸೇವಾ ಆಧಾರಿತ ವಲಯದ ಜನ, ಹಿಂದುಳಿದ ವರ್ಗಕ್ಕೆ ಸೇರಿದ ಬಹುತೇಕ ಜನರು ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದಾರೆ. ಮೋದಿ ಅವರ ಪ್ರಭಾವ, ಅವರು ಪ್ರತಿಪಾದಿಸಿದ ರಾಷ್ಟ್ರೀಯತೆ, ದೇಶಭಕ್ತಿ ವಿಚಾರಗಳು ಈ ವರ್ಗದ ಮತದಾರರನ್ನು ಬಿಜೆಪಿ ಕಡೆ ವಾಲುವಂತೆ ಮಾಡಿದೆ. ಆದರೂ, ಆಡಳಿತ ವಿರೋಧಿ ಅಲೆ ಬಿಜೆಪಿ ನಾಯಕರನ್ನು ಇನ್ನಿಲ್ಲದಂತೆ ಕಾಡಿರುವುದು ಮಾತ್ರ ಸುಳ್ಳಲ್ಲ.
ಚುನಾವಣಾ ವಿಷಯವೇನು?
ಬಹುತೇಕ ಕೃಷಿಯನ್ನೇ ಅವಲಂಬಿಸಿರುವ (ಜಾಟ್ ಬಾಹುಳ್ಯ ಪ್ರದೇಶ) ಈ ಭಾಗದಲ್ಲಿ ರದ್ದುಗೊಂಡಿರುವ ವಿವಾದಿತ ಕೃಷಿ ಕಾನೂನುಗಳು, ಸೇನೆಯ ಅಗ್ನಿವೀರ್ ಯೋಜನೆ, ಕುಸ್ತಿಪಟುಗಳ ಹೋರಾಟ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳು ಚುನಾವಣಾ ಕಣದಲ್ಲಿ ಸದ್ದು ಮಾಡಿವೆ.
ಕೈಗಾರಿಕೆಯಲ್ಲಿ ಮುನ್ನಡೆ
ದಕ್ಷಿಣ ಭಾಗದ ಗುರುಗ್ರಾಮ, ಫರೀದಾಬಾದ್, ಅಂಬಾಲ, ಉತ್ತರ ಭಾಗದ ಪಾಣಿಪತ್, ಕುರುಕ್ಷೇತ್ರ ಕೈಗಾರಿಕೆಯಲ್ಲಿ ಮುನ್ನಡೆ ಸಾಧಿಸಿದ್ದು, ರಾಜ್ಯದ ಆರ್ಥಿಕತೆ ಮೇಲೆ ಪ್ರಭಾವ ಬೀರಿವೆ. ಉದ್ಯಮಿಗಳು, ವ್ಯಾಪಾರಿಗಳು, ಮಧ್ಯಮ ವರ್ಗದ ಬಹುತೇಕ ಜನ ಕೃಷಿಯೇತರ ವರ್ಗಕ್ಕೆ ಸೇರಿದವರಾಗಿದ್ದಾರೆ.
ಗ್ರಾಮೀಣ-ನಗರ ನಡುವೆ ವಿಭಜನೆ
ಪ್ರಸಕ್ತ ಚುನಾವಣೆಯಲ್ಲಿ ಹರಿಯಾಣದಲ್ಲಿ ನಗರ ಹಾಗೂ ಗ್ರಾಮೀಣ ವಿಭಜನೆ ಢಾಳಾಗಿ ಕಾಣಿಸುತ್ತಿದೆ. ಭೌಗೋಳಿಕ, ಆರ್ಥಿಕ ವಿಭಜನೆ ಸಮಾಜದಲ್ಲಿ ಗೋಚರಿಸಿದೆ.
ಹರ್ಯಾಣದಲ್ಲಿ ರೈತ ಹೋರಾಟಗಳು ಚುನಾವಣೆಗೆ ಹೊಸ ರೂಪ ನೀಡಿವೆ
90 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿದೆ. ಜಾತಿ ಸಮೀಕರಣ, ರಾಜಕೀಯ ಪಕ್ಷಗಳ ಆಂತರಿಕ ಕಲಹ, ಕುಸಿದ ಪ್ರಾದೇಶಿಕ ಮಟ್ಟದ ನಾಯಕರ ಪ್ರಭಾವದ ನಡುವೆ ಸಾಮಾಜಿಕ ಚಳವಳಿ, ರೈತ ಹೋರಾಟಗಳು ಚುನಾವಣೆಗೆ ಹೊಸ ರೂಪ ನೀಡಿವೆ.
ಇದನ್ನೂ ನೋಡಿ: ಮೀಸಲಾತಿ ವಿರುದ್ಧ ಬಿಜೆಪಿ, ಸಂಘಪರಿವಾರ ಮಾಡುತ್ತಿರುವ ಷಡ್ಯಂತ್ರ ಎಲ್ಲರಿಗೂ ತಿಳಿದಿದೆ Janashakthi Media